Advertisement

ಇಟಲಿ: 200 ಮಂದಿ ನಿಗೂಢ ಸಾವಿನ ತನಿಖೆ

04:19 PM Apr 19, 2020 | sudhir |

ಮಿಲನ್‌: ಕೋವಿಡ್‌-19 ಪ್ರಾರಂಭವಾದ ಬಳಿಕ ಮಿಲನ್‌ ನಲ್ಲಿರುವ ಅತೀ ದೊಡ್ಡ ಆರೈಕೆ ಕೇಂದ್ರವೊಂದರಲ್ಲಿ ಸುಮಾರು 200 ಜನರು ಅನುಮಾನಾಸ್ಪದ ಸಾವಿಗೆ ಒಳಗಾಗಿದ್ದಾರೆ.

Advertisement

ಫೆಬ್ರವರಿಯಲ್ಲಿ ಇಟಲಿಯಲ್ಲಿ ಕೊರೊನಾ ಹಾವಳಿ ಏಕಾಏಕಿ ಆರಂಭವಾದಾಗ ಮಿಲನ್‌ ಪಿಯೋ ಆಲ್ಬರ್ಗೊ ಟ್ರಿವುಲ್ಜಿಯೊ ಆರೈಕೆ ಮನೆಯಲ್ಲಿ ಸುಮಾರು 180ಕ್ಕೂ ಹೆಚ್ಚು ಜನರ ಸಾವು ಘಟಿಸಿತ್ತು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಲೊಂಬಾರ್ಡಿ ಪ್ರಾದೇಶಿಕ ಸರಕಾರದ ಪ್ರಧಾನ ಕಚೇರಿಯಿಂದ ತನಿಖಾಧಿಕಾರಿಗಳು ಬುಧವಾರ ದಾಖಲೆ ಗಳನ್ನು ವಶಪಡಿಸಿಕೊಂಡರು. ಸಿಬಂದಿ ನಿರ್ಲಕ್ಷÂದಿಂದ ವೈರಸ್‌ ಹರಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ಕೋವಿಡ್‌ ವೈರಸ್‌ ಇಷ್ಟೊಂದು ನಿವಾಸಿಗಳನ್ನು ಕೊಲ್ಲಲು ಸಾಧ್ಯವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

ಇಟಲಿ ದ್ವಿತೀಯ ಸ್ಥಾನ
ಈ ಕೇರ್‌ ಹೋಮ್‌ ಯುರೋಪಿನ ಅತಿದೊಡ್ಡ ಆರೈಕೆ ಕೇಂದ್ರಗಳಲ್ಲಿ ಒಂದು. ಇದು ಸಾವಿರಾರು ಜನರಿಗೆ ವಸತಿ ಒದಗಿಸುತ್ತದೆ. ಇಟಲಿಯ ಮಾಧ್ಯಮಗಳು ಸರಕಾರ ಈ ಆರೈಕೆ ಕೇಂದ್ರದ ಸತ್ಯಾಂಶವನ್ನು ಮರೆಮಾಚಿದೆ ಎಂದು ವರದಿ ಮಾಡಿವೆ. ಇಟಲಿಯು ಅಧಿಕೃತವಾಗಿ ಕೋವಿಡ್‌-19ನಿಂದ 21,645 ಸಾವುಗಳನ್ನು ಕಂಡಿದೆ. ಅಮೆರಿಕ ಮೊದಲ ಸ್ಥಾನ ದಲ್ಲಿದ್ದು, ಅನಂತರ ವಿಶ್ವದ ಎರಡನೇ ಅತಿ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಪೈಕಿ ಇಟಲಿ ದ್ವಿತೀಯ ಸ್ಥಾನದಲ್ಲಿದೆ.

ಆದರೆ ಹೆಚ್ಚಿನ ಆರೈಕೆ-ಕೇಂದ್ರಗಳಲ್ಲಿ ಸಂಭವಿಸಿದ ಸಾವುಗಳ ಅಧಿಕೃತ ಅಂಕಿ ಅಂಶಗಳನ್ನು ಸೇರಿಸಲಾಗಿಲ್ಲ. ಆದರೆ ಕೆಲವು ವೈದ್ಯರ ಪ್ರಕಾರ ಇಟಲಿಯ ನೈಜ ಸಂಖ್ಯೆ ಎರಡು ಪಟ್ಟು ಹೆಚ್ಚಿರುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next