Advertisement
ಆದರೆ, ನಿಜಕ್ಕೂ ಕೋವಿಡ್ ಹಾವಳಿ ಎಷ್ಟಿದೆ ಎನ್ನುವುದನ್ನು ಅರಿಯಲು ನಿರ್ದಿಷ್ಟ ಜಿಲ್ಲೆಗಳತ್ತ ಗಮನಹರಿಸಿದಾಗ ಅರಿವಾಗುತ್ತದೆ.
ಮೇ 13ರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿದೆ. ಅದರಲ್ಲೂ ಮುಖ್ಯವಾಗಿ ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರಿಂದಾಗಿ ಈಗ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ತನೆ ಏರಿಕೆಯಾಗಿಬಿಟ್ಟಿದೆ.
Related Articles
Advertisement
ಸಕ್ರಿಯ ಪ್ರಕರಣಗಳಲ್ಲಿ ಮಂಡ್ಯ ಮೊದಲು!ಮಂಡ್ಯವೀಗ ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿ ಬದಲಾಗಿದೆ. ಅನ್ಯರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ಸರಕಾರ ಅನುಮತಿಸಿದ ನಂತರ ಮಂಡ್ಯಕ್ಕೆ ಬಂದ ಅನೇಕರಲ್ಲಿ ಸೋಂಕು ದೃಢಪಟ್ಟಿದೆ. ಬುಧವಾರದ ವೇಳೆಗೆ ಬೆಂ.ನಗರದಲ್ಲಿ (ಜಿಲ್ಲೆ) ಸೋಂಕಿತರ ಸಂಖ್ಯೆ 117 ಇತ್ತು, ಮಂಡ್ಯದಲ್ಲಿ 147ಕ್ಕೆ ಏರಿಕೆಯಾಯಿತು. ಈ ಸಂಖ್ಯೆ ನಿಯಂತ್ರಣಕ್ಕೆ ಬರುವುದೇ ಅಥವಾ ಏರುವುದೇ ಎಂಬ ಆತಂಕ ಈಗ ಎದುರಾಗಿದೆ.