Advertisement

ಮೂವರಲ್ಲಿ ಕೋವಿಡ್‌ 19 ಸೋಂಕು ಪತ್ತೆ

07:50 AM Jun 04, 2020 | Lakshmi GovindaRaj |

ದೇವನಹಳ್ಳಿ: ತಾಲೂಕಿನ ಇಲ್ಲತೊರೆ ಗ್ರಾಮದಲ್ಲಿ ಬುಧವಾರ ಮತ್ತಿಬ್ಬರು ಹಾಗೂ ದೊಡ್ಡ ಬಳ್ಳಾಪುರದ ವ್ಯಕ್ತಿಯೊಬ್ಬರಿಗೆ ಸೇರಿ ಬುಧ ವಾರ ಒಟ್ಟು 3 ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವಾರದಲ್ಲಷ್ಟೇ ಮೊದಲ ಪ್ರಕರಣ  ದೃಢಪಟ್ಟಿತ್ತು. ಸದ್ಯ ಇದು ಮೂರನೇ ಪ್ರಕರಣವಾಗಿದ್ದು, ಸಮುದಾಯಕ್ಕೆ ವ್ಯಾಪಿಸಿದೆಯೇ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.

Advertisement

ಗ್ರಾಮದ ಇಬ್ಬರು ಮಹಿಳೆಯರ ಗಂಟಲು ದ್ರವವನ್ನು ಕೋವಿಡ್‌ 19 ಸೋಂಕು ಪರೀಕ್ಷೆಗೆ  ಕಳುಹಿಸಲಾಗಿತ್ತು. ಕೋವಿಡ್‌ 19 ವೈರಾಣು ಪರೀಕ್ಷೆ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ತಾಲೂ ಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಇಲ್ಲತೊರೆ ಗ್ರಾಮದ 29 ವರ್ಷದ (ಪಿ.3463) ಮತ್ತು ಅದೇ ಗ್ರಾಮದ 58 ವರ್ಷದ (ಪಿ.3464)  ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.

ಇದೇ ಗ್ರಾಮದಲ್ಲಿ ಸ್ಥಳೀಯ ರೈತ ಹಾಗೂ ತರಕಾರಿ ವ್ಯಾಪಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಆದರೆ ಮತ್ತೆ ಇಬ್ಬರಿಗೆ ಕಾಣಿಸಿ ಕೊಂಡು ತಾಲೂಕಿನಲ್ಲಿ 5 ದಿನ ದಲ್ಲಿಯೇ 3 ಪ್ರಕರಣ ವಾಗಿದೆ. ಕೋವಿಡ್‌ 19 ಹೆಮ್ಮಾರಿ ತಾಲೂಕಿಗೆ ಮಾರಕ ವಾಗಿದೆ.  ಕೋವಿಡ್‌ 19 ಆರಂಭಗೊಂಡ ದಿನ ದಿಂದ ಮೇ.29ರವರೆಗೆ ಪ್ರಕರಣಗಳು ಕಂಡು ಬಂದಿರಲಿಲ್ಲ.

ಮೇ.29ರಂದು ಮೊದಲ ಪ್ರಕರಣದಿಂದ ತಾಲೂಕಿಗೆ ಕೋವಿಡ್‌ 19 ಹೆಜ್ಜೆ ಯಿಟ್ಟಿದೆ. ಜಿಲ್ಲೆಯಲ್ಲಿ ಮೊದಲು 5 ಪ್ರಕರಣ ಗಳಿದ್ದವು. ಅವರೆಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮೇ 22ರಿಂದ ಜೂನ್‌ 2ರವರೆಗೆ, ಒಟ್ಟು 12 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ 17 ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಇಲ್ಲತೊರೆ ಗ್ರಾಮವನ್ನು ತಾಲೂಕು ಮಟ್ಟದ ಅಧಿಖಾರಿಗಳು ಸೀಲ್‌ಡೌನ್‌ ಮಾಡಲಾಗಿದೆ.

ಜಿಲ್ಲೆಯಲ್ಲಿ ಸಂಗ್ರ ಹಿಸಿದ 1,751 ಮಾದರಿಯಲ್ಲಿ (ತಬ್ಲಿ ಗೆ ಹೋಗಿ ಬಂದವರನ್ನು ಹೊರತುಪಡಿಸಿ) 15 ಜನರಲ್ಲಿ ಪಾಸಿಟಿವ್‌ ಕಂಡು  ಬಂದಿತ್ತು. 1,430 ಜನರಲ್ಲಿ ಸೋಂಕು ಕಂಡು ಬಂದಿರಲಿಲ್ಲ. 248 ಜನರ  ಫ‌ಲಿತಾಂಶಗಳ ವರದಿ ಬರಬೇಕಿದೆ. 723 ಜನರನ್ನು ಕಡ್ಡಾಯ ದಿಗ್ಬಂಧನಕ್ಕೆ ಒಳಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next