Advertisement

ಮಹಿಳೆಯಲ್ಲಿ ಕೋವಿಡ್‌ 19 ಸೊಂಕು ಪತ್ತೆ

07:08 AM Jun 02, 2020 | Team Udayavani |

ಆನೇಕಲ್‌: ಪಟ್ಟಣದ ಮಹಿಳೆಯೊಬ್ಬರಿಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಬೆನ್ನಲ್ಲೆ ಮತ್ತೂಂದು ಪ್ರಕರಣ  ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

Advertisement

ಪಟ್ಟಣದ ವಾರ್ಡ್‌ ನಂ.7ರ ಬಾಬಯ್ಯನಗುಡಿ ರಸ್ತೆಯಲ್ಲಿದ್ದ ಮಹಿಳೆ, ಕಳೆದ ಎರಡು ದಿನಗಳಿಂದ ವಾಂತಿ, ಭೇದಿಯಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯಲು ಹೋಗಿದ್ದಾಗ ಕೋವಿಡ್‌ 19 ಸೋಂಕು ತಗುಲಿದೆ ಎಂಬುದು ತಿಳಿದಿದೆ. ಸೋಂಕಿತ ಮಹಿಳೆ ಮನೆ ರಸ್ತೆ ಸುತ್ತಮುತ್ತ 100 ಮೀ. ಸೀಲ್‌ಡೌನ್‌ ಮಾಡಲಾಗಿದ್ದು,

ಪುರಸಭೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು,  ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಾಸಾಯನಿಕ ಜೌಷಧ ಸಿಂಪಡಿಸಿದರು. ಈ ಭಾಗದಲ್ಲಿ ಯಾರೂ ಓಡಾಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, 14 ದಿನಗಳು ಈ ಭಾಗ ಸೀಲ್‌ಡೌನ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸೋಂಕಿತ ಮಹಿಳೆಯ  ಪತಿ, ಪುತ್ರ, ಆಟೋ ಚಾಲಕ ಹಾಗೂ ನೇರ ಸಂಪರ್ಕದಲ್ಲಿದ್ದ ಸುಮಾರು 18 ಮಂದಿಗೆ ಕ್ವಾರಂಟೈನ್‌ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಜ್ಞಾನಪ್ರಕಾಶ್‌ ತಿಳಿಸಿದರು.

ಈ ಪ್ರಕರಣದ ಮೂಲಕ ಶಿಕಾರಿ ಪಾಳ್ಯದ ಇಬ್ಬರು, ಹೆಬ್ಬಗೋಡಿ  ಎಎಸ್‌ಐ ಒಬ್ಬರು ಸೇರಿದಂತೆ 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಮಾತ್ರ ಮೃತ ಪಟ್ಟಿದ್ದು, ತಾಲೂಕಿನಲ್ಲಿ 5 ಪ್ರಕರಣಗಳು ದಾಖಲಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next