ಡೆಹ್ರಾಡೂನ್ : ಕೋವಿಡ್ ಸೋಂಕಿನ ಎರಡನೇ ಅಲೆ ಹರಡುತ್ತಿರುವ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಉತ್ತರಾಖಂಡ ಸರ್ಕಾರ ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿದೆ.
ಮಹಾರಾಷ್ಟ್ರ, ಗುಜರಾತ್, ಕೇರಳ, ಮಧ್ಯ ಪ್ರದೇಶ ಹಾಗೂ ಚತ್ತೀಘಡ ದಿಂದ ಉತ್ತರಾಕಂಡಕ್ಕೆ ಬರುವ ಜನರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯವೆಂದು ಆದೇಶ ಹೊರಡಿಸಿದೆ.
ಓದಿ : ಟೂಲ್ ಕಿಟ್ ಪ್ರಕರಣ : ಪರಿಸರ ಕಾರ್ಯಕರ್ತೆ ದಿಶಾ ರವಿಗೆ ದೆಹಲಿ ಕೋರ್ಟ್ ಜಾಮೀನು..!
ಕೆಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದ ಹಿನ್ನಲೆಯಲ್ಲಿ ಉತ್ತರಾಖಂಡ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರ, ಗುಜರಾತ್, ಕೇರಳ, ಮಧ್ಯ ಪ್ರದೇಶ ಹಾಗೂ ಚತ್ತೀಘಡ ಗಡಿ ಭಾಗಗಳಲ್ಲಿ ಉತ್ತರಾಖಂಡ ಸರ್ಕಾರ ಟೆಸ್ಟಿಂಗ್ ಸೆಂಟರ್ ಗಳನ್ನು ತೆರೆದಿದೆ. ಮಾತ್ರವಲ್ಲದೇ, ರೈಲ್ವೇ ನಿಲ್ದಾಣ ಹಾಗೂ ಡೆಹ್ರಾಡೂನ್ ವಿಮಾನ ಎಂದು ಡೆಹ್ರಾಡೂನ್ ಜಿಲ್ಲಾಧಿಕಾರಿ ಎ ಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇನ್ನು, ಭಾರತವು ಕಳೆದ 24 ಗಂಟೆಗಳಲ್ಲಿ 10,584 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು ಮತ್ತು 78 ಸಾವುಗಳನ್ನು ಸಂಭವಿಸಿದೆ.
ಓದಿ : ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ ಬೆಂಗಳೂರು ಕೋರ್ಟ್