Advertisement

6 ತಿಂಗಳ ಬಳಿಕ ಅಮೇರಿಕಾದಲ್ಲಿ ಒಂದೇ ದಿನ 2,146 ಮಂದಿ ಕೋವಿಡ್ ಸೋಂಕಿಗೆ ಬಲಿ

03:22 PM Nov 25, 2020 | sudhir |

ವಾಷಿಂಗ್ಟನ್ : ಅಮೇರಿಕಾದಲ್ಲಿ ಒಂದೇ ದಿನ 2,146 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ, ಇಷ್ಟು ಸಮಯ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣವನ್ನು ಹೊಂದಿದ್ದ ಅಮೇರಿಕಾ ಈಗ ಸಾವಿನ ಪ್ರಮಾಣದಲ್ಲೂ ದಾಖಲೆ ಮಾಡಿದೆ.

Advertisement

ಕೋವಿಡ್ ಪ್ರಕರಣಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದ ಅಮೇರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿತ್ತು ಎನ್ನಲಾಗಿದೆ. ಕಳೆದ ಆರು ತಿಂಗಳಲ್ಲಿ ಇದೆ ಮೊದಲ ಬಾರಿಗೆ ಒಂದು ದಿನದಲ್ಲಿ ಅತೀ ಹೆಚ್ಚು ಸಾವಿನ ಪ್ರಮಾಣ ಸಂಭವಿಸಿದೆ ಎನ್ನಲಾಗಿದೆ.

ಇದುವರೆಗೆ ಅಮೇರಿಕಾದಲ್ಲಿ ಕೋವಿಡ್ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 2,59,925 ಕ್ಕೆ ಏರಿಕೆಯಾಗಿದೆ. ಅಲ್ಲದೆ ದೈನಂದಿನ ಸಾವಿನ ಸಂಖ್ಯೆ ಎರಡು ಸಾವಿರದ ಮೇಲಿರುವುದು ಇದು ಇಪ್ಪತ್ತೊಂದನೇ ಬಾರಿ ಎಂದು ಹೇಳಲಾಗಿದೆ.

ಇದನ್ನೂ ಓದಿ:ಅಶ್ಲೀಲ ಚಿತ್ರ ಸಂಗ್ರಹಿಸಿ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಕೆ ಕರೆ: ಇಬ್ಬರ ಬಂಧನ

ವರದಿಗಳ ಪ್ರಕಾರ ಮಂಗಳವಾರ ಒಂದೇ ದಿನ 1,72,935 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next