Advertisement

ಚೇತರಿಕೆ ಪ್ರಮಾಣ ಸುಧಾರಣೆ : ಸೋಂಕಿನಿಂದ 2,230 ಮಂದಿ ಗುಣಮುಖ

11:57 AM Apr 20, 2020 | Hari Prasad |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ ಎಂಬ ಆತಂಕದ ಸುದ್ದಿಯ ನಡುವೆಯೇ ಸಮಾಧಾನಕರ ಸುದ್ದಿಯೊಂದಿದೆ. ಅದೇನೆಂದರೆ, ಕೋವಿಡ್ 19 ವೈರಸ್ ನಿಂದ ಗುಣಮುಖರಾಗಿ ಮನೆಗೆ ತೆರಳುತ್ತಿರುವವರ ಸಂಖ್ಯೆಯೂ ಏರಿಕೆಯ ಹಾದಿಯಲ್ಲಿರುವುದು.

Advertisement

ರೋಗದಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶನಿವಾರ ಶೇ.13.85ರಷ್ಟಿತ್ತು. ಅದು ಒಂದೇ ದಿನದಲ್ಲಿ ಶೇ.14.2ಕ್ಕೇರಿಕೆಯಾಗಿದೆ. ಅಂದರೆ, ಕನಿಷ್ಠ 2,230 ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಈ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವೇ ನೀಡಿದ್ದು, ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದಿದೆ. ಇದು ಭಾನುವಾರ ಸಂಜೆ 4 ಗಂಟೆಗೆ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದಲ್ಲಿನ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ನೀಡಿದ ಮಾಹಿತಿ.

24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,334 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 27 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 13 ಸಾವಿರ ದಾಟಿದ್ದು, ಸಾವಿನ ಸಂಖ್ಯೆ 500 ದಾಟಿದೆ. ಒಟ್ಟಾರೆ ಸೋಂಕಿನಿಂದ ಮರಣ ಪ್ರಮಾಣ ಶೇ.3.2ರಷ್ಟಿದೆ. 60 ವರ್ಷ ದಾಟಿದ ಮತ್ತು ಹಲವು ಕಾಯಿಲೆಗಳಿಂದ ಬಳಲು ತ್ತಿರುವವರೇ ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ ಎಂದಿದ್ದಾರೆ.

ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರು: ಶೇ.75.3ರಷ್ಟು ಮೃತರು ವಯೋವೃದ್ಧರಾಗಿದ್ದು, ಸೇ.83ರಷ್ಟು ಮಂದಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರೇ ಆಗಿದ್ದಾರೆ ಎಂದೂ ಅವರು ಸ್ಪಷ್ಟಪ ಡಿಸಿದ್ದಾರೆ. ಕುಟುಂಬಗಳ ಎಲ್ಲ ಸದಸ್ಯರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಏಕೆಂದರೆ, ಮನೆಯಲ್ಲಿರುವ ಹಿರಿಯ ನಾಗರಿಕರಿಗೆ ಸೋಂಕು ಬೇಗನೆ ಹರಡುವ ಅಪಾಯವಿರುತ್ತದೆ ಎಂದೂ ಅವರು ಸಲಹೆ ನೀಡಿದ್ದಾರೆ.

Advertisement

ಇಂದಿನಿಂದ ಭಾಗಶಃ ವಿನಾಯಿತಿ
ಹಾಟ್‌ ಸ್ಪಾಟ್‌ ಅಲ್ಲದ ಪ್ರದೇಶಗಳಲ್ಲಿ ಸೋಮವಾರದಿಂದ ಲಾಕ್‌ ಡೌನ್‌ ಗೆ ಸಂಬಂಧಿಸಿ ಭಾಗಶಃ ವಿನಾಯಿತಿ ನೀಡಲಾಗುವುದು. ಇದು ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. (ಕರ್ನಾಟಕ ಹೊರತುಪಡಿಸಿ) ಆದರೆ, ಯಾವ ಜಿಲ್ಲೆಗಳನ್ನು ಹಾಟ್‌ ಸ್ಪಾಟ್‌ ಎಂದು ಪರಿಗಣಿಸಲಾಗಿದೆಯೋ, ಅಲ್ಲೆಲ್ಲಾ ಕಠಿಣ ನಿರ್ಬಂಧ ಮುಂದುವರಿಯಲಿದೆ ಎಂದು ಅಗರ್ವಾಲ್‌ ಹೇಳಿದ್ದಾರೆ.

ಕೃಷಿ ಕ್ಷೇತ್ರ ಹಾಗೂ ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದ ಕೆಲವು ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಹಾಟ್‌ ಸ್ಪಾಟ್‌ ಗಳು ಅಥವಾ ಕೆಂಪು ವಲಯಗಳಲ್ಲಿ ಆಯಾ ರಾಜ್ಯ ಹೊಸದಿಲ್ಲಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವಿವೇಚನೆಯ ಅನ್ವಯ ಕೇಂದ್ರ ಹೊಸದಿಲ್ಲಿದ ನಿರ್ಬಂಧಗಳಿಗೂ ಮೀರಿದ ಕಠಿಣ ನಿರ್ಬಂಧಗಳನ್ನು ಹೇರಬಹುದು. ಈ ಪ್ರದೇಶಗಳಲ್ಲಿ ಎಲ್ಲ ನಿರ್ಬಂಧಗಳೂ ಮುಂದುವರಿಯಲಿವೆ. ಅತ್ಯಗತ್ಯ ಸೇವೆ ಹೊರತುಪಡಿಸಿ ಬೇರೆ ಯಾವ ಸೇವೆಯೂ ಲಭ್ಯವಿರುವುದಿಲ್ಲ.

ಸೋಂಕು ನಿವಾರಕ – ಎಚ್ಚರಿಕೆ
ಯಾವುದೇ ಕಾರಣಕ್ಕೂ ವ್ಯಕ್ತಿಗಳ ಮೇಲೆ ಸೋಂಕು ನಿವಾರಕವನ್ನು ಸಿಂಪಡಿಸುವಂತಿಲ್ಲ ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ. ವ್ಯಕ್ತಿಗಳು ಅಥವಾ ಜನರ ಸಮೂಹದ ಮೇಲೆ ರಾಸಾಯನಿಕ ಸೋಂಕು ನಿವಾರಕಗಳನ್ನು ಸಿಂಪಡಿಸುವುದು ದೈಹಿಕವಾಗಿಯೂ, ಮಾನಸಿಕವಾಗಿಯೂ ಅಪಾಯಕಾರಿ ಎಂದು ಸಚಿವಾಲಯ ತಿಳಿಸಿದೆ.

ಪ್ರಮುಖಾಂಶಗಳು
– 23 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 54 ಇತರೆ ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

– ದೇಶಾದ್ಯಂತ 2,230 ರೋಗಿಗಳು ಗುಣಮುಖರಾಗಿದ್ದಾರೆ, 1300ರಷ್ಟು ಹೊಸ ಪ್ರಕರಣ ಪತ್ತೆಯಾಗಿದೆ

– ಇಂದಿನಿಂದ ರಿಲ್ಯಾಕ್ಸೇಷನ್‌ ಇರುವುದು ಹಾಟ್‌ ಸ್ಪಾಟ್‌ ಗಳಿಗಲ್ಲ

– ಕೋವಿಡ್ 19 ವೈರಸ್ ಚಿಕಿತ್ಸೆಗೆಂದೇ 2,155 ಕೇಂದ್ರಗಳು ದೇಶದಲ್ಲಿವೆ

– ರೋಗಲಕ್ಷಣ ಇಲ್ಲದಿದ್ದರೂ, ಅತ್ಯಧಿಕ ರಿಸ್ಕ್ ಇರುವಂಥ ವ್ಯಕ್ತಿಗಳ ಮೇಲೂ ನಿಗಾ

Advertisement

Udayavani is now on Telegram. Click here to join our channel and stay updated with the latest news.

Next