Advertisement
ಹೀಗೆ ಹೇಳಿಕೊಂಡವರು ನವನಗರದ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿತರ ಆರೈಕೆ ಮಾಡಿದ ಹಿರಿಯ ಶುಶ್ರೂಷಕಿ. ಮನೆಯಲ್ಲಿ ಮೂರು ವರ್ಷದ ಮಗು. 14 ದಿನಗಳ ಕಾಲ ಮನೆಗೆ ಹೋಗದೇ ಆಸ್ಪತ್ರೆಯಲ್ಲಿಯೇ ಇರಬೇಕಿತ್ತು. ಒಮ್ಮೆ ಕೋವಿಡ್-19 ವಾರ್ಡ್‌ಗೆ ಹೋದರೆ ಪಿಪಿಇ ಕಿಟ್ ಧರಿಸಿಯೇ ಹೋಗಬೇಕು. ಅದು ಧರಿಸುವ ಮುಂಚೆಯೇ ನಮ್ಮ ಎಲ್ಲ ಕೆಲಸ ಮುಗಿಸಿಕೊಳ್ಳಬೇಕು. ಹೆಚ್ಚಿಗೆ ನೀರೂ ಕುಡಿಯುವಂತಿರಲಿಲ್ಲ. ಪಿಪಿಇ ಕಿಟ್ ಧರಿಸಿದಾಗ, ನೈಸರ್ಗಿಕ ಕ್ರಿಯೆಗೂ ಹೋಗುವಂತಿರಲಿಲ್ಲ. ಹೀಗಾಗಿ ಒಮ್ಮೆ ಕಿಟ್ ಧರಿಸಿದರೆ, 6 ಗಂಟೆ ತಗೆಯುವಂತಿಲ್ಲ. ಎಷ್ಟೇ ಕಷ್ಟವೆನಿಸಿದರೂ, ನಾವೆಲ್ಲ ಕೆಲಸ ಮಾಡಿದೇವು. ನಮಗೆ ಹಿರಿಯ ಅಧಿಕಾರಿಗಳ, ವೈದ್ಯರ ಸಲಹೆ-ಮಾರ್ಗದರ್ಶನವೂ ಇತ್ತು. ಹೀಗಾಗಿ ಜೀವ ಭಯ ಬಿಟ್ಟು ಎಂದಿನಂತೆ ಕೆಲಸ ಮಾಡಿದೇವು.
Advertisement
ಜೀವ ಭಯ ಇದ್ರೂ ಜೀವ ಉಳಿಸಿದ ನೆಮ್ಮದಿ!
03:25 PM Apr 23, 2020 | Suhan S |
Advertisement
Udayavani is now on Telegram. Click here to join our channel and stay updated with the latest news.