Advertisement

ಬಿಬಿಎಂಪಿಯಿಂದ ಮತ್ತೆ ಸಾಂಸ್ಥಿಕ ಕ್ವಾರಂಟೈನ್‌ ಜಾರಿ

02:28 PM Aug 03, 2021 | Team Udayavani |

ಬೆಂಗಳೂರು: ಕೋವಿಡ್ ಮೂರನೇ ಅಲೆ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಮೊದಲ ಅಲೆಯಲ್ಲಿ ಅನುಸರಿಸಿದ್ದ
ಸಾಂಸ್ಥಿಕ ಕ್ವಾರಂಟೈನ್‌ ಪದ್ಧತಿಯನ್ನೇ ಮತ್ತೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

Advertisement

ಸೋಂಕು ಹೆಚ್ಚಿರುವ ಮಹಾರಾಷ್ಟ್ರ ಮತ್ತು ಕೇರಳದಿಂದ ನಗರಕ್ಕೆ ಬರುವವರಿಗೆ 72 ಗಂಟೆ ಒಳಗಿನ ಕೋವಿಡ್ ಸೋಂಕು ಪರೀಕ್ಷೆ ಕಡ್ಡಾಯ. ಆದರೆ, ಆ ರಾಜ್ಯಗಳಿಂದ ರೈಲು, ಬಸ್‌ ಮೂಲಕ ನಗರಕ್ಕೆ ಆಗಮಿಸುತ್ತಿರುವ ಪ್ರಯಾಣಿಕರು ನೆಗೆಟಿವ್‌ ವರದಿಯನ್ನು ಹೊಂದಿರುವು
ದಿಲ್ಲ. ಹೀಗಾಗಿ, ಯಾರ ಬಳಿ ಕೋವಿಡ್ ಸೋಂಕು ಪರೀಕ್ಷೆ ವರದಿ ಇರುವುದಿಲ್ಲವೋ ಅಂತಹವರನ್ನು ಸ್ಥಳದ ಲ್ಲಿಯೇ ಆರ್‌ಟಿಪಿಸಿಆರ್‌ ಪರೀಕ್ಷೆಗೊಳಪಡಿಸಿ ನೇರವಾಗಿ ಕೋವಿಡ್ ಕೇರ್‌ ಸೆಂಟರ್‌ ಅಥವಾ ಹೋಟೆಲ್‌ಗೆ ಕರೆದೊಯ್ದು ವರದಿ ಬರುವವರೆಗೂ (ಒಂದರಿಂದ ಎರಡು ದಿನ) ಅಲ್ಲಿಯೇ ಕ್ವಾರಂಟೈನ್‌ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಕೇರಳ ಮತ್ತು ಮಹಾರಾಷ್ಟ್ರ ಪ್ರಯಾಣಿಕರಿಂದ ಮತ್ತೂಬ್ಬರಿಗೆ ಹರಡುವುದನ್ನುತಪ್ಪಿಸಲು ಮುಂದಾಗಿದೆ.

ಈ ರೀತಿ ಸಾಂಸ್ಥಿಕ ಕ್ವಾರಂಟೈನ್‌ ಇದ್ದವರ ಊಟ ವಸತಿ ಖರ್ಚನ್ನು ಬಿಬಿಎಂಪಿ ಬರಿಸಲಿದೆ. ಸದ್ಯ ನಗರದಲ್ಲಿ 49 ಕೋವಿಡ್ ಕೇರ್‌ ಸೆಂಟರ್
ಇದ್ದು, 2,500ಕ್ಕೂ ಅಧಿಕ ಹಾಸಿಗೆಗ ‌ಳು ಲಭ್ಯವಿದೆ. ಇಲ್ಲಿಯೇ ವರದಿ ಬರುವವರೆಗೂ ಪ್ರಯಾಣಿಕರು ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಕೋವಿಡ್ ಕೇರ್‌ ಸೆಂಟರ್‌ ಬೇಡ ಎನ್ನುವವರು ಸ್ವಂತ ಖರ್ಚಿನಲ್ಲಿ ಹೋಟೆಲ್‌ನಲ್ಲಿ ಉಳಿದುಕೊಳ್ಳಬಹುದು. ಊಟದ ವ್ಯವಸ್ಥೆ ಯನ್ನು ಬಿಬಿಎಂಪಿ ಮಾಡಲಿದೆ.

ಸೋಂಕು ಪರೀಕ್ಷಾ ವರದಿ ನೆಗೆಟಿವ್‌ ಬಂದರೆ ಬಂದ ಬಳಿಕವಷ್ಟೇ ಪ್ರಯಾಣಿಕ ‌ ತಮ್ಮ ಮನೆಗಳಿಗೆ ತೆರಳಬಹುದಾಗಿದೆ. ಒಂದು ವೇಳೆ ಪಾಸಿಟಿವ್‌ ಬಂದರೆ ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಸೋಂಕು ಲಕ್ಷ ಹೊಂದಿರದವರು ಇದೇ ಕೊರೊನಾ ಕೇರ್‌ ಸೆಂಟರ್‌ನಲ್ಲಿಯೇ ಆರೈಕೆಯಲ್ಲಿರಬಹುದು.

ಈ ಹಿಂದೆ ಹೇಗಿತ್ತು? ಯಾಕೆ ರೀತಿ?:
ಈ ಮುಂಚೆ ಸೋಂಕು ಪರೀಕ್ಷೆ ವರದಿ ಹೊಂದಿರದ ಪ್ರಯಾಣಿಕರ ಗಂಟಲು ದ್ರವವನ್ನು ತೆಗೆದುಕೊಂಡು ಮನೆಗೆ ಕಳುಹಿಸಲಾಗುತ್ತಿತ್ತು.
ವರದಿ ಬರುವವರೆಗೂ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ ಇರುವಂತೆ ಸೂಚಿಸಲಾಗುತ್ತಿತ್ತು. ಆದರೆ, ಬಹುತೇಕರು ಪಾಲಿಸುತ್ತಿರಲಿಲ್ಲ. ಸದ್ಯ ಕೇರಳದಲ್ಲಿ ಪಾಸಿಟಿವಿಟಿ ದರ ಸಾಕಷ್ಟು ಹೆಚ್ಚಿರುವುದರಿಂದ ಅಲ್ಲಿಂದ ಬರುವವರ ಪೈಕಿ ಅನೇಕರು ಸೋಂಕನ್ನು ಹೊತ್ತುತರುವ ಸಾಧ್ಯತೆಗಳಿವೆ. ಹೀಗಾಗಿ, ಹೋಂ ಕ್ವಾರಂಟೈನ್‌ ಬದಲಾಗಿ ಮತ್ತಷ್ಟು ಬಿಗಿ ಕ್ರಮವಾದ (ಮೊದಲ ಅಲೆಯಲ್ಲಿ ಹೆಚ್ಚು ಪಾಲನೆಯಲ್ಲಿದ್ದ) ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಿಮಾನ ನಿಲ್ದಾಣದಲ್ಲಿ ತ್ವರಿತ ವರದಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವರಿಗೆ ಕೊರೊನಾ ವರದಿ ಕಡ್ಡಾಯವಿದೆ. ವರದಿ ಹೊಂದಿರದ ಪ್ರಯಾಣಿಕರಿಗಾಗಿಯೇ ವಿಮಾನ ನಿಲ್ದಾಣದಲ್ಲಿಯೇ ಸ್ವಃತ ಖರ್ಚಿನಲ್ಲಿ ತ್ವರಿತ ಆರ್‌ಟಿಪಿಸಿಆರ್‌ ಸೋಂಕು ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಗಂಟೆಗಳಲ್ಲಿಯೇ ವರದಿ ಲಭ್ಯವಾಗಲಿದೆ. ಒಂದು ವೇಳೆ ಪಾಸಿಟಿವ್‌ ಬಂದರೆ ನೇರವಾಗಿಆಸ್ಪತ್ರೆ ಅಥವಾ ಕೊರೊನಾ ಕೇರ್‌ ಸೆಂಟರ್‌ಗೆ ದಾಖಲಿಸಲಾಗುತ್ತದೆ. ತ್ವರಿತ ಪರೀಕ್ಷೆ ಲಭ್ಯವಿರುವ ಹಿನ್ನೆಲೆ ಸಾಂಸ್ಥಿಕ ಕ್ವಾರಂಟೈನ್‌ ಅಗತ್ಯ ಬೀಳುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದರು

ಪ್ರಯಾಣಿಕರಿಂದ
ಪರೀಕ್ಷೆಗೆ ವಿರೋಧ
ಸೋಮವಾರ ನಗರದ ವಿವಿಧ ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕ ತಪಾಸಣೆ ವೇಳೆ ಹಲವರು 72 ಗಂಟೆ ಒಳಗಿನ ಕೊರೊನಾ ನೆಗೆಟಿವ್‌ ವರದಿ ಹೊಂದಿರುವುದು ಪತ್ತೆಯಾಗಿದೆ. ಆ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಸೋಂಕು ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ, ಹಲವರು ಪರೀಕ್ಷೆಯನ್ನು ನಿರಾಕರಿಸಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಪ್ರಯಾಣಿಕರು ಒಂದು ವಾರದ ಹಿಂದಿನ ಕೊರೊನಾ ವರದಿಯನ್ನು ಹೊಂದಿರುತ್ತಾರೆ, ಪರೀಕ್ಷೆಗೆಕರೆದರೆ ಬರುವುದಿಲ್ಲ. ಜಗಳಕ್ಕೆ ಮುಂದಾಗುತ್ತಾರೆ ಎಂದು ಬಿಬಿಎಂಪಿ ಆರೋಗ್ಯ ನಿರೀಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕೊರೊನಾ ವರದಿ ಇಲ್ಲದ ಪ್ರಯಾಣಿಕರ ಸಾಂಸ್ಥಿಕ ಕ್ವಾರಂಟೈನ್‌ಗೆ ನಿರ್ಧರಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಸೋಮವಾರ ಸಂಜೆ ಅಧಿಕಾರಿಗಳ ವಿಶೇಷ ಸಭೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುತ್ತದೆ.
-ಡಾ.ವಿಜಯೇಂದ್ರ, ಮುಖ್ಯ
ಆರೋಗ್ಯಾಧಿಕಾರಿ, ಬಿಬಿಎಂಪಿ

ಪರೀಕ್ಷೆ ಇಲ್ಲದೇ ಬರುವವರು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕು. ವಲಯ ಮಟ್ಟದ ಅಧಿಕಾರಿಗಳಿಗೆ ಸಾಂಸ್ಥಿಕಕ್ವಾರಂಟೈನ್‌ಗೆ
ಸೂಚನೆ ನೀಡಲಾಗಿದೆ. ಅಲ್ಲದೆ, ಆರ್‌ ಟಿಪಿಸಿಆರ್‌ ವರದಿಯ ಫ‌ಲಿತಾಂಶವನ್ನು 24 ಗಂಟೆಯೊಳಗೆ ನೀಡಲು ಸೂಚನೆ ನೀಡಲಾಗಿದೆ.
-ಗೌರವ್‌ ಗುಪ್ತ,
ಬಿಬಿಎಂಪಿ ಮುಖ್ಯ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next