Advertisement

ಭೂತಾನ್ ಗೆ ಭಾರತದ ಕೋವಿಡ್ ಲಸಿಕೆ ರವಾನೆ : 1.5 ಲಕ್ಷ ಲಸಿಕೆ ರವಾನಿಸಿದ ಭಾರತ

12:36 PM Jan 20, 2021 | Team Udayavani |

ಮುಂಬೈ : ದೇಶದಲ್ಲಿ ಕೋವಿಡ್ ಲಸಿಕೆ ಆಂದೋಲನ ಆಗುತ್ತಿದ್ದಂತೆ, ಇತರೆ ದೇಶಗಳಿಗೂ ಲಸಿಕೆ ರವಾನೆ ಮಾಡುವುದಕ್ಕೆ ಮುಂದಾಗಿದೆ. ಭೂತಾನ್ ಸೇರಿ ಇತರೆ ಐದು ದೇಶಗಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಅಸ್ತು ಎಂದಿದೆ.

Advertisement

ಈಗಾಗಲೇ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋವಿಡ್ ‘ಕೊವಿಶೀಲ್ಡ್ ’ ಲಸಿಕೆಯನ್ನು ಭೂತಾನ್‌ನ ಟಿಂಫುಗೆ ಇಂದು(ಬುಧವಾರ) ಬೆಳಗ್ಗೆ ರವಾನಿಸಲಾಗಿದೆ.

ಇದನ್ನೂ ಓದಿ:ಸಚಿವ ಬಿ.ಸಿ. ಪಾಟೀಲ್‌ ರೈತರ ಕ್ಷಮೆ ಕೇಳಬೇಕು: ಶಾಸಕ ಪುಟ್ಟರಾಜು ಆಗ್ರಹ

ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ ಭೂತಾನ್‌ಗೆ ಕಳುಹಿಸಿದ 1.5 ಲಕ್ಷ ಡೋಸ್

ಕೊವಿಶೀಲ್ಡ್ ಲಸಿಕೆ ಇಂದು ಮಧ್ಯಾಹ್ನದ ಹೊತ್ತಿಗೆ ಭೂತಾನ್‌ನ ರಾಜಧಾನಿ ಟಿಂಫುಗೆ ತಲುಪಬಹುದು ಎಂದು ಹೇಳಲಾಗಿದೆ.

Advertisement

ಈ ಮೂಲಕ ಭೂತಾನ್ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲಾದ ಕೊವಿಶೀಲ್ಡ್ ಲಸಿಕೆಯನ್ನು ಭಾರತದಿಂದ ಕೊಡುಗೆಯಾಗಿ ಪಡೆದುಕೊಳ್ಳುತ್ತಿರುವ ದೇಶವಾಗಿದೆ.

ಈ ಹಿಂದೆಯೂ ಭಾರತ ಭೂತಾನ್ಗೆ ಪ್ಯಾರಸಿಟಮಲ್, ಹೈಡ್ರೋಕ್ಸಿಕ್ಲೋರಿಕ್ವಿನ್, ಎನ್95 ಮಾಸ್ಕ್, ಎಕ್ಸ್ ರೇ ಯಂತ್ರ, ಟೆಸ್ಟ್ ಕಿಟ್ ಸೇರಿ ಸುಮಾರು 2.8 ಕೋಟಿ ರೂ ಮೌಲ್ಯದ ಔಷಧ ಮತ್ತು ಔಷದೋತ್ಪನ್ನ ಮೆಡಿಕಲ್ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ.

ಇದನ್ನೂ ಓದಿ: ರಾಜಭವನ ಚಲೋ ನಾಟಕ ಮಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ? ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿಯ ಪ್ರಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಲಸಿಕೆ ತಯಾರಿಕೆಯ ಪಾಲುದಾರ ರಾಷ್ಟ್ರಗಳಾದ

ನೇಪಾಳ, ಮಾಲ್ಡೀವ್ಸ್, ಮಯಾನ್ಮಾರ್, ಭಾಂಗ್ಲದೇಶ್, ಭೂತಾನ್, ಮಾಲ್ಡೀವ್ಸ್, ಸೀಶೆಲ್ಸ್ಗಳು ಲಸಿಕೆಗಾಗಿ  ಬೇಡಿಕೆಯನ್ನಿಟ್ಟಿವೆ ಎಂದು ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next