ಆನೇಕಲ್: ಬೆಂಗಳೂರು ನಗರ ವ್ಯಾಪ್ತಿಗೆ ಒಳಪಡುವ ಆನೇಕಲ್‌ತಾಲೂಕಿನ ಹೆಬ್ಬಗೋಡಿ ಅನಂತ ನಗರದಲ್ಲಿ ಮಂಗಳವಾರ ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸೋಂಕಿತ ಸಂಖ್ಯೆ 1236 ನೆಲೆಸಿದ್ದ ಅಪಾರ್ಟ್ ಮೆಂಟ್ ಸುತ್ತಮುತ್ತಲಿನ 100 ಮೀಟರ್ ಅಂತರ ವನ್ನು ಕಂಟೈನ್ಮೆಂಟ್ ಜೋನ್‌ಎಂದು ಘೋಷಿಸಿ ಪೊಲೀಸರು ಬ್ಯಾರಿಕೇಡ್ ಹಾಕಿ ಯಾರೂ ಓಡಾಡ ದಂತೆ ಸೂಚನೆ ನೀಡಲಾಗಿದೆ.
ಇಡೀ ಅಪಾರ್ಟ್‌ಮೆಂಟ್‌ನಲ್ಲಿದ್ದ ಎಲ್ಲರನ್ನೂ ತಪಾಸಣೆ ಮಾಡಲಾಗಿದ್ದು ಪೊಲೀಸರು, ಆಶಾ ಮತ್ತುಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸೋಂಕಿತ ವ್ಯಕ್ತಿ ಮೂಲತಃ ಫಿಸಿಯೋಥೆರಪಿಸ್ಟ್ ಆಗಿದ್ದು ತಮಿಳುನಾಡಿನ ವೇಲೂರು ಮೂಲಕ ಮೇ 6ನೇ ತಾರೀಖೀನಂದು ಹೆಬ್ಬಗೋಡಿ ಬಳಿಯ ಅನಂತ ನಗರಕ್ಕೆ ಆಗಮಿಸಿದ್ದ. ಕಳೆದ 2 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬೊಮ್ಮಸಂದ್ರ ಬಳಿಯ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದಾಗ ಕೋವಿಡ್ 19 ಸೋಂಕು ದೃಢ ಪಟ್ಟಿದೆ.
ಈತ ಬೆಂಗಳೂರಿನ ಮಾರತ್ತಹಳ್ಳಿ, ಬೆಳ್ಳಂದೂರು ಮುಂತಾದ ಕಡೆ ಓಡಾಡಿದ್ದು ಅನಂತನಗರದಲ್ಲಿನ ಶಾಲ್ ಮಾರ್ಟ್, ಸ್ಟಾರ್ ಮಾರ್ಟ್‌ಗಳಿಗೆ ಭೇಟಿ ನೀಡಿದ್ದ ಎಂಬ ಮಾಹಿತಿ ಲಭ್ಯವಾಗಿವೆ. ಈಗಾಗಲೇ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಜನರನ್ನು ಕ್ವಾರಂಟೈನ್ ಮಾಡಿದ್ದು ಸೋಂಕಿತನಿಂದ ಇನ್ನಷ್ಟು ಟ್ರಾವೆಲ್ ಹಿಸ್ಟರಿ ಬಗ್ಗೆ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕುತ್ತಿದೆ.
ಈಗಾಗಲೇ ಆಶಾ ಕಾರ್ಯಕರ್ತೆಯರು ಮನೆ ಗಳಿಗೆ ತೆರಳಿ ಅಕ್ಕಪಕ್ಕದ ಬೀದಿಗಳಲ್ಲಿ ಪ್ರತಿ ಮನೆಗಳಲ್ಲಿಯೂ ತಪಾಸಣೆ ಮುಂದುವರಿಸಿದ್ದಾರೆ. ಸ್ಥಳದಲ್ಲಿ ಹೆಬ್ಬಗೋಡಿ ಜಿಗಣಿ ವ್ಯಾಪ್ತಿ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಹೆಬ್ಬಗೋಡಿ ಪೊಲೀಸರು ಭದ್ರತೆ ಕೈ ಗೊಂಡಿದ್ದಾರೆ. ಹೆಬ್ಬಗೋಡಿಯಲ್ಲಿ ಕೋವಿಡ್ 19 ಪಾಸಿಟಿವ್ ಆಗುತ್ತಿದ್ದಂತೆ ಆನೇಕಲ್ ತಾಲೂಕಿನಲ್ಲಿ ಸಾರ್ವಜನಿಕರು, ನಿವಾಸಿಗಳು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ತಮಿಳುನಾಡಿ ನಿಂದ ಅತ್ತಿಬೆಲೆ ಗಡಿ ಮೂಲಕ ಈತ ಹೆಬ್ಬಗೋಡಿಗೆ ಆಗಮಿಸಿರು ವುದರಿಂದ ಈತನ ಟ್ರಾವೆಲ್ ಹಿಸ್ಟರಿ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಲೆ ನೋವಾ ಗಿದೆ. ಆನೇಕಲ್ಲಿನ ಚಂದಾಪುರ ವ್ಯಾಪ್ತಿ ಯಲ್ಲಿನ ಬಡಾವಣೆ ಯೊಂದಕ್ಕೆ ಫಿಜಿಯೋಥೆರಪಿ ನೀಡಲು ಸೋಂಕಿತ ವ್ಯಕ್ತಿ ಬಂದು ಹೋಗಿದ್ದು ಈ ಭಾಗದಲ್ಲಿನ ಜನರಲ್ಲೂ ಆತಂಕ ಹೆಚ್ಚಿಸಿದೆ.