ದಾವಣಗೆರೆ: ಜಿಲ್ಲೆಯ ಹರಿಹರದ ಆರೋಗ್ಯ ಕಾರ್ಯಕರ್ತೆ ಒಳಗೊಂಡಂತೆ ಆರು ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.
39 ವರ್ಷದ ಮಹಿಳೆ(ರೋಗಿ ನಂಬರ್11156) ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ಕೆಟಿಜೆ ನಗರದ 21 ವರ್ಷದ ಮಹಿಳೆ (ರೋಗಿ ನಂಬರ್ 11157) ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಶೀತ ಜ್ವರದಿಂದ ಬಳಲುತ್ತಿದ್ದ ದಾವಣಗೆರೆಯ 34 ವರ್ಷದ ವ್ಯಕ್ತಿ(ರೋಗಿ ನಂಬರ್ 11158) ಕಾಣಿಸಿಕೊಂಡಿರುವ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ರೋಗಿ ನಂಬರ್ 8804 ಸಂಪರ್ಕದಿಂದ ಚನ್ನಗಿರಿಯ 60 ವರ್ಷದ ವೃದ್ಧೆ(ರೋಗಿ ನಂಬರ್ 11159) ಸೋಂಕು ತಗುಲಿದೆ. ರೋಗಿ ನಂಬರ್ 9890 ಸಂಪರ್ಕದಿಂದ ಹರಿಹರದ 34 ವರ್ಷದ ಮಹಿಳೆ (ರೋಗಿ ನಂಬರ್ 11160), 45 ವರ್ಷದ ವ್ಯಕ್ತಿ (ರೋಗಿ ನಂಬರ್ 11161) ಸೋಂಕು ದೃಢಪಟ್ಟಿದೆ.
ಹತ್ತು ದಿನಗಳ ಕಾಲ ಸೋಂಕಿನ ಲಕ್ಷಣ ಕಾಣಿಸದ ಹಿನ್ನೆಲೆಯಲ್ಲಿ ದಾವಣಗೆರೆ ತರಳಬಾಳು ಬಡಾವಣೆಯ ಐವತ್ತು ವರ್ಷದ ವೃದ್ಧ(ರೋಗಿ ನಂಬರ್ 7576), ಚನ್ನಗಿರಿಯ ಕುಂಬಾರಬೀದಿಯ 58 ವರ್ಷದ ಮಹಿಳೆ (ರೋಗಿ ನಂಬರ್ 8801), 14 ವರ್ಷದ ಬಾಲಕ(ರೋಗಿ ನಂಬರ್ 8802) ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದರು.
ಜಿಲ್ಲೆಯಲ್ಲಿ ಒಟ್ಟು 289 ಪ್ರಕರಣಗಳಲ್ಲಿ 240 ಜನರು ಬಿಡುಗಡೆಯಾಗಿದ್ದಾರೆ. ಏಳು ಜನರು ಮೃತಪಟ್ಟಿದ್ದಾರೆ. 42 ಸಕ್ರಿಯ ಪ್ರಕರಣಗಳಿವೆ.