Advertisement

ಚಾ.ನಗರ ಜಿಲ್ಲೆಯಲ್ಲಿ ಮತ್ತೊಬ್ಬ ಲ್ಯಾಬ್ ಟೆಕ್ನಿಷಿಯನ್ ಸೇರಿ 12 ಮಂದಿಗೆ ಸೋಂಕು

07:01 PM Jul 09, 2020 | Hari Prasad |

ಚಾಮರಾಜನಗರ: ಸರ್ಕಾರಿ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞರೊಬ್ಬರಿಗೆ, 8 ವರ್ಷದ ಬಾಲಕಿ ಹಾಗೂ ಗರ್ಭಿಣಿಗೆ ಸೋಂಕು ತಗುಲಿದೆ.

Advertisement

ಈ ಮೂಲಕ ಜಿಲ್ಲೆಯಲ್ಲಿ ಗುರುವಾರ 12 ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಇವರಲ್ಲಿ 31 ಮಂದಿ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಇನ್ನೂ 101 ಸಕ್ರಿಯ ಪ್ರಕರಣಗಳಿವೆ.

ಇಂದು ಪರೀಕ್ಷಸಲಾಗಿರುವ ಒಟ್ಟು 952 ಮಾದರಿಗಳಲ್ಲಿ 11 ಪ್ರಕರಣಗಳು ಮಾತ್ರ ಪಾಸಿಟಿವ್ ಆಗಿರುವುದು ಕೊಂಚ ಸಮಾಧಾನಕರ ವಿಷಯವಾಗಿದೆ. ಇನ್ನೊಂದು ಪ್ರಕರಣ ಮೈಸೂರಿನಲ್ಲಿ ಪರೀಕ್ಷೆಗೊಳಪಟ್ಟಿತ್ತು.

ಇದುವರೆಗೆ ಜಿಲ್ಲೆಯಲ್ಲಿ 9897 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿರುವ ಮಾದರಿಗಳ ಪೈಕಿ 1032 ಮಾದರಿಗಳ ಫಲಿತಾಂಶ ಇನ್ನೂ ಬರಬೇಕಿದೆ.

Advertisement

ಇಂದಿನ 12 ಪ್ರಕರಣಗಳಲ್ಲಿ ಕೊಳ್ಳೇಗಾಲ 4, ಯಳಂದೂರು 4, ಗುಂಡ್ಲುಪೇಟೆ 3 ಹಾಗೂ ಚಾಮರಾಜನಗರಕ್ಕೆ 1 ಪ್ರಕರಣ ಸೇರಿವೆ.

ಕೋವಿಡ್ ಸ್ವಾಬ್ ಟೆಸ್ಟ್ ತೆಗೆದುಕೊಳ್ಳುತ್ತಿದ್ದ ಯಳಂದೂರು ಸರ್ಕಾರಿ ಆಸ್ಪತ್ರೆಯ 40 ವರ್ಷದ ಪ್ರಯೋಗಶಾಲಾ ತಂತ್ರಜ್ಞನಿಗೆ ಸೋಂಕು ತಗುಲಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಆ ಲ್ಯಾಬ್ ಸೇರಿದಂತೆ ಇಡೀ ಆಸ್ಪತ್ರೆ, ಪಕ್ಕದಲ್ಲಿರುವ ಆರೋಗ್ಯ ಇಲಾಖೆಯ ಕಚೇರಿ ಹಾಗೂ ವೈದ್ಯರು ಹಾಗೂ ದಾದಿಯರು ಇರುವ ವಸತಿ ಗೃಹಗಳ ಸಮುಚ್ಚಯಕ್ಕೆ ರಾಸಾಯನಿಕ ದ್ರಾವಣ ಸಿಂಪಡಿಸಿ ಸೀಲ್‌ಡೌನ್ ಮಾಡಲಾಗಿದೆ.

ಚಾಮರಾಜನಗರದ ರಹಮತ್ ನಗರದ 23 ವರ್ಷದ ಗರ್ಭಿಣಿಗೂ ಪಾಸಿಟಿವ್ ದೃಢಪಟ್ಟಿದೆ. ಎಲ್ಲರೂ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದಿನ ಪ್ರಕರಣಗಳ ವಿವರ ಇಂತಿದೆ:  ರೋಗಿ ಸಂಖ್ಯೆ ಸಿಎಚ್‌ಎನ್ 122: 14 ವರ್ಷದ ಬಾಲಕ, ಮಂಜುನಾಥ ನಗರ, ಕೊಳ್ಳೇಗಾಲ (ರೋಗಿಯ ಸಂಪರ್ಕಿತ), ಸಂಖ್ಯೆ 123: 60 ರ್ಷದ ವೃದ್ಧ, ಮಂಜುನಾಥನಗರ ಕೊಳ್ಳೇಗಾಲ (ರೋಗಿಯ ಸಂಪರ್ಕಿತ), ಸಂಖ್ಯೆ 124: 38 ವರ್ಷದ ಪುರುಷ ಮಂಜುನಾಥನಗರ, ಕೊಳ್ಳೇಗಾಲ (ರೋಗಿಯ ಸಂಪರ್ಕಿತ), ಸಂಖ್ಯೆ 125: 55 ವರ್ಷದ ಮಹಿಳೆ, ಮಂಜುನಾಥನಗರ, ಕೊಳ್ಳೇಗಾಲ (ರೋಗಿಯ ಸಂಪರ್ಕಿತ), ಸಂಖ್ಯೆ 126: 23 ವರ್ಷದ  ಗರ್ಭಿಣಿ, ಮೊಬೈಲ್ ಅಂಗಡಿ ಮಾಲೀಕನ ಪತ್ನಿ, ರೆಹಮತ್ ನಗರ, ಚಾಮರಾಜನಗರ. ಸಂಖ್ಯೆ 127: 40 ವರ್ಷದ ಪುರುಷ, ಸರ್ಕಾರಿ ಆಸ್ಪತ್ರೆ, ಯಳಂದೂರು. ಸಂಖ್ಯೆ 128: 27 ವರ್ಷದ ಯುವಕ ಕುರುಬರಬೀದಿ, ಗುಂಡ್ಲುಪೇಟೆ, ಸಂಖ್ಯೆ 129: 35 ವರ್ಷದ ಮಹಿಳೆ, ಯರಗಂಬಳ್ಳಿ, ಯಳಂದೂರು (ಬೆಂಗಳೂರಿನಿಂದ ಬಂದವರು), ಸಂಖ್ಯೆ 130: 33 ವರ್ಷದ ಮಹಿಳೆ, ಸುಣ್ಣದ ಕೇರಿ, ಗುಂಡ್ಲುಪೇಟೆ (ಪತಿ ಕಾರು ಚಾಲಕ), ಸಂಖ್ಯೆ 131: 36 ವರ್ಷದ ಮಹಿಳೆ, ಆಶ್ರಯ ಬಡಾವಣೆ ಯಳಂದೂರು. (ರೋಗಿಯ ಸಂಪರ್ಕಿತ), ಸಂಖ್ಯೆ 132: 8 ವರ್ಷದ ಬಾಲಕಿ, ಆಶ್ರಯ ಬಡಾವಣೆ, ಯಳಂದೂರು (ರೋಗಿಯ ಸಂಪರ್ಕಿತ), ರೋಗಿ ಸಂಖ್ಯೆ 133: 70 ವರ್ಷದ ವೃದ್ಧೆ, ಕಲ್ಲಹಳ್ಳಿ, ಗುಂಡ್ಲುಪೇಟೆ.

Advertisement

Udayavani is now on Telegram. Click here to join our channel and stay updated with the latest news.

Next