Advertisement

ಹೊಸಕೋಟೆ: ಕೋವಿಡ್‌ 19 ಸೋಂಕಿಗೆ ವೃದ್ಧೆ ಸಾವು

07:11 AM Jun 21, 2020 | Lakshmi GovindaRaj |

ಹೊಸಕೋಟೆ: ಶನಿವಾರ ಕೋವಿಡ್‌ 19 ಸೋಂಕಿನಿಂದಾಗಿ 60 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಜಿಲ್ಲೆ ಯಲ್ಲಿ ಇದು ಕೋವಿಡ್‌ 19 ಸೋಂಕಿನಿಂದ ಸಂಭವಿಸಿರುವ 2ನೇ ಸಾವಾಗಿದೆ. ಅಲ್ಲದೇ ಮತ್ತೆ ನಾಲ್ಕು ಪ್ರಕರಣ ಗಳು  ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 30ಕ್ಕೇರಿದೆ.ವೃದ್ಧೆ, ನಗರದ ವಿಶ್ವೇಶ್ವರಯ್ಯ ಬಡಾವಣೆಯ 7ನೇ ಕ್ರಾಸ್‌ನ ನಿವಾಸಿಯಾಗಿದ್ದಾರೆ.

Advertisement

ಅವರು ಜೂ. 17ರಂದು ಎದೆನೋವು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ  ದಾಖಲಾಗಿದ್ದರು. ಅವರನ್ನು ತಪಾಸಣೆ ನಡೆಸಿದ ವೈದ್ಯರು ಉಸಿರಾಟದ ತೊಂದರೆಯೆಂದು ತಿಳಿಸಿ, ರಾಜೀವ್‌ಗಾಂಧಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪರೀ ಕ್ಷೆಗೆ ಒಳಪಡಿಸಿದಾಗ ಜೂ.19ರಂದು ಕೋವಿಡ್‌ 19 ಸೋಂಕು ದೃಢ ಪಟ್ಟಿದ್ದು,  ಜೂ.20ರಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಮತ್ತೆ 4 ಕೋವಿಡ್‌ 19 ಸೋಂಕು ದೃಢ: ಹೊಸ ಕೋಟೆಯಲ್ಲಿ 3 ಹಾಗೂ ವಿಜಯಪುರದಲ್ಲಿ 1 ಸೇರಿ ಶನಿವಾರ ಒಟ್ಟು ನಾಲ್ಕು ಕೋವಿಡ್‌ 19 ಪ್ರಕರಣಗಳು ದೃಢಪಟ್ಟಿವೆ. ತಾಲೂಕು ಸರಕಾರಿ ಆಸ್ಪತ್ರೆ ಯಲ್ಲಿ ಜೂ.17ರಂದು ಲ್ಯಾಬ್‌  ಟೆಕ್ನಿಶಿಯನ್‌ಗೆ ಸೋಂಕು ಇರು ವುದು ದೃಢಪಟ್ಟ ಕಾರಣದಿಂದಾಗಿ ವೈದ್ಯರು, ಸಿಬ್ಬಂದಿ ವರ್ಗದವ ರನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಲಾಗಿತ್ತು.

ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಉಳಿದ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರದು ನೆಗೆ ಟಿವ್‌ ಎಂದು ವರದಿಯಾಗಿದೆ. ಮಹಾರಾಷ್ಟ್ರದಿಂದ ಬಂದಿದ್ದ ತಾಲೂಕಿನ ಜಡಿಗೇನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದ 18 ವರ್ಷದ  ಯುವಕ, 39 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಜೂ.17ರಿಂದ ಈವರೆಗೂ ತಾಲೂಕಿನಲ್ಲಿ ಒಟ್ಟು 8 ಕೋವಿಡ್‌ 19 ಸೋಂಕಿನ ಪ್ರಕರಣಗಳು ಕಂಡು ಬಂದಿವೆ.

ಶಾಸಕ ಬಚ್ಚೇಗೌಡ ಆತಂಕ: ತಾಲೂಕಿನಲ್ಲಿ ಕೋವಿಡ್‌ 19 ಸೋಂಕಿನಿಂದ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿರುವ ಬಗ್ಗೆ ಶಾಸಕ ಶರತ್‌ ಬಚ್ಚೇಗೌಡ ಆತಂಕ ವ್ಯಕ್ತಪಡಿಸಿದರು. ಲಾಕ್‌ಡೌನ್‌ ನಿಯಮ ಸಡಿಲಗೊಳಿಸಿದ ನಂತರ  ತಾಲೂಕಿನಲ್ಲಿ ಹೆಚ್ಚಿನ ಪ್ರಕರಣ ಗಳು ಕಂಡುಬರುತ್ತಿರುವುದು ವಿಷಾದನೀಯ ಎಂದರು.

Advertisement

ವ್ಯಾಪಾರಿಗೆ ಸೋಂಕು ದೃಢ
ವಿಜಯಪುರ: ಪಟ್ಟಣದ ಚನ್ನಕೇಶವಸ್ವಾಮಿ ದೇವಾಲಯದ ಬಳಿ ವಾಸವಿದ್ದ 47 ವರ್ಷದ ವ್ಯಕ್ತಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ವ್ಯಕ್ತಿಯು ಪಟ್ಟಣದ ಗಾಂಧಿ ಚೌಕ್‌ನಲ್ಲಿ ದಿನಸಿ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದು,  ಜೂನ್‌ 18ರಂದು ಜ್ವರ ಬಂದ ಕಾರಣ ದೇವನಹಳ್ಳಿಯ ಲೀನಾ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು.

ಅವರ ಗಂಟಲು ದ್ರವ ಮಾದರಿ ಪರೀಕ್ಷಿಸಿದಾಗ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು, ಅವರನ್ನು ಬೆಂಗಳೂರಿನ ಸಿ.ವಿ. ರಾಮನ್‌  ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಸೋಂಕಿತರ ಪತ್ನಿ, ಪುತ್ರಿಯನ್ನು ಕ್ವಾರಂಟೈನ್‌ಗೊಳಿಸಲಾಗಿದ್ದು, ವಾಸವಿದ್ದ ರಸ್ತೆ ಸೀಲ್‌ಡೌನ್‌ ಮಾಡಲಾಗಿದೆ. ವ್ಯಾಪಾರದ ಸ್ಥಳಗಳಲ್ಲಿ ಗ್ರಾಹಕರು ಅಥವಾ ಇತರರಿಂದ ಸೋಂಕು ತಗಲಿರುವ ಸಾಧ್ಯತೆ  ಇರಬಹುದೆಂದು ಶಂಕಿಸಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಸಂಜಯ್‌ ತಿಳಿಸಿದರು.

ಸೋಂಕಿತ ವಾಸವಿದ್ದ ಸ್ಥಳಕ್ಕೆ ವಿಜಯಪುರ ಠಾಣೆ ಪಿಎಸ್‌ಐ ಮಂಜುನಾಥ್‌, ಪುರಸಭೆ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್‌ ಕುಮಾರ್‌, ಮುಖ್ಯ ಆರೋಗ್ಯ ಅಧಿಕಾರಿ ಚಿದಾನಂದ್‌, ಪುರಸಭೆ ಆರೋಗ್ಯಾಧಿಕಾರಿ ಉದಯ್‌ ಕುಮಾರ್‌, ಪರಿಸರ ಅಭಿಯಂತರ ಮಹೇಶ್‌, ಗ್ರಾಮ ಲೆಕ್ಕಾಧಿಕಾರಿ ಸುನಿಲ, ಪುರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next