Advertisement
ಉಡುಪಿ ಜಿಲ್ಲೆಯಲ್ಲಿ ಸಂಚಾರ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ, ಸೆನ್ ಅಪರಾಧ ಪೊಲೀಸ್ ಠಾಣೆ ಗಳು ಸೇರಿ ಒಟ್ಟು 34 ಠಾಣೆಗಳಿವೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನವೊಂದಕ್ಕೆ ಕನಿಷ್ಠ ಎಂದರೂ ಸರಾಸರಿ 7 8 ಪ್ರಕರಣ ಗಳು ದಾಖಲಾಗುತ್ತಿದ್ದವು. ಸೆನ್ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಲಾಕ್‌ಡೌನ್ ಆದ ಅನಂತರ ಅಪರಾಧಗಳ ಸಂಖ್ಯೆ ಶೇ.90ರಷ್ಟು ಇಳಿಮುಖವಾಗಿದೆ. ಲಾಕ್‌ಡೌನ್ ನಡುವೆ 1 ವಾರ ಕಾಲ ಯಾವುದೇ ಪ್ರಕರಣ ದಾಖಲಾಗದ ಉದಾಹರಣೆಯೂ ಇದೆ.ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವಶ್ಯ ವಾಹನ ಹೊರತುಪಡಿಸಿ ಖಾಸಗಿ ವಾಹನ ರಸ್ತೆಗೆ ಇಳಿಯದಂತೆ ಸರಕಾರ ಆದೇಶಿಸಿದೆ. ಈ ಕಾರಣದಿಂದ ಶೇ.90ರಷ್ಟು ಮಂದಿಯ ವಾಹನ ರಸ್ತೆಗೆ ಇಳಿದಿಲ್ಲ. ಇನ್ನು ಅವಶ್ಯ ಸಾಮಗ್ರಿ ತರಲು ಹೆಚ್ಚು ದೂರ ಹೋಗದೆ ತತ್‌ಕ್ಷಣ ಮನೆಗೆ ಬರುತ್ತಿದ್ದಾರೆ. ಆದ್ದರಿಂದ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಅಪಘಾತ ಪ್ರಮಾಣ ಇಳಿಮುಖವಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಅಪರಾಧ ಚಟುವಟಿಕೆಗಳ ಸಂಖ್ಯೆ ಇಳಿಮುಖವಾಗಿದೆ. ಪೊಲೀಸರು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳದಂತೆ ನೋಡಿ ಕೊಳ್ಳಲಾಗುತ್ತಿದೆ.
ಕುಮಾರಚಂದ್ರ,
ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ