Advertisement

ಲಂಡನ್‌: ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸಮಸ್ಯೆ

09:26 AM Apr 04, 2020 | sudhir |

ಲಂಡನ್‌: ಜೀವ ಸಂಕಟ ಆಗ್ತಾ ಇದೆ, ಸಾಯ್ತಿದಿನಿ ದಯವಿಟ್ಟು ಬದುಕಿಸ್ರೋ ಎಂದು ಆಸ್ಪತ್ರೆ ದಾಖಲಾಗುವಾಗಿಲ್ಲ. ಉಸಿರಾಟ ಸಮಸ್ಯೆ ಇದೆ ದಯವಿಟ್ಟು ಆಸ್ಪತ್ರೆ ಸೇರಿಸಿ ಎಂದರೆ ಕುಟುಂಬಸ್ಥರು ಹೆಚ್ಚೆಂದರೆ ಆಸ್ಪತ್ರೆಯ ಮೆಟ್ಟಿಲಿನತ್ತ ಕರೆತರಬಹುದು. ಆದರೆ ಚಿಕಿತ್ಸೆ ದೊರೆಯುವುದು ಅನುಮಾನ. ಇದು ಲಂಡನ್‌ ಆಸ್ಪತ್ರೆಯ ಸಮಸ್ಯೆ. ಅಲ್ಲಿನ ಪ್ರಮುಖ ಆಸ್ಪತ್ರೆಗಳು ವೆಂಟಿಲೇಟರ್‌ಮತ್ತು ಆಕ್ಸಿಜನ್‌ ಸಿಲಿಂಡರ್‌ಗಳ ಕೊರತೆಯನ್ನು ಎದುರಿಸುತ್ತಿವೆೆ. ಹಾಗಾಗಿ ಆಕ್ಸಿಜನ್‌ ತುಂಬಾ ಅಗತ್ಯವಿರುವ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲು ನಿರ್ಧರಿಸಿದೆ.

Advertisement

ದಿನಗಳ ಹಿಂದೆಯಷ್ಟೇ ಸುಮಾರು 40 ಸಾವಿರ ವೈದ್ಯ ಕೀಯ ಸಿಬಂದಿ ವೈದ್ಯಕೀಯ ಉಪಕರಣಗಳ ಕೋವಿಡ್ 19 ಇದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದರು. ಇಂಥ ಸಮಸ್ಯೆಗಳೇ ಹೆಚ್ಚಿದರೆ ಈಗ ಆಸ್ಪತ್ರೆಯಲ್ಲಿರುವ ಕೋವಿಡ್ 19 ರೋಗಿಗಳಿಗೂ ಚಿಕಿತ್ಸೆ ನೀಡಲು ಸಮಸ್ಯೆಯಾಗಬಹುದು. ಆಮ್ಲಜನಕ ಅವಲಂಬಿತ ರೋಗಿಗಳನ್ನು ಉಳಿಸಿಕೊಳ್ಳಲೂ ಕಷ್ಟವಾಗಬಹುದು.

ಯಾಕೆ ಸಮಸ್ಯೆ?
ವೆಂಟಿಲೇಟರ್‌ಅಭಾವಕ್ಕೆ ಪೂರೈಕೆಯಲ್ಲಿನ ವ್ಯತ್ಯಾಸದ ಜತೆಗೆ ಸೋಂಕಿತರ ಸಂಖ್ಯೆ ಇದ್ದಕ್ಕಿಂದಂತೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಹಾಗಾಗಿ ಆಕ್ಸಿಜನ್‌ಗೆ ಹೆಚ್ಚು ಬೇಡಿಕೆ ಬಂದಿದೆ. ಈಗಿರುವ ಸೋಂಕಿತರಿಗೆ ಬೇಕಾಗುವಷ್ಟು ಆಮ್ಲಜನಕ ಇಂಗ್ಲೆಂಡಿನ ಆಸ್ಪತ್ರೆಗಳಲ್ಲಿ ಇವೆ. ಆದರೆ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಅವರಿಗೆ ಚಿಕಿತ್ಸೆ ಕೊರತೆಯಾಗಲಿದೆ ಎನ್ನುತ್ತಾರೆ ಅಲ್ಲಿನ ವೈದ್ಯರು.

Advertisement

Udayavani is now on Telegram. Click here to join our channel and stay updated with the latest news.

Next