Advertisement

ಕೋವಿಡ್‌ 19 ನಿಯಂತ್ರಣಕ್ಕೆ ಪ್ರತಿರಾತ್ರಿ ನಿಷೇಧಾಜ್ಞೆ

06:24 AM Jul 05, 2020 | Lakshmi GovindaRaj |

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ 19 ವೈರಸ್‌ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿದಿನ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆ ವರೆಗೂ ಹಾಗೂ ಆ.2ರವರೆಗೆ ಪ್ರತಿ ಭಾನುವಾರ ದಿನ ನಿತ್ಯದ ಅಗತ್ಯ ಸೇವೆಗಳನ್ನು ಹೊರತುಪಡಿಸಿ  ಲಾಕ್‌ಡೌನ್‌ ಜಾರಿ ಮಾಡಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶಿಸಿದ್ದಾರೆ. ಜು.5 ರಿಂದ ಆ.2 ರವರೆಗಿನ ಎಲ್ಲಾ ಭಾನುವಾರ ಪೂರ್ಣದಿನ ಲಾಕ್‌ ಡೌನ್‌ ಇರುತ್ತದೆ.

Advertisement

ಆದರೆ, ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ  ನಿರ್ಬಂಧವಿರುವುದಿಲ್ಲ. ಸಾರ್ವಜನಿಕ ಸ್ಥಳಗಳು, ಕಚೇರಿಗಳು ಮತ್ತು ಹೊರಗೆ ಪ್ರಯಾಣಿಸುವ ವೇಳೆಯಲ್ಲಿ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಒಂದೊಮ್ಮೆ ಧರಿಸದಿದ್ದಲ್ಲಿ 200 ರೂ. ದಂಡ ವಿಧಿಸಲಾಗುವುದು ಎಂದು  ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿ ಕಡ್ಡಾಯವಾಗಿ 6 ಅಡಿಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ, ವ್ಯಾಪಾರ ಮಳಿಗೆಗಳ ಬಳಿ ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳವಂತೆ  ನೋಡಿಕೊಳ್ಳುವುದು ಮಳಿಗೆದಾರರ ಜವಾಬ್ದಾರಿ ಎಂದು ತಿಳಿಸಿದ್ದಾರೆ.

ಒಂದು ವೇಳೆ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ನಡೆಸಿದಲ್ಲಿ ಮಳಿಗೆ  ದಾರರ ವಿರುದಟಛಿ ಕ್ರಿಮಿನಲ್‌ ಪ್ರಕರಣ ಒಳಗೊಂಡಂತೆ ಕಾನೂನು ಕ್ರಮ  ಜರುಗಿಸಲಾಗುವು ದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿರ್ಬಂಧಿಸಿದೆ. ನಿರ್ಬಂಧವ ನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ನಿಯಮಗಳನ್ವಯ ದಂಡ ವಿಧಿಸಲಾಗುವು ದು. ಬೃಹತ್‌ ಸಾರ್ವಜನಿಕ ಸಭೆ ಹಾಗೂ ಒಟ್ಟುಗೂಡುವಿ  ನಿಷೇಧಿಸಲಾಗಿದೆ.

ಜು.3 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೋಲಾರ ಜಿಲ್ಲಾದ್ಯಂತ ಪ್ರತಿದಿನ ಸಂಜೆ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕಫೂ ಜಾರಿಯಲ್ಲಿರುತ್ತ ದೆ. ಈ ಕಫೂ  ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿ  ದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಆದೇಶವು ತುರ್ತು ವೈದಕೀಯ ಸೇವೆಗಳು, ಎಲ್ಲಾ ರೀತಿಯ ಸರಕು ಸಾಗಿಸುವ ವಾಹನಗಳು,

ಅಗತ್ಯ ಸೇವೆಗಳ ಪೂರೈಕೆಯಲ್ಲಿ ನಿರತವಾಗಿರುವ ಪಾಸ್‌ ಹೊಂದಿರುವ ಖಾಸಗಿ ವಾಹನಗಳು, ಸರಕಾರಿ ವಾಹನಗಳು, ಕರ್ತವ್ಯ ನಿರತ ಸರಕಾರಿ ನೌಕರರ ವಾಹನಗಳು, ಹಾಪ್‌ ಕಾಮ್ಸ್‌, ಪಡಿತರ ಆಹಾರ ಪದಾರ್ಥಗಳ ಹೋಂ ಡೆಲಿ ವರಿಗಾಗಿ,  ಕಿಚನ್‌ ಸೇವೆಗಳು(ರಾತ್ರಿ 9 ಗಂಟೆ ಯವರೆಗೆ ಮಾತ್ರ) ಹಾಗೂ ಕೃಷಿ ಚಟುವಟಿಕೆ ಗಳಿಗೆ ಸಂಬಂಧಿಸಿದ ಸೇವೆಗಳಿಗೆ ಅನ್ವಯಿಸುವುದಿಲ್ಲ. ಈ ಆದೇಶವು ಒಂದಕ್ಕಿಂತ ಹೆಚ್ಚಿನ ಪಾಳಿಯಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ

Advertisement

ಕೈಗಾರಿಕಾ ಘಟಕಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ/ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಪ್ರಯಾಣಿಸಿರುವ ಸಾರ್ವಜನಿಕರು ಮತ್ತು ಸರಕು ಸರಂಜಾಮುಗಳು ವಿವಿಧ ಪ್ರದೇಶಗಳಿಂದ ಆಗಮಿಸುವ ಸರಕು ಅನ್‌ ಲೋಡ್‌ ಪ್ರಕ್ರಿಯೆ, ಬಸ್‌, ರೈಲು ವಿಮಾನ ಗಳಿಂದ ಆಗಮಿಸಿ ತಮ್ಮ  ವಾಸಸ್ಥಾನಗಳಿಗೆ ತೆರಳುತ್ತಿರುವ ಸಾರ್ವಜನಿಕರಿಗೆ ಅನ್ವಯಿಸು ವುದಿಲ್ಲ. ಈ ಆದೇಶವು ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲ್ಪಡುವ  ಆದೇಶಗಳ ನಿಬಂಧನೆಗೊಳಪಟ್ಟಿರುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next