Advertisement

ಕೋವಿಡ್ 19 ಸೋಂಕು ಯಾವುದೇ ಜನಾಂಗಕ್ಕೆ ಸೀಮಿತವಲ್ಲ: ಜ್ವಾಲಾ

12:11 AM Apr 20, 2020 | Sriram |

ಹೊಸದಿಲ್ಲಿ: ಕೋವಿಡ್ 19 ಸೋಂಕು ಎನ್ನುವುದು ಯಾವುದೇ ಜನಾಂಗ ಅಥವಾ ಧರ್ಮವನ್ನು ನೋಡುತ್ತದೆ ಎಂದು ನನಗನಿಸುವುದಿಲ್ಲ ಎಂದು ಭಾರತದ ಮಾಜಿ ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾ ಹೇಳಿದ್ದಾರೆ.

Advertisement

ಭಾರತದಲ್ಲಿ ಕೋವಿಡ್ 19 ವೈರಸ್‌ ಹರಡುವುದಕ್ಕೆ ಸಂಬಂಧಿಸಿದಂತೆ ಬಬಿತಾ ಪೋಗಟ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಜ್ವಾಲಾ ಕ್ಷಮಿಸಿ ಬಬಿತಾ. ಈ ವೈರಸ್‌ ಯಾವುದೇ ಜನಾಂಗ ಅಥವಾ ಧರ್ಮವನ್ನು ನೋಡುವುದಿಲ್ಲ. ನಿಮ್ಮ ಹೇಳಿಕೆಯನ್ನು ದಯವಿಟ್ಟು ವಾಪಸ್‌ ಪಡೆಯಿರಿ. ನಾವು ಕ್ರೀಡಾ ಪಟುಗಳು. ಜಾತ್ಯತೀತವಾಗಿ ನಾವು ನಮ್ಮ ಸುಂದರ ದೇಶವನ್ನು ಪ್ರತಿನಿಧಿಸಿದ್ದೇವೆ. ನಾವು ಗೆದ್ದಾಗ ದೇಶದ ಎಲ್ಲ ಜನ ತಮ್ಮದೇ ಗೆಲುವು ಎಂಬಂತೆ ಸಂಭ್ರಮಿಸುತ್ತಾರೆ ಎಂದು ಹೇಳಿದ್ದಾರೆ.

ಆದರೆ ಪೊಲೀಸರು ಹಾಗೂ ವೈದ್ಯರ ವಿರುದ್ಧ ದಾಳಿ ಮಾಡುವುದನ್ನು ತಾವು ಬೆಂಬಲಿಸುವುದಿಲ್ಲ ಕೋವಿಡ್‌-19 ಮಹಾಮಾರಿಯನ್ನು ಹೋಗಲಾಡಿಸುವ ಸಲುವಾಗಿ ಇವರು ಹಗಲು ರಾತ್ರಿ ಎನ್ನದೆ ಕುಟುಂಬದವರಿಂದ ದೂರವಿದ್ದು ಶ್ರಮಿಸುತ್ತಿದ್ದಾರೆ. ಅವರನ್ನು ನಾವು ಗೌರವಿಸಬೇಕೇ ವಿನಃ ಅವರ ಸೇವೆಗೆ ಅಡ್ಡಿಪಡಿಸುವಂತಹ ಯಾವುದೇ ಕಾರ್ಯವನ್ನು ಮಾಡಬಾರದು ಎಂದು ಜ್ವಾಲಾ ಗುಟ್ಟಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next