Advertisement

ಕೋವಿಡ್ 19: ಕಟ್ಟುನಿಟ್ಟಿನ ಕ್ರಮಕ್ಕೆ ನಿರಾಣಿ ಸೂಚನೆ

02:35 PM Apr 18, 2020 | Suhan S |

ಬೀಳಗಿ: ದಿನದಿಂದ ದಿನಕ್ಕೆ ಕೋವಿಡ್‌-19 ಭೀತಿ ಹೆಚ್ಚುತ್ತಲೆ ಸಾಗಿದೆ. ಈ ನಿಟ್ಟಿನಲ್ಲಿ ಸಂಬಂಸಿದ ಎಲ್ಲ ಅ ಧಿಕಾರಿ ವರ್ಗ ಮತ್ತು ಪೊಲೀಸ್‌ ಇಲಾಖೆ ಇನ್ನು ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಶುಕ್ರವಾರ ಕರೆದ ಕೋವಿಡ್‌-19 ತುರ್ತು ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು. ಕೋವಿಡ್‌-19 ತಡೆಗಾಗಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್‌ ಸಿಬ್ಬಂದಿ, ತಾಲೂಕಿನ ಎಲ್ಲ ಗ್ರಾಪಂ ಮತ್ತು ನಗರದ ಪಪಂ ಇಲಾಖೆ ಸೇರಿದಂತೆ ಸಂಬಂ ಸಿದ ಎಲ್ಲ ಅಧಿಕಾರಿ ವರ್ಗದ ಅವಿರತ ಪರಿಶ್ರಮದಿಂದಾಗಿಯೇ ಸದ್ಯ ಅದೆಷ್ಟೋ ಪ್ರಮಾಣದಲ್ಲಿ ಕೋವಿಡ್‌-19 ಮಹಾಮಾರಿಗೆ ಬ್ರೇಕ್‌ ಹಾಕಲು ಸಾಧ್ಯವಾಗಿದೆ.

ತಾಲೂಕಿನೊಳಗೆ ಹೋಗಿಬರುವ ವಾಹನ ಹಾಗೂ ಜನರ ಮೇಲೆ ತೀವ್ರ ನಿಗಾ ಇರಿಸಬೇಕು. ಸಂದೇಹವಿದ್ದ ವ್ಯಕ್ತಿಗಳನ್ನು ಕೂಡಲೆ ತಪಾಸಣೆ ಮಾಡಲು ಕ್ರಮ ಕೈಗೊಳ್ಳಬೇಕು. ಇದುವರೆಗೆ ಅಧಿಕಾರಿಗಳು, ಪೊಲೀಸರು ಹಾಗೂ ಸಂಬಂಧಿ ಸಿದ ಎಲ್ಲ ಸಿಬ್ಬಂದಿ ವೀರ ಸೈನಿಕರಂತೆ ಕೋವಿಡ್‌-19 ವಿರುದ್ಧ ಹೋರಾಟ ನಡೆಸಿರುವ ಕ್ರಮ ಶ್ಲಾಘನೀಯ ಆಗಿದೆ. ಮುಂದೆಯೂ ಕೂಡ ಕಟ್ಟುನಿಟ್ಟಿನಿಂದ ಕೊರೊನಾ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ತಹಶೀಲ್ದಾರ್‌ ಭೀಮಪ್ಪ ಅಜೂರ, ಸಿಪಿಐ ಸಂಜೀವ ಬಳಿಗಾರ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ತಾಪಂ ಇಒ ಎಂ.ಕೆ. ತೊದಲಬಾಗಿ, ತಾಲೂಕು ಆರೋಗ್ಯಾಧಿಕಾರಿ ಡಾ|ದಯಾನಂದ ಕರೆಣ್ಣವರ, ಮುಖ್ಯ ವೈದ್ಯಾಧಿಕಾರಿ ಡಾ|ಸಂಜಯ ಯಡಹಳ್ಳಿ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next