ಮುಂಬಯಿ: ಈ ವಾರದ ಆರಂಭದಲ್ಲಿ ಅಂದರೆ ಸೋಮವಾರ ಬಾಂಬೆ ಷೇರು ಪೇಟೆಯಲ್ಲಿ ಹೂಡಿಕೆದಾರರು 4.23 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ ಬೆನ್ನಲ್ಲೇ ಗುರುವಾರ ಕೂಡ ಷೇರು ಪೇಟೆ ಸೂಚ್ಯಂಕ 1,115 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ.
ಇದರಿಂದಾಗಿ ಹೂಡಿಕೆದಾರರು 3.91 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದ್ದಾರೆ. ದಿನದ ಅಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ 36,553.60ರಲ್ಲಿ ಮುಕ್ತಾಯವಾಯಿತು.
ನಿಫ್ಟಿ ಸೂಚ್ಯಂಕ 326 ಅಂಕ ಕುಸಿತ ಕಂಡಿದೆ. ಒಂದು ಹಂತದಲ್ಲಿ ಸೂಚ್ಯಂಕ 9 ಸಾವಿರಕ್ಕಿಂತ ಕಡಿಮೆ ದಾಖಲಾಗಿತ್ತು.
ಹೂಡಿಕೆದಾರರಿಗೆ ಅತ್ಯಂತ ಆಘಾತ ನೀಡಿದ್ದು ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು. ಈ ಪೈಕಿ ಇನ್ಫೋಸಿಸ್ 150.04, ರಿಲಯನ್ಸ್ ಇಂಡಸ್ಟ್ರೀಸ್ ಲಿ. 143.34, ಟಿಸಿಎಸ್ 130.68, ಐಸಿಐಸಿಐ ಬ್ಯಾಂಕ್ 100.53 ಅಂಕ ಕುಸಿತ ಕಂಡಿವೆ. ಈ ಮೂಲಕ 6 ತಿಂಗಳ ಹಿಂದಿನ ದಾಖಲೆ ಮುರಿದಿವೆ.
ಚಿನ್ನ ದರ ಕುಸಿತ
ಇದೇ ವೇಳೆ ದಿಲ್ಲಿ ಚಿನಿವಾರ ಮಾರು ಕಟ್ಟೆಯಲ್ಲಿ ಸತತ 4ನೇ ದಿನವಾದ ಗುರುವಾರ 10 ಗ್ರಾಂ ಚಿನ್ನಕ್ಕೆ 485 ರೂ. ಕಡಿಮೆಯಾಗಿ 50,418 ರೂ. ಆಗಿದೆ. ಪ್ರತಿ ಕೆ.ಜಿ. ಬೆಳ್ಳಿಗೆ 2,081 ರೂ. ಇಳಿಯುವ ಮೂಲಕ 60,180 ರೂ.ಗಳಿಂದ 58,099 ರೂ.ಗೆ ಇಳಿದಿದೆ.