ಚಿಕ್ಕಮಗಳೂರು: ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದಿಂದ ಅನಗತ್ಯವಾಗಿ ಓಡಾಡುವವರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದ್ದು ಶನಿವಾರ ಜನರು ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಕಾಲ ಕಳೆದರು.
ಕಳೆದೆರಡು ದಿನಗಳ ಹಿಂದೇ ಜನರಿಗೆ ಲಾಠಿರುಚಿ ತೋರಿಸಿದ್ದ ಪೊಲೀಸರು ಸರ್ಕಾರದ ಆದೇಶದಂತೆ ಲಾಠಿಯನ್ನು ಠಾಣೆಯಲ್ಲೇ ಬಿಟ್ಟು ರಸ್ತೆ ಸುಖಾಸುಮ್ಮನೆಓಡಾಡುವವರಿಗೆ ಬುದ್ಧಿಮಾತು ಹೇಳಿ ಮನೆಗೆ ವಾಪಸ್ ಕಳಿಸುವುದರೊಂದಿಗೆ ಅಸಹಾಯಕರ ನೆರವಿಗೆ ನಿಲ್ಲುವ ಮೂಲಕ ಜನರ ಮೆಚ್ಚುಗೆಗೂ ಪಾತ್ರರಾದರು.
ಎಂದಿನಂತೆ ಅಗತ್ಯ ವಸ್ತುಗಳ ಮಳಿಗೆಗಳು ತೆರೆದಿದ್ದು, ಬೈಕ್ ಮತ್ತು ಕಾರುಗಳಲ್ಲಿ ತೆರಳಿ ಸಾಮಾಜಿಕ ಅಂತರ ಕಾಡಾಡಿಕೊಂಡು ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಜನಜಂಗುಳಿಯಿಂದ ತುಂಬಿದ್ದು ಹೆಚ್ಚಿನ ಜನರು ಗುಂಪು ಸೇರದಂತೆ ತಡೆಯಬೇಕೆಂಬ ಮಾತು ಕೇಳಿ ಬಂದಿದೆ.
ಗ್ರಾಮೀಣ ಪ್ರದೇಶದ ರೈತರು ತಾವು ಬೆಳೆದ ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದು, ಲಾಕ್‌ಡೌನ್ ಲಾಭ ಪಡೆಯುತ್ತಿರುವಮಧ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಗೆಖರೀದಿ ಮಾಡಿ ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ಮಧ್ಯವರ್ತಿಗಳ ಹಾವಳಿಗೆ ತಡೆ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ವಾರಾಂತ್ಯ ದಿನಗಳಲ್ಲಿ ಪ್ರವಾಸಿಗರಿಂದ
ತುಂಬಿರುತ್ತಿದ್ದ ಕಾಫಿನಾಡು ಜನರಿಲ್ಲದೇ ಬಿಕೋ ಎನ್ನುತ್ತಿದ್ದು, ದಿನಸಿ ಅಂಗಡಿ, ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಪೆಂಟ್ರೋಲ್ ಬಂಕ್, ಎಟಿಎಂ, ಕೃಷಿ ಔಷ ಧ ಅಂಗಡಿಗಳು, ಮೆಡಿಕಲ್ ಶಾಪ್‌ಗ್ಳು ಎಂದಿನಂತೆ ಕಾರ್ಯ ನಿರ್ವಹಿದವು. ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಪೊಲೀಸರು ನಗರದ ಪ್ರಮುಖರ ರಸ್ತೆ ಬಡಾವಣೆಗಳಲ್ಲಿ ಗಸ್ತು ತಿರುಗುತ್ತಿದ್ದು, ಜನರು ಮನೆಯಿಂದ ಹೊರಬರದಂತೆ ತಡೆಯುವುದರೊಂದಿಗೆ ಕೋವಿಡ್ 19 ವೈರಸ್ ಹರಡದಂತೆ ತಡೆಗಟ್ಟುವಂತೆ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಮಸ್ಯೆಗೆ ಸಿಲುಕಿರುವ ಮತ್ತು ಅಸಹಾಯಕರ ನೆರವಿಗೆ ಧಾವಿಸಿದ ಚಿತ್ರಣಗಳು ಕಂಡು ಬಂದವು.