Advertisement
ಜಿಲ್ಲೆಯಲ್ಲಿ 2,600 ಟ್ಯಾಕ್ಸಿ ಹಾಗೂ 1,600 ಮ್ಯಾಕ್ಸಿಕ್ಯಾಬ್‌ಗಳು ಸೇರಿ 4,200 ವಾಹನಗಳಿವೆ. 4,500ಕ್ಕೂ ಅಧಿಕ ಮಂದಿ ಚಾಲಕರಿದ್ದಾರೆ. ಶಿರೂರಿನಿಂದ ಹೆಜಮಾಡಿ ತನಕ 64 ಘಟಕಗಳಿವೆ.
ಸಂಕಷ್ಟದಲ್ಲಿರುವ ಚಾಲಕರ ನೆರವಿಗೆ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿ ಯೇಶನ್ ಘಟಕಗಳು ಮುಂದಾಗಿವೆ. ವಿವಿ ಧೆಡೆಗಳಲ್ಲಿ ಘಟಕಗಳ ಅಧ್ಯಕ್ಷರು, ಸದಸ್ಯರು ತಮ್ಮ ವ್ಯಾಪ್ತಿಯಲ್ಲಿರುವ ಬಡ ಚಾಲಕರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಸೀಸನ್ ಸಮಯದಲ್ಲಿ ಆಘಾತ
ಉಡುಪಿ ಜಿಲ್ಲೆ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಜತೆಗೆ ಇದು ಮದುವೆ ಮತ್ತಿತರ ಸಮಾ ರಂಭಗಳ ಸೀಸನ್. ಈ ಸಮಯದಲ್ಲಿ ಟ್ಯಾಕ್ಸಿ ವಾಹನಗಳಿಗೆ ಹೆಚ್ಚು ಡಿಮಾಂಡ್ ಇರುತ್ತದೆ. ಅದೆಲ್ಲವನ್ನು ಕೊರೊನಾ ಕಸಿದುಕೊಂಡಿದೆ.
Related Articles
ಟೂರಿಸ್ಟ್ ಟ್ಯಾಕ್ಸಿ ಉದ್ದಿಮೆ ಯನ್ನೇ ನೆಚ್ಚಿಕೊಂಡು ಚಾಲಕ- ಮಾಲಕರಿಗೆ ಇಎಂಐ ಕಟ್ಟಲು ಸರಕಾರ ಮೂರು ತಿಂಗಳ ಕಾಲ ಮುಂದೂಡಿ ರಿಯಾಯಿತಿ ನೀಡಿದೆ. ಇವರು ಇತರ ಸಾಲಗಳನ್ನು ಮಾಡಿ ಕೊಂಡಿದ್ದು, ಕಂತು ಕಟ್ಟಲು ಮತ್ತೂಬ್ಬರಿಂದ ಸಾಲ ಮಾಡುವಂತಾಗಿದೆ. ಜತೆಗೆ ವಾಹನ ದುರಸ್ತಿ, ಮನೆ, ವಿದ್ಯಾಭ್ಯಾಸ ಖರ್ಚು ನಿರ್ವಹಣೆಗೆ ಪರದಾಡುತ್ತಿದ್ದಾರೆ.
Advertisement
ಸರಕಾರದ ನೆರವಿನ ನಿರೀಕ್ಷೆಜಿಲ್ಲಾ ಅಸೋಸಿಯೇಶನ್ ವತಿಯಿಂದ ಸರಕಾರಕ್ಕೆ ಈಗಾಗಲೆ ಎರಡು ಪ್ರಮುಖ ಬೇಡಿಕೆಗಳನ್ನು ಇರಿಸಲಾಗಿದೆ. ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳ 6 ತಿಂಗಳ ರಸ್ತೆ ತೆರಿಗೆ ಹಾಗೂ ಇನ್ಶೂರೆನ್ಸ್ ರದ್ದು ಮಾಡಬೇಕು. ಕನಿಷ್ಠ 5,000 ರೂ. ತತ್‌ಕ್ಷಣಕ್ಕೆ ಸದಸ್ಯರ ಖಾತೆಗಳಿಗೆ ನೀಡಿ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಚಾಲಕರ ಕುಟುಂಬಗಳ ನೆರವಿಗೆ ಬರಬೇಕು ಅನ್ನುವುದಾಗಿದೆ. ಆರ್‌ಟಿಒ ಬಯಸಿದೆ 60 ಟ್ಯಾಕ್ಸಿ
ನಗರ ಆರ್‌ಟಿಒ ಅಧಿಕಾರಿಗಳು ಈಗಾಗಲೇ ಅಸೋಸಿಯೇಶನ್ ಮುಖ್ಯಸ್ಥ ರಲ್ಲಿ ತುರ್ತು ಸೇವೆಗಾಗಿ 60 ಟ್ಯಾಕ್ಸಿ ವಾಹನಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಡೀಸೆಲ್ ಖರ್ಚು ಭರಿಸುವು ದಾಗಿಯೂ ಹೇಳಿದ್ದಾರೆ. ಅದರಂತೆ ಅವರು ಕೇಳಿಕೊಂಡಷ್ಟು ವಾಹನಗಳನ್ನು ನೀಡಲು ಸಿದ್ಧರಿದ್ದೇವೆ. ಆರ್‌ಟಿಒ ಅಧಿಕಾರಿಗಳು ಕೇಳಿದಾಗ ಒದಗಿಸುತ್ತೇವೆ ಎಂದು ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ. ಸ್ಪಂದನೆಯ ನಿರೀಕ್ಷೆ
ಜಿಲ್ಲಾ ಸಂಘಟನೆ ವತಿಯಿಂದ ಮತ್ತು ಆಯಾ ಪ್ರದೇಶಗಳ ಘಟಕಗಳ ಮೂಲಕ ಸಹೋದ್ಯೋಗಿಗಳಿಗೆ ಅಗತ್ಯ ನೆರವನ್ನು ನೀಡುತ್ತಿದ್ದೇವೆ. ದಿನಸಿ ವಸ್ತುಗಳನ್ನು ವಿತರಿಸುವ ಕೆಲಸ ನಡೆಯುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾದ ಚಾಲಕ-ಮಾಲಕರ ನೆರವಿಗೆ ಸರಕಾರಕ್ಕೂ ಮನವಿ ಮಾಡಿದ್ದೇವೆ. ಸ್ಪಂದನೆಯ ನಿರೀಕ್ಷೆಯಲ್ಲಿದ್ದೇವೆ.
-ರಮೇಶ್ ಕೋಟ್ಯಾನ್,
ಪ್ರಧಾನ ಕಾರ್ಯದರ್ಶಿ,
ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್, ಉಡುಪಿ.