Advertisement

ಕೋವಿಡ್-19: ಮರಣ ಪ್ರಮಾಣ ಶೇ.1.93ಕ್ಕೆ ಇಳಿಕೆ, ಲಾಲಾರಸ ಪರೀಕ್ಷೆಗೆ ಗ್ರೀನ್‌ ಸಿಗ್ನಲ್‌

12:06 PM Aug 17, 2020 | keerthan |

ಹೊಸದಿಲ್ಲಿ/ಹ್ಯೂಸ್ಟನ್‌: ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಈಗ ಮರಣ ಪ್ರಮಾಣ ಶೇ.1.93ಕ್ಕಿಳಿದಿದೆ. ಜಗತ್ತಿನಲ್ಲೇ ಕನಿಷ್ಠ ಮರಣ ಪ್ರಮಾಣ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Advertisement

ಅಮೆರಿಕದಲ್ಲಿ 23 ದಿನಗಳಲ್ಲಿ 50 ಸಾವಿರ ಮಂದಿ ಮೃತಪಟ್ಟರೆ, ಬ್ರೆಜಿಲ್‌ನಲ್ಲಿ 95 ದಿನ, ಮೆಕ್ಸಿಕೋದಲ್ಲಿ 141 ದಿನಗಳಲ್ಲಿ 50 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಆದರೆ, ಭಾರತದಲ್ಲಿ ಸಾವಿನ ಸಂಖ್ಯೆ 50 ಸಾವಿರಕ್ಕೇರಲು 156 ದಿನಗಳು ಬೇಕಾದವು ಎಂದೂ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೆ, ದೇಶದ ಗುಣಮುಖ ಪ್ರಮಾಣವೂ ಶೇ.72 ಸಮೀಪಿಸಿದ್ದು, 18.60 ಲಕ್ಷಕ್ಕೂ ಅಧಿಕ ಮಂದಿ ವಾಸಿಯಾಗಿದ್ದಾರೆ.

63,490 ಪ್ರಕರಣ: ಶನಿವಾರದಿಂದ ರವಿವಾರದ ವರೆಗೆ 24 ಗಂಟೆಗಳಲ್ಲಿ ದೇಶದಲ್ಲಿ 63,490 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 944 ಮಂದಿ ಸಾವಿಗೀಡಾಗಿದ್ದಾರೆ. ಆ.7ರಿಂದ ನಿರಂತರವಾಗಿ (ಆ.11 ಹೊರತುಪಡಿಸಿ) ಭಾರತದಲ್ಲಿ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲದೆ, ಸತತ 12 ದಿನಗಳಿಂದಲೂ ಅಮೆ ರಿಕ, ಬ್ರೆಜಿಲ್‌ಗಿಂತಲೂ ಹೆಚ್ಚು ಪ್ರಕರಣ ಗಳು ಭಾರತದಲ್ಲಿ ಕಂಡುಬಂದಿವೆ.

ಲಾಲಾರಸ ಪರೀಕ್ಷೆಗೆ ಗ್ರೀನ್‌ ಸಿಗ್ನಲ್‌

ವ್ಯಕ್ತಿಯ ಲಾಲಾರಸ ಪರೀಕ್ಷೆ ಮೂಲಕ ಕೋವಿಡ್ ಪತ್ತೆಹಚ್ಚುವ ಸರಳ ಹಾಗೂ ತುರ್ತು ವಿಧಾನ ಅನುಸರಿಸಲು ಅಮೆರಿಕ ಮುಂದಾಗಿದೆ.

Advertisement

ಕೋವಿಡ್ ಸೋಂಕು ಪತ್ತೆಗೆ ಈಗಾಗಲೇ ಹಲವು ಮಾದರಿಗಳ ಪರೀಕ್ಷೆಗಳನ್ನು ಅಮೆರಿಕದ ಲ್ಯಾಬ್‌ಗಳು ಅನುಸರಿಸಿವೆ. ಆದರೆ, ನಿಖರ ಫ‌ಲಿತಾಂಶಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿರುವುದರಿಂದ, ವಿಶ್ವಾಸಾರ್ಹ ಫ‌ಲಿತಾಂಶ ಸಾಧ್ಯವಾಗದೆ ಇರುವುದ ರಿಂದ ಯುಎಸ್‌ ಫ‌ುಡ್‌ ಆ್ಯಂಡ್‌ ಅಡ್ಮಿನಿ ಸ್ಟ್ರೇಷನ್‌ (ಯುಎಸ್‌ಎಫ್ಡಿಎ) ಲಾಲಾ ರಸ ಪರೀಕ್ಷಾ ವಿಧಾನವನ್ನು “ಗೇಮ್‌ ಚೇಂಜರ್‌’ ಎಂದು ಘೋಷಿಸಿದೆ.

“ಕೋವಿಡ್ ಸೋಂಕಿನ ಪತ್ತೆಗೆ ಲಾಲಾ ರಸ ಪರೀಕ್ಷೆ ಅತ್ಯಂತ ಪರಿಣಾಮಕಾರಿ. ಪ್ರಯೋಗಾಲಯಕ್ಕೆ ಬಳಸಲ್ಪಡುವ ರಾಸಾ ಯನಿಕಗಳ ಕೊರತೆ ತಪ್ಪಿಸಲೂ ಈ ಟೆಸ್ಟ್‌ ಸೂಕ್ತವಾಗಿದೆ’ ಎಂದು ಯುಎಸ್‌ಎಫ್ಡಿಎ ನಿರ್ದೇಶಕ ಸ್ಟೀಫ‌ನ್‌ ಹ್ಯಾನ್‌ ತಿಳಿಸಿದ್ದಾರೆ.

ಎನ್‌ಬಿಎಯಿಂದ ಆರಂಭ: “ಸಲೈವಾ ಡೈರೆಕ್ಟ್ ಟೆಸ್ಟ್‌’ ಎಂದು ಕರೆಯಲ್ಪಡುವ ಈ ನೂತನ ಪರೀಕ್ಷಾ ವಿಧಾನ, ಎನ್‌ಪಿ ಸ್ವಾಬಿಂಗ್‌ ಹಾಗೂ ಇತರೆ ಸಾಂಪ್ರದಾಯಿಕ ವಿಧಾನಗಳಿಗಿಂತ ಕಡಿಮೆ ವೆಚ್ಚದ್ದಾಗಿದೆ. ನ್ಯಾಶನಲ್‌ ಬಾಸ್ಕೆಟ್‌ಬಾಲ್‌ ಅಸೋಸಿಯೇಶನ್‌ (ಎನ್‌ಬಿಎ) ಆಟಗಾರರು, ಸಿಬಂದಿ ಪರೀಕ್ಷೆ ಮೂಲಕ ಸಲೈವಾ ಡೈರೆಕ್ಟ್ ಟೆಸ್ಟ್‌ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next