Advertisement

ಮಾನವನ ವೀರ್ಯದಲ್ಲಿಯೂ ಕೋವಿಡ್-19 ಸೋಂಕು ಪತ್ತೆ

01:19 AM May 10, 2020 | Sriram |

ಬೀಜಿಂಗ್‌: ಪುರುಷನ ವೀರ್ಯದಲ್ಲೂ ಕೋವಿಡ್-19ವೈರಸ್‌ ಪತ್ತೆಯಾಗಿದೆ. “ಜಾಮಾ ನೆಟ್‌ವರ್ಕ್‌ ಓಪನ್‌’ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ವರದಿ ಈ ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದೆ. ಚೀನದ ಶಾಂಗ್ಕಿಯು ಮುನಿಸಿಪಲ್‌ ಆಸ್ಪತ್ರೆಯ ವೈದ್ಯರು ನಡೆಸಿದ ಸಂಶೋಧನೆಯಲ್ಲಿ ಈ ಸಂಗತಿ ಗೊತ್ತಾಗಿದೆ.

Advertisement

ಕೋವಿಡ್-19 ಸೋಂಕಿತ 38 ಪುರುಷರನ್ನು ಇಲ್ಲಿನ ಮುನಿಸಿಪಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ 6 ಮಂದಿ ಪುರುಷರ ವೀರ್ಯದಲ್ಲಿ ಕೋವಿಡ್-19ವೈರಸ್‌ ಇರುವುದು ಪತ್ತೆಯಾಗಿದೆ. ಈ ಪೈಕಿ ನಾಲ್ವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿಲ್ಲ. ಉಳಿದಿಬ್ಬರು ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ, ಈ ಸಂಬಂಧ ದೀರ್ಘ‌ ಕಾಲದ ಅಧ್ಯಯನ ನಡೆಸಲಾಗಿಲ್ಲ. ಹೀಗಾಗಿ, ಪುರುಷನ ವೀರ್ಯದಲ್ಲಿ ಈ ವೈರಸ್‌ ಎಷ್ಟು ಕಾಲ ಕ್ರಿಯಾಶೀಲವಾಗಿ ಇರಬಹುದು, ಲೈಂಗಿಕವಾಗಿ ಸಂಗಾತಿಗೆ ವೈರಸ್‌ ಅನ್ನು ಹರಡು ವಷ್ಟು ಕಾಲ ಅದು ಜೀವಂತವಾಗಿ, ಕ್ರಿಯಾಶೀಲವಾಗಿ ಇರಬಹುದೇ, ಲೈಂಗಿಕ ಕ್ರಿಯೆಯ ಮೂಲಕ ಆತ ತನ್ನ ಸಂಗಾತಿಗೆ ವೈರಸ್‌ ಅನ್ನು ಹರಡಬಹುದೇ ಎಂಬುದು ತಿಳಿದು ಬಂದಿಲ್ಲ.

ಆದರೆ, ಈ ಹಿಂದಿನ ಅಧ್ಯಯನ ವರದಿಗೆ ಇದು ವ್ಯತಿರಿಕ್ತವಾಗಿದೆ. ಕಳೆದ ತಿಂಗಳು ಕೋವಿಡ್-19 ಸೋಂಕಿತ ಚೀನದ 34 ಪುರುಷರ ಮೇಲೆ ಈ ಸಂಬಂಧ ಅಧ್ಯಯನ ನಡೆಸಲಾಗಿತ್ತು. “ಫ‌ರ್ಟಿಲಿಟಿ ಆ್ಯಂಡ್‌ ಸ್ಟೆರಿಲಿಟಿ’ ನಿಯಕಾಲಿಕದಲ್ಲಿ ಈ ವರದಿ ಪ್ರಕಟವಾಗಿತ್ತು. ಚೀನ, ಅಮೆರಿಕದ ಸಂಶೋಧಕರು ವ್ಯಕ್ತಿಗಳಲ್ಲಿ ರೋಗ ಪತ್ತೆಯಾದ ಬಳಿಕ 8 ದಿನಗಳಿಂದ ಹಿಡಿದು ಮೂರು ತಿಂಗಳ ಕಾಲ ನಿರಂತರ ಅಧ್ಯಯನ ನಡೆಸಿದ್ದರು. ಆದರೆ, ಇವರುಗಳ ವೀರ್ಯದಲ್ಲಿ ಕೋವಿಡ್-19 ವೈರಸ್‌ ಪತ್ತೆಯಾಗಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತಾಹ್‌ ವಿಶ್ವವಿದ್ಯಾಲಯದ ಡಾ| ಜಾನ್‌ ಹೊಟಾಲಿಂಗ್‌, ಬಹುಶಃ ಹೊಸ ಅಧ್ಯಯನವನ್ನು ಅತಿ ರೋಗ ಪೀಡಿತ ಪುರುಷರ ಮೇಲೆ ನಡೆಸಿರಬಹುದು. ಅಲ್ಲದೆ, ಅಧ್ಯಯನಕ್ಕೊಳಗಾದವರು ಸಕ್ರಿಯ ರೋಗಿಗಳಾಗಿರಬಹುದು ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ “ಅಮೆರಿಕನ್‌ ಸೊಸೈಟಿ ಫಾರ್‌ ರಿಪ್ರೊಡಕ್ಟಿವ್‌ ಮೆಡಿಸಿನ್‌’, ಹೊಸ ಅಧ್ಯಯನ ಆತಂಕಕ್ಕೆ ಕಾರಣವಾಗಬಾರದು. ಇದೊಂದು ಎಚ್ಚರಿಕೆಯಷ್ಟೆ ಎಂದಿದೆ.

Advertisement

“14 ದಿನಗಳ ಕಾಲ ರೋಗಲಕ್ಷಣ ಇಲ್ಲದಿರುವುದು ಖಾತ್ರಿಯಾದ ಬಳಿಕವಷ್ಟೇ ವ್ಯಕ್ತಿಯೊಬ್ಬ ಸಂಗಾತಿ ಜತೆ ಲೈಂಗಿಕ ಸಂಪರ್ಕ ಹೊಂದುವುದು ಒಳ್ಳೆ ಯದು. ಆರೋಗ್ಯದ ದೃಷ್ಟಿಯಿಂದ ಈ ಎಚ್ಚರಿಕೆ ಅಗತ್ಯ’ ಎಂದು ಈ ಹಿಂದಿನ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಡಾ| ಪೀಟರ್‌ ಶ್ಲೆಗೆಲ್‌ ತಿಳಿಸಿದ್ದಾರೆ.

ಇದೇ ವೇಳೆ, ರೋಗಿಗಳ ಮಲ, ಮೂತ್ರ, ಲಾಲಾ ರಸ, ಕರುಳು, ಜಠರ ರಸಗಳಲ್ಲಿಯೂ ಕೋವಿಡ್-19 ವೈರಸ್‌ ಇರುವುದು ವಿವಿಧ ಅಧ್ಯಯನಗಳಲ್ಲಿ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next