Advertisement
ನಾವೀಗ ಕೋವಿಡ್ ಆಧರಿಸಿ ಹೊಸ ಕಾಲಘಟ್ಟವನ್ನು ನಿರ್ಧರಿಸಬಹುದು. ಕೋವಿಡ್ ಗಿಂತ ಮೊದಲು (ಬಿ.ಸಿ.-ಬಿಫೋರ್ ಕೋವಿಡ್) ಮತ್ತು ಕೋವಿಡ್ ಬಳಿಕ (ಎ.ಸಿ.- ಆಫ್ಟರ್ ಕೋವಿಡ್) ಎಂದೂ ಯೋಚಿಸಬಹುದು.
Related Articles
Advertisement
– ಮಿತವ್ಯಯ ಕೃತಿಗೆ ಬರಬಹುದು. ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಸ್ವರ್ಯ ನಿರ್ಬಂಧ ವಿಧಿಸಿಕೊಳ್ಳುವ ಸಾಧ್ಯತೆಯಿದೆ.
– ಪ್ರಗತಿ ಮತ್ತು ವಿಜ್ಞಾನಕ್ಕೆ ಇತಿಮಿತಿಗಳಿವೆ ಎಂಬ ಭಾವನೆ ಮೂಡಬಹುದು. ಜತೆಗೆ ನಮ್ಮ ಮಧ್ಯಕಾಲೀನ ಪೂರ್ವಜರಂತೆ ಆರೋಗ್ಯ ಭೀತಿ ಕಾಡದಿರದು.
– ಧಾರ್ಮಿಕ ಪ್ರಜ್ಞೆ ಮತ್ತಷ್ಟು ಹೆಚ್ಚಿದರೂ ಅಚ್ಚರಿ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ ಹೀಗೆ ಪ್ರತಿ ಪರಿಕಲ್ಪನೆಯಲ್ಲೂ ಬದಲಾವಣೆಯಾಗಬಹುದು.
– ದೇಶದ ಗಡಿಯನ್ನು ಮುಕ್ತವಾಗಿರಿಸಿಕೊಳ್ಳುವ ಬಗ್ಗೆಯೂ ಮರುಚಿಂತನೆಯ ಸಾಧ್ಯತೆಯಿದೆ. ಹಿಂದೆಲ್ಲ ಯುದ್ಧದ ಕಾಲದಲ್ಲಿ ಮಾತ್ರ ಗಡಿಮುಚ್ಚಲಾಗುತ್ತಿತ್ತು.
– ದೇಶೀಯವಾಗಿ ಹೆಚ್ಚು ಪಿಪಿಇ ಕಿಟ್ ಹಾಗೂ ಅಗತ್ಯ ಔಷಧ ಉತ್ಪಾದನೆ ಬಗ್ಗೆ ಸರಕಾರ ಚಿಂತಿಸಬಹುದು. ಆರೋಗ್ಯ ಕ್ಷೇತ್ರದ ಸ್ವಾವಲಂಬನೆಯ ಅಗತ್ಯದ ಕುರಿತು ಪಾಠ ಕಲಿಸಿದೆ.
– ವಲಸೆ ನೀತಿಯಲ್ಲೂ ಬದಲಾವಣೆಯ ನಿರೀಕ್ಷೆಯಿದೆ. ವಿದೇಶಿ ಉದ್ಯೋಗದ ಆಸೆಗೆ ಕಡಿವಾಣ ಬಿದ್ದೀತು. ಜನರು ತಮ್ಮ ದೇಶದ ಸುರಕ್ಷೆಯನ್ನೂ ಗಮನದಲ್ಲಿಟ್ಟುಕೊಂಡಾರು.
– ನಿರುದ್ಯೋಗ ಪ್ರಮಾಣ ಏರಿಕೆಯಾದೀತು ಹಾಗೂ ಜನರ ಆರ್ಥಿಕ ಶಕ್ತಿ ಕಡಿಮೆಯಾಗ ಬಹುದು. ಇದು ನೇರವಾಗಿ ಮತ್ತು ಪರೋಕ್ಷವಾಗಿ ಹಲವು ಬದಲಾವಣೆಗೆ ಕಾರಣವಾದೀತು.
– ಸಾಂಕ್ರಾಮಿಕ ರೋಗಗಳು, ರೋಗನಿರೋಧಕ ಶಕ್ತಿ ವೃದ್ಧಿ, ಪರಮಾಣು ಪ್ರಸರಣ ಇತ್ಯಾದಿ ಕುರಿತು ಜನರಲ್ಲಿ ಹೆಚ್ಚಿನ ಕಾಳಜಿ ಮೂಡಬಹುದು.
– ಕಂಪೆನಿಗಳು ವೆಚ್ಚ ಕಡಿತ ಮಾಡಲು ಆಲೋಚಿಸುತ್ತವೆ. ಅದು ಹೊಸ ರೀತಿಯ ಕಾರ್ಯ ಶೈಲಿಗೆ ಕಾರಣವಾದೀತು. ಮನೆಯಿಂದಲೇ ಕೆಲಸ ಎಂಬುದಕ್ಕೆ ಹೆಚ್ಚು ಮನ್ನಣೆ ಸಿಗಬಹುದು. ಸಾಲಗಳು ದುಬಾರಿಯಾದೀತು.
– ಅನೇಕ ಸರಕು ಹಾಗೂ ಸೇವೆಗಳು ದುಬಾರಿಯಾದೀತು. ಈಗ ಅಗತ್ಯ ಎಂದುಕೊಂಡಂಥವು ಮುಂದೆ ವಿಲಾಸಿ ಸಾಲಿಗೆ ಸೇರಬಹುದು. ವ್ಯಾಪಾರ-ವ್ಯವಹಾರದಲ್ಲಿ ಹಿಂದಿನ ವೈಭವ ಮರುಕಳಿ ಸಲು ದೀರ್ಘ ಕಾಲ ಬೇಕಾದೀತು.