Advertisement

ಕೋವಿಡ್ 19 : ಕಳೆದೊಂದು ದಿನದಲ್ಲಿ 42 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲು | 330 ಮಂದಿ ಬಲಿ

01:58 PM Sep 04, 2021 | Team Udayavani |

ನವ ದೆಹಲಿ : ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 42,618 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 330 ಮಂದಿ ಸೋಂಕಿನಿಂದ ಮೃತ ಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು (ಸಪ್ಟೆಂಬರ್ 4, ಶನಿವಾರ) ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.

Advertisement

ಕೇರಳವೊಂದರಲ್ಲೇ 29,322 ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 131 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಈ ಮೂಲಕ ಒಟ್ಟು ಕೋವಿಡ್ ಸೋಂಕಿತರ ಸಂಖ‍್ಯೆ 3,29, 45, 907 ಕ್ಕೆ ಏರಿಕೆಯಾಗಿದ್ದು, ದೇಶದಾದ್ಯಂತ 4,05,681 ಸಕ್ರಿಯ ಪ್ರಕರಣಗಳು ಇವೆ. ಕಳೆದೊಂದು ದಿನದಲ್ಲಿ 36,385 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಕರಣ ಶೇಕಡಾ 97.43 ರಷ್ಟಿದೆ ಎಂದು ಕೂಡ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ : ಮನೀಶ್ ಚಿನ್ನದ ಮೆರುಗು: ಚಿನ್ನ- ಬೆಳ್ಳಿಗೆ ಗುರಿಯಿಟ್ಟ ಭಾರತದ ಶೂಟರ್ ಗಳು

ಇನ್ನು,  ದೈನಂದಿನ ಪಾಸಿಟಿವಿಟಿ ರೇಟ್ ಶೇಕಡಾ 2.50 ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ 2.63 ರಷ್ಟಿದೆ. ಈವರೆಗೆ ದೇಶದಾದ್ಯಂತ 52.82 ಕೋಟಿ ಕೋವಿಡ್ ಸೋಂಕಿನ ಟೆಸ್ಟ್ ಮಾಡಲಾಗಿದೆ.  ಕಳೆದೊಂದು ದಿನದಲ್ಲಿ ದೇಶದಾದ್ಯಂತ 17,04,970 ಮಂದಿಗೆ ಸೋಂಕಿನ ಟೆಸ್ಟ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

Advertisement

ಭಾರತದಾದ್ಯಂತ ನಡೆಯುತ್ತಿರುಬವ ಲಸಿಕಾ ಅಭಿಯಾನದಡಿಯಲ್ಲಿ ಒಟ್ಟು ಈವರೆಗೆ 67.72 ಕೋಟಿ ಕೋವಿಡ್ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ ಎಂದು ಕೋಡ ಸಚಿವಾಲಯ ಮಾಹಿತ ನೀಡಿದೆ.

ಇದನ್ನೂ ಓದಿ : ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ ಹಾಕಿ ತಂಡಗಳ ಗೈರು?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next