ಯುಕೆ(ಲಂಡನ್):ಯುನೈಟೆಡ್ ಕಿಂಗ್ ಡಮ್ ನಲ್ಲಿ ಕೋವಿಡ್ 19 3ನೇ ಅಲೆಯ ಸೋಂಕು ಆರಂಭವಾಗಿರುವುದಾಗಿ ಲಸಿಕೆ ತಜ್ಞರು ಎಚ್ಚರಿಸಿದ್ದು, ಸತತ ಮೂರನೇ ದಿನವಾದ ಶನಿವಾರವೂ(ಜೂನ್ 19) ಹತ್ತು ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಅನ್‌ಲಾಕ್ ಘೋಷಣೆ ಮುನ್ನ ಎಚ್ಚರವಿರಲಿ : ರಾಜ್ಯಗಳಿಗೆ ಕೇಂದ್ರ ಸರಕಾರ ಪತ್ರ
ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ, ನಾವು ಕ್ಷಿಪ್ರವಾಗಿ ಹೆಚ್ಚಳವಾಗುವುದಿಲ್ಲ ಎಂದು ಸ್ವಲ್ಪ ಮಟ್ಟಿಗೆ ಆಶಾವಾದಿಯಾಗಬಹುದು. ಆದರೆ ಅದೇನೇ ಇದ್ದರೂ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವುದು ಮೂರನೇ ಅಲೆ ಪ್ರಾರಂಭವಾಗಿದೆ ಎಂದು ತಿಳಿಯಬೇಕಾಗಿದೆ ಎಂಬುದಾಗಿ ಪ್ರೊ.ಆ್ಯಡಮ್ ಫಿನ್ ಎಚ್ಚರಿಸಿದ್ದಾರೆ.
ಕೋವಿಡ್ 19 ಲಸಿಕೆ ಕಾರ್ಯಕ್ರಮದ ವೇಗವನ್ನು ಇನ್ನಷ್ಟು ತ್ವರಿತಗೊಳಿಸಬೇಕಾಗಿದೆ ಎಂದಿರುವ ಫಿನ್, ಮುಖ್ಯವಾಗಿ ಹಿರಿಯ ವ್ಯಕ್ತಿಗಳು ಎರಡನೇ ಡೋಸ್ ಪಡೆಯಬೇಕಾಗಿದೆ. ಅಲ್ಲದೇ ಮೂರನೇ ಅಲೆಯಲ್ಲಿ ಡೆಲ್ಟಾ ರೂಪಾಂತರ ಸೋಂಕು ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.
ಯುನೈಟೆಡ್ ಕಿಂಗ್ ಡಮ್ ನಲ್ಲಿನ ಲಸಿಕಾ ಕಾರ್ಯಕ್ರಮವು ಡೆಲ್ಟಾ ರೂಪಾಂತರ ಸೋಂಕನ್ನು ತಡೆಗಟ್ಟಲಿದೆ ಎಂಬ ಬಗ್ಗೆ ವಿಶ್ವಾಸವಿಲ್ಲ, ಆದರೆ ಕೆಲವೊಂದು ಆಧಾರದ ಮೇಲೆ ಆಶಾಭಾವ ಹೊಂದಬಹುದು ಎಂದು ಭಾವಿಸಿದ್ದೇನೆ.ಅಂಕಿಅಂಶದ ಪ್ರಕಾರ ಕೋವಿಡ್ ಪ್ರಕರಣದಲ್ಲಿ ಏರಿಕೆಯಾಗುತ್ತಿದೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿದ್ದಾರೆ. ಮೂರನೇ ಅಲೆಯ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಫಿನ್ ಸಲಹೆ ನೀಡಿದ್ದಾರೆ.