Advertisement

ಕೋವಿಡ್‌ 19: ಸದ್ಯಕ್ಕೆ ಶಾಲೆ ಆರಂಭ ಬೇಡ!

06:52 AM Jun 10, 2020 | Lakshmi GovindaRaj |

ರಾಮನಗರ: ಕೋವಿಡ್‌-19 ಸೋಂಕು ನಿವಾರಣೆಯಾಗುವವರೆಗೆ ಅಥವಾ ಲಸಿಕೆ ಕಂಡು ಹಿಡಿಯುವವರೆಗೆ ಶಾಲೆ ಆರಂಭಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಲು ಜಿಲ್ಲೆಯ ಎಸ್‌ಡಿಎಂಸಿ ಸಮನ್ವಯ ವೇದಿಕೆ ಪದಾಧಿಕಾರಿ ಗಳು  ನಿರ್ಣಯ ಕೈಗೊಂಡಿದ್ದಾರೆ. ನಗರದ ಛತ್ರದ ಬೀದಿಯ ಮೈಯಿನ್‌ ಸರ್ಕಾರಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ವೇದಿಕೆ ಅಧ್ಯಕ್ಷ ಬಿ.ಗೋಪಾಲ್‌ ತಿಳಿಸಿದರು.

Advertisement

ಸೋಂಕಿತರ ಸಂಖ್ಯೆ ದಿನೆ ದಿನೇ ಏರುತ್ತಲೇ ಇದೆ.  ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲೆ ತೆರೆಯಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಲಾಕ್‌ಡೌನ್‌ ಕಾರಣ ಶಿಕ್ಷಕರು ತಮ್ಮ ಜಿಲ್ಲೆಗಳಿಗೆ ತೆರಳಿದ್ದಾರೆ. ಅನ್ಯ ಜಿಲ್ಲೆಗಳಿಂದ ಬಂದವರಿಗೆ ಕೋವಿಡ್‌-19 ಪರೀಕ್ಷೆ  ಮಾಡಲಾಗುತ್ತಿಲ್ಲ. ಹೀಗಾಗಿ ಅಪಾಯ ತಂದು ಕೊಳ್ಳುವುದು ಬೇಡ ಎಂದರು. ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಯಶೋಧಾ ಮಾತನಾಡಿ, ಎಷ್ಟೋ ಗ್ರಾಮಗಳಲ್ಲಿ ಬಸ್‌ ವ್ಯವಸ್ಥೆ ಇನ್ನು ಆರಂಭವಾಗಿಲ್ಲ.

ಅನೇಕ ಶಾಲೆಗಳು ಕ್ವಾರಂಟೈನ್‌  ವಾರ್ಡುಗಳ ನ್ನಾಗಿ ಪರಿವರ್ತಿಸಲಾಗಿದೆ. ಶಿಕ್ಷಕರಲ್ಲಿಯೂ ಸೋಂಕಿನ ಭಯವಿದೆ ಎಂದು ವೇದಿಕೆಯ ನಿರ್ಣಯದ ಹಿಂದೆ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ನೀಡಿದರು. ಸರ್ಕಾರಿ ಶಾಲೆ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಕುರಿತು ತಿಳಿಸಿದ ಅವರು  ಗ್ರಾಮಗಳಲ್ಲಿ ವಿದ್ಯುತ್‌ ಮತ್ತು ಇಂಟರ್‌ನೆಟ್‌ ಸಮಸ್ಯೆ ಅಗಾಧವಾಗಿದೆ.

ಮೇಲಾಗಿ ಆನ್‌ ಲೈನ್‌ ಶಿಕ್ಷಣ ನೀಡುವುದು ಹೇಗೆ? ಏನು? ಎಂಬುದರ ಬಗ್ಗೆ ಶಿಕ್ಷಕರಿಗೆ ತರಬೇತಿ ಅಗತ್ಯವಿ ದೆ. ಹೀಗಾಗಿ ಈ ಪದಟಛಿತಿ ಬೇಡ ಎಂದು ವೇದಿಕೆ  ನಿರ್ಣಯಿಸಿದೆ ಎಂದರು. ಮಕ್ಕಳು ಪೌಷ್ಟಿಕತೆಯಿಂದ ವಂಚಿತರಾಗಬಾರದು. ಹೀಗಾಗಿ ಮಧ್ಯಾಹ್ನದ ಊಟದ ದಿನಸಿ ಪದಾ ರ್ಥಗಳನ್ನು ಆಯಾ ಗ್ರಾಮದ ಡಿಪೋಗಳ ಮೂಲಕ ತಲುಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳಾಗಿವೆ ಎಂದರು.

ವೇದಿಕೆಯ ತಾಲೂಕು ಘಟಕದ  ಧ್ಯಕ್ಷ ಉಮೇಶ್‌, ಮಾಗಡಿ ಘಟಕದ ಅಧ್ಯಕ್ಷ ಶಶಿಧರ್‌, ಮಾಜಿ ಅಧ್ಯಕ್ಷ ಅಶೋಕ್‌, ಕನಕಪುರ ಅಧ್ಯಕ್ಷ ಸುರೇಶ್‌, ಚನ್ನಪಟ್ಟಣ ಘಟ ಕದ ಅಧ್ಯಕ್ಷ ಮುತ್ತುರಾಜ್‌, ವೇದಿಕೆಯ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಸೈಯ್ಯದ್‌, ದೇವರಾಜ್‌,  ರಾಜು, ಗೋವಿಂದರಾಜು, ಜಯಕುಮಾರ್‌, ಬಾಬುರಾವ್‌, ರಾಮಕೃಷ್ಣಪ್ಪ, ಬಿ.ಎಂ. ಗೋವಿಂದರಾಜು, ರಮೇಶ್‌ ಹಾಜರಿದ್ದರು.

Advertisement

ಸಭೆ ಕರೆಯಲು ಜಿಲ್ಲಾಧಿಕಾರಿಗಳಿಗೆ ಆಗ್ರಹ: ಶಾಲೆಗಳ ಪುನರಾರಂಭ, ಆನ್‌ಲೈನ್‌ ತರಗತಿ ನಡೆಸುವುದು..ಹೀಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳ ನಡೆಯಲು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ಡಿಡಿಪಿಐ ಅವರು ತಕ್ಷಣ ಎಸ್‌ ಡಿಎಂಸಿ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಬಂಧಿಸಿದವರ ಸಭೆಯನ್ನು ಆಯೋಜಿಸುವಂತೆ ಸಭೆಯಲ್ಲಿ ಹಾಜರಿದ್ದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಯಶೋಧಾ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next