ತುಮಕೂರು: ಶೈಕ್ಷಣಿಕ ನಗರ ತುಮಕೂರಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ, ಕಳೆದ ಎರಡು ವಾರದಲ್ಲಿ ಹೆಚ್ಚು ಸೋಂಕಿತರು ತುಮಕೂರು ತಾಲೂಕಿನವರೇ ಆಗುತ್ತಿರುವುದು ಜನರಲ್ಲಿ ಆತಂಕ ಮೂಡುತ್ತಿದೆ. ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಯಿತು ಎಂದುಕೊಂಡಿದ್ದಾಗ, ಇಡೀ ಜಿಲ್ಲೆಯ ಜನ ಭಯ ಪಡುವಂತೆ ಕಳೆದ ಒಂದು ತಿಂಗಳಿ ನಿಂದ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ.
11 ಮಂದಿ ಸಾವು: ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ತ್ರಿಶತಕ ಮೀರಿ ಮುಂದೆ ಮುಂದೆ ಸಾಗುತ್ತಿದೆ, ಈ ವರೆಗೆ 333 ಜನ ಕೋವಿಡ್ 19 ಸೋಂಕು ಇರುವುದು ದೃಢವಾಗಿದೆ. ಈ ಸೋಂಕಿತರಲ್ಲಿ ತುಮಕೂರು ತಾಲೂಕಿನವರೇ ಅತೀ ಹೆಚ್ಚು 84 ಜನ ಸೋಂಕಿತರು ಇದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 11 ಜನ ಕೋವಿಡ್ 19 ಮಹಾಮಾರಿಗೆ ಮೃತಪಟ್ಟಿದ್ದಾರೆ. ಅದರಲ್ಲಿ ತುಮಕೂರು ತಾಲೂಕಿನವರೇ 8 ಜನರು ಈ ಮಹಾಮಾರಿಗೆ ಉಸಿರು ಚೆಲ್ಲಿದ್ದಾರೆ.
ಎಲ್ಲಾ ತಾಲೂಕಿನಲ್ಲೂ ಸೋಂಕು: ದೇಶಾದ್ಯಂತ ಲಾಕ್‌ಡೌನ್ ಇದ್ದ ವೇಳೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿ ತರು ಅತೀ ಕಡಿಮೆ ಇದ್ದರು, ಎರಡು ಮೂರು ಜನರಿಗೆ ಮಾತ್ರ ಸೋಂಕು ಇರುವುದು ಕಂಡು ಬಂದಿತ್ತು. ಆದರೆ ಲಾಕ್ ಡೌನ್ ಸಡಿಲಿಕೆಯಾಗಿ ಹೊರ ರಾಜ್ಯದಿಂದ, ಹೊರ ಜಿಲ್ಲೆಯಿಂದ ಜನರು ಜಿಲ್ಲೆಗೆ ಬರುತ್ತಲೇ ಜಿಲ್ಲೆಯ ಎಲ್ಲಾ ಕಡೆ ಸೋಂಕು ವ್ಯಾಪಿಸಿ ಈಗ ಎಲ್ಲಾ ತಾಲೂಕಿನಲ್ಲಿಯೂ ಸೋಂಕಿತರು ಇರುವಂತ್ತಾಗಿದೆ.
ತೀವ್ರ ಆತಂಕ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ನಗರದಲ್ಲಿ ಬಹು ತೇಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ, ಮುಖಕ್ಕೆ ಮಾಸ್ಕ್ ಕೂಡಾ ಧರಿಸದೇ ಸಂಚಾರ ಮಾಡುತ್ತಿದ್ದಾರೆ. ಇದನ್ನು ಗಮನಿಸು ತ್ತಿರುವ ಜನ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದಕ್ಕ ತೀವ್ರ ಆತಂಕ ಪಡುತ್ತಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚಳ: ಜಿಲ್ಲೆಯಲ್ಲಿ ಆರಂಭದಲ್ಲಿ ಶಿರಾ ನಗರದಲ್ಲಿ ಮೊದಲು ಸೋಂಕು ಕಾಣಿಸಿ ಕೊಂಡಿತು. ಅಲ್ಲಿಯ ವೃದನೊಬ್ಬ ಮೃತ ಪಟ್ಟಿದ್ದ, ಆನಂತರ ತುಮಕೂರು ನಗರದಲ್ಲಿ ಸೋಂಕು ಕಾಣಿಸಿಕೊಂಡಿತ್ತು, ಇನ್ನೂ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಸೋಂಕಿತರು ಇರಲಿಲ್ಲ. ಆದರೆ ಈಗ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಸೋಂಕಿತರ ಪ್ರಮಾಣ ದಿನೇ ದಿನೆ ಹೆಚ್ಚುತ್ತಲೇ ಇದೆ, ತುಮಕೂರು ಬಿಟ್ಟರೆ ಪಾವಗಡ ತಾಲೂಕಿನಲ್ಲಿ ಹೆಚ್ಚು ಸೋಂಕಿತರು ಕಂಡು ಬರುತ್ತಿದ್ದು ಮಧುಗಿರಿ ಸೇರಿದಂತೆ ಇತರೆ ತಾಲೂಕಿನಲ್ಲಿಯೂ ಪೈಪೋಟಿಯಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಎಲ್ಲರಲ್ಲಿ ಆತಂಕ ಉಂಟಾಗುತ್ತಿದೆ.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಜನರು ಸಾಮಾಜಿಕ ಅಂತರ ಕಾಯ್ದು ಕೊಂಡು ಇರಬೇಕು ಮುಖಕ್ಕೆ ಮಾಸ್ಕ್ ಧರಿಸಬೇಕು, ಬೇರೆ ಊರುಗಳಿಂದ ಯಾರಾದರೂ ಬಂದರೆ ಪರೀಕ್ಷಿಸಿ ಕೊಳ್ಳಬೇಕು, ಜ್ವರ, ನೆಗಡಿ, ತಲೆ ನೋವು ಕಾಣಿಸಿ ಕೊಂಡರೆ ತಕ್ಷಣ ಆಸ್ಪತ್ರೆಗೆ ತೋರಿಸಬೇಕು ನಿರ್ಲಕ್ಷ ವಹಿಸಿ ಕಾಯಿಲೆ ಹೆಚ್ಚಾದ ಮೇಲೆ ಬಂದರೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ.
-ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ