Advertisement
ಇನ್ನು ಕೆಲವೆಡೆ ಅಚ್ಚರಿ ಎಂಬಂತೆ ಹತ್ತಿರವಾಗಿದ್ದಾರೆ. ಹತ್ತಿರವಾಗಿದ್ದವರು ದೂರವಾದ ಉದಾಹರಣೆಗಳೂ ಇವೆ.
ಸಮಸ್ಯೆಗೆ ಕಾರಣವಾಗಿದ್ದು ಹಣ ಕೋವಿಡ್‌ನಿಂದಾಗಿ ಕುಟುಂಬಗಳಲ್ಲಿ ಅತಿ ಹೆಚ್ಚು ಸಮಸ್ಯೆಗೆ ಕಾರಣವಾದ ಅಂಶ ಎಂದರೆ ಹಣ. ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಕುಸಿದಿದ್ದರಿಂದ ಇದು ಕುಟುಂಬಗಳ ಹಣಕಾಸಿನ ಮೇಲೆ ಪ್ರಭಾವ ಬೀರಿತ್ತು.
Related Articles
Advertisement
ಜತೆಗೆ ವಿಚ್ಛೇದನ ಅರ್ಜಿಗಳ ಕುರಿತ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು 32 ಲಕ್ಷಕ್ಕೂ ಹೆಚ್ಚು ಮಂದಿ ಅದನ್ನು ಓದಿದ್ದರು. ಓರ್ವ ಮಹಿಳೆಯಂತೂ ಲಾಕ್‌ಡೌನ್ ಮುಗಿದ ಮೇಲೆ ನಾನು ಮೊದಲು ಮಾಡುವ ಕೆಲಸವೆಂದರೆ ವಿಚ್ಛೇದನ ಎಂದು ಹೇಳಿದ್ದರು.
ಇದಕ್ಕೆ ಕಾರಣ ಆಕೆ ನರ್ಸ್ ಆಗಿದ್ದು ಬಿಡುವಿಲ್ಲದ ಕೆಲಸವಿತ್ತು. ಇದೇ ವೇಳೆ ಮನೆಯಲ್ಲಿ ಕೆಲಸ ಕಳೆದುಕೊಂಡಿರುವ ಗಂಡ ಮತ್ತು ಐದು ವರ್ಷದ ಮಗು ಇತ್ತು. ಮನೆಯಲ್ಲೇ ಗಂಡ ಇದ್ದರೂ ಯಾವುದೇ ಮನೆಗೆಲಸಗಳನ್ನು ಆತ ಮಾಡುತ್ತಿರಲಿಲ್ಲವಂತೆ. ಆಕೆ ಮನೆಗೆ ಸುಸ್ತಾಗಿ ಹೋದ ಬಳಿಕ ಅಲ್ಲಿನ ಎಲ್ಲ ಕೆಲಸಗಳನ್ನು ಮಾಡಬೇಕಿತ್ತು. ಇದಕ್ಕಾಗಿ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ ಎಂದು ಆಕೆ ಹೇಳುತ್ತಾಳೆ.
2003ರ ಬಳಿಕ ಚೀನದಲ್ಲಿ ವಿಚ್ಛೇದನ ಪ್ರಕರಣಗಳು ಇನ್ನಿಲ್ಲದಂತೆ ಹೆಚ್ಚುತ್ತಿದ್ದು ಕೋವಿಡ್ ಕಾಲದಲ್ಲಿ ಅದು ಇನ್ನಷ್ಟು ಹೆಚ್ಚಾಗುವ ಸೂಚನೆಯನ್ನು ನೀಡಿದೆ.
ಕೌಟುಂಬಿಕ ಹಿಂಸೆ ಪ್ರಮಾಣವೂ ಹೆಚ್ಚಳಇದೇ ವೇಳೆ ಕೌಟುಂಬಿಕ ಹಿಂಸೆ ಪ್ರಕರಣಗಳೂ ಹೆಚ್ಚಳ ಕಂಡಿವೆ. ಇದು ಮೂರು ಪಟ್ಟು ಹೆಚ್ಚಳಗೊಂಡಿವೆ ಎಂದು ಹೇಳಲಾಗಿದೆ. ಇದೇ ರೀತಿ ಯುರೋಪ್‌ನ ಹಲವು ರಾಷ್ಟ್ರಗಳಲ್ಲೂ ಕೌಟುಂಬಿಕ ಹಿಂಸೆ ಪ್ರಮಾಣ ಹೆಚ್ಚಳವಾಗಿದೆ ಎನ್ನಲಾಗಿದೆ. ಬೀಜಿಂಗ್‌ನ ಸ್ಥಿತಿಯನ್ನೇ ಅವಲೋಕಿಸಿದರೆ, ಇಲ್ಲಿನ ಸರಕಾರೇತರ ಸಂಘಟನೆಯೊಂದು ಹೇಳುವ ಪ್ರಕಾರ ಅದರ ಸಹಾಯವಾಣಿಗೆ ಕೌಟುಂಬಿಕ ಹಿಂಸೆ ಕುರಿತ ಕರೆಗಳು ಹೆಚ್ಚಳವಾಗಿವೆಯಂತೆ. ಫೆಬ್ರವರಿಗೂ ಮೊದಲು ಕರೆಗಳು ಹೆಚ್ಚಳಗೊಂಡಿವೆಯಂತೆ. ಹಾಂಗ್‌ಕಾಂಗ್‌ನಲ್ಲಿರುವ ಕೌಟುಂಬಿಕ ಹಿಂಸೆ ತಡೆ ಕುರಿತ ಆಶ್ರಯ ಕೇಂದ್ರದಲ್ಲಿ ಜನರೂ ಹೆಚ್ಚಾಗಿದ್ದಾರಂತೆ. ಜನವರಿಯಲ್ಲಿ ಇವರ ಸಂಖ್ಯೆ 10 ಆಗಿದ್ದರೆ, ಎಪ್ರಿಲ್‌ನಲ್ಲಿ ಇವರ ಸಂಖ್ಯೆ 40ಕ್ಕೇರಿದೆಯಂತೆ. ಮಾನಸಿಕ ಸಮಸ್ಯೆ!
ಲಾಕ್‌ಡೌನ್ ದೀರ್ಘ ಅವಧಿಗೆ ವಿಸ್ತರಣೆಯಾಗುವುದರಿಂದ ಅದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಕೋವಿಡ್ ರೋಗಿಗಳ ಶುಶ್ರೂಷೆಯೊಂದಿಗೆ ಮಾನಸಿಕ ರೋಗಿಗಳಿಗೂ ಚಿಕಿತ್ಸೆ ನೀಡಬೇಕಾದೀತು ಎಂದು ಹೇಳಲಾಗಿದೆ. 2002-03ರಲ್ಲಿ ಸಾರ್ಸ್ ಕಾಯಿಲೆ ಹರಡಿದ್ದಾಗ ಹಾಂಗ್‌ಕಾಂಗ್‌ನ ಜನರಲ್ಲಿ ಖನ್ನತೆ ಮತ್ತು ಉದ್ವೇಗಗಳು ಸಾಮಾನ್ಯವಾಗಿದ್ದವಂತೆ. ಅಲ್ಲದೇ ಮಾನಸಿಕವಾಗಿ ಅವರು ದುರ್ಬಲವಾಗಿದ್ದರು ಎಂದು ಅಧ್ಯಯನವೊಂದು ಬೊಟ್ಟುಮಾಡಿತ್ತು. ಇದೇ ವೇಳೆ ಇನ್ನೊಂದು ವರದಿ ಕುಟುಂಬದ ಸದಸ್ಯರು, ಗೆಳೆಯರು ಪರಸ್ಪರ ಹೆಚ್ಚು ಕಾಳಜಿಯನ್ನು ತೋರಿಸುತ್ತಿರುವ ಬಗ್ಗೆ ಹೇಳಿದೆ. ಆ ಸಮೀಕ್ಷೆಯಲ್ಲಿ ಭಾಗಿಯಾದ ಶೇ.60ರಷ್ಟಕ್ಕೂ ಹೆಚ್ಚು ಭಾಗೀದಾರರು ನಮ್ಮಲ್ಲಿ ಪರಸ್ಪರ ಭಾವನೆಗಳನ್ನು ಗೌರವಿಸುವುದು ಹೆಚ್ಚಾಗಿದೆ. ನಮ್ಮ ಕುಟುಂಬದವರ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇವೆ ಎಂದು ಹೇಳಿದ್ದಾರಂತೆ. ಜತೆಗೆ ಜನರು ಮಾನಸಿಕ ಆರೋಗ್ಯ ಬಗ್ಗೆ ಗಮನಿಸುವುದು ಹೆಚ್ಚಾಗಿದೆ ಎಂದು ಆ ಸಂಶೋಧನೆ ವರದಿ ಹೇಳಿದೆ.