Advertisement

ಅಂಗನವಾಡಿ ಕಾರ್ಯಕರ್ತೆ, ನಿವೃತ್ತ ಪೊಲೀಸ್‌‌ ಪೇದೆಗೆ ಕೋವಿಡ್-19 ಸೋಂಕು

08:18 AM Apr 26, 2020 | keerthan |

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿಯಲ್ಲಿ ಸೋಂಕಿತನ‌ ಸಮೀಕ್ಷೆ ನಡೆಸಲು ಹೋದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸೋಂಕಿತನ ಮನೆ‌ ಪಕ್ಕದ  ನಿವೃತ್ತ ಪೊಲೀಸ್ ಪೇದೆ ಸೇರಿದಂತೆ ಒಟ್ಟು 9 ಜನರಿಗೆ ಶನಿವಾರ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ.

Advertisement

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಈ ಹೊಸ ಒಂಬತ್ತು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 54ಕ್ಕೆ ಏರಿದಂತಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಶನಿವಾರ ಬೆಳಗಿನ ಪತ್ರಿಕಾ ಪ್ರಕಟಣೆಯ ಪ್ರಕಾರ ಬೆಳಗಾವಿಯಲ್ಲಿ 6 ಹಾಗೂ ಸಂಜೆಯ ಪ್ರಕಟಣೆಯಲ್ಲಿ ಮೂರು ಪ್ರಕರಣಗಳು ದೃಢಪಟ್ಟಿರುತ್ತವೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಸೋಂಕಿತ ಸಂಖ್ಯೆ‌128ನಿಂದ 45 ವರ್ಷದ ಪುರುಷ ಪಿ-482;  38 ವರ್ಷದ ಪುರುಷ ಪಿ-483; ಮತ್ತು 80 ವರ್ಷದ ವೃದ್ಧೆ ಪಿ-484; 55 ವರ್ಷದ ಮಹಿಳೆ  485; 42 ವರ್ಷದ ಮಹಿಳೆ ಪಿ-486, 39 ವರ್ಷದ ಮಹಿಳೆ ಪಿ-487,  20 ವರ್ಷದ ಯುವಕ ಪಿ-494; 8 ವರ್ಷದ ಬಾಲಕ ಪಿ-495 ಹಾಗೂ 30 ವರ್ಷದ ಮಹಿಳೆ ಪಿ-496 ಇದರಲ್ಲಿ  ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ ಪಿ-128 ಸೋಂಕಿತನ ಜತೆ ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 54 ಜನರಲ್ಲಿ ಸೋಂಕು ಕಂಡುಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. ಈ ಪೈಕಿ ಗುಣಮುಖರಾಗಿರುವ ನಾಲ್ಕು ಜನರನ್ನು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next