Advertisement
ಲಾಕ್‌ಡೌನ್‌ನಿಂದಾಗಿ ಜನರು ಒಂಟಿ ತನದ ಮಾನಸಿಕ ಖನ್ನತೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಸರಳ ಯೋಗವೇ ಪರಿಹಾರ ಎಂದು ಕಂಡುಕೊಂಡಿರುವ ಕೇಂದ್ರ ಆರೋಗ್ಯ ಇಲಾಖೆಯು ಯೋಗದ ಪುಟ್ಟ ವೀಡಿಯೋ, ಕಿರು ಪೋಸ್ಟರ್‌ಸಿದ್ಧ ಪಡಿಸಿ ಕೊಡುವಂತೆ ನಿಮ್ಹಾನ್ಸ್‌ಗೆ ಸೂಚಿಸಿದೆ.
ಮಾನಸಿಕ ಕಾಯಿಲೆಗಳಿಂದ ಹೊರಬರಲು ಪ್ರಾಣಾಯಾಮ ಅತ್ಯಂತ ಸಹಕಾರಿ. ಹೀಗಾಗಿ ಈ ವೀಡಿಯೋಗಳಲ್ಲಿ ಕಪಾಲಭಾತಿ, ಭಸಿŒಕಾ, ಉಜ್ಜಾಯಿ, ಅನುಲೋಮ, ವಿಲೋಮ ನಾಡಿಶೋಧನ, ಓಂಕಾರ ಉಚ್ಚಾರಗಳಿಗೆ ಆದ್ಯತೆ ನೀಡಲಾಗಿದೆ. ಜತೆಗೆ ಶ್ವಾಸೋಚ್ಛಾ$Ìಸಗಳನ್ನು ಶುದ್ಧವಾಗಿರಿಸಿಕೊಳ್ಳಲು ವ್ಯಾಘ್ರಶ್ವಾಸ, ಶ್ವಾನಶ್ವಾಸದಂತಹ ಉಸಿರಾಟ ಸಂಬಂಧಿ ಯೋಗ ಕ್ರಿಯೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಯೋಗಾಸನ ವಿಭಾಗದ ಪ್ರಾಧ್ಯಾಪಕ ಡಾ| ಹೇಮಂತ್ ಭಾರ್ಗವ್ ತಿಳಿಸಿದ್ದಾರೆ.ಇದರ ಜತೆಗೆ ಕೋವಿಡ್ 19 ಜಾಗೃತಿಯ ವೀಡಿಯೋಗಳನ್ನು ಕೂಡ ಸಿದ್ಧಪಡಿಸಲು ಆರೋಗ್ಯ ಇಲಾಖೆ ತಿಳಿಸಿದೆ. ಸಾಮಾಜಿಕ ಜಾಲತಾಣ ಬಳಕೆ
ನಿಮ್ಹಾನ್ಸ್‌ನ ತಂಡ ಎರಡು ಯೋಗ ವೀಡಿಯೋ ಸಿದ್ಧಪಡಿಸಿದೆ. ಇವುಗಳನ್ನು ಕೇಂದ್ರ ಆರೋಗ್ಯ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ನಿಮ್ಹಾನ್ಸ್ ತಿಳಿಸಿದೆ.
Related Articles
ಆರೋಗ್ಯ ಇಲಾಖೆ ಕಾಪಾಡಲು ಯೋಗ ಶಿಕ್ಷಣದ ವೀಡಿಯೋ ಸಿದ್ಧಪಡಿಸಿ ಕೊಡಲು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಯೋಗ ಕುರಿತು ಎರಡು ಮತ್ತು ಕೋವಿಡ್ 19 ಜಾಗೃತಿಯ ನಾಲ್ಕು ವೀಡಿಯೋಗಳನ್ನು ಕಳಿಸಿಕೊಟ್ಟಿದ್ದು, ಕೇಂದ್ರದಿಂದ ಮೆಚ್ಚುಗೆ ಸಿಕ್ಕಿದೆ.
– ಡಾ| ಬಿ.ಎನ್. ಗಂಗಾಧರ್, ನಿರ್ದೇಶಕರು, ನಿಮ್ಹಾನ್ಸ್
Advertisement