ಹೊಸದಿಲ್ಲಿ/ತಿರುವನಂತಪುರ: ಕೇರಳ ದಲ್ಲಿ ನಾಲ್ಕು ದಿನಗಳಿಂದ ಏರುಗತಿ ಯಲ್ಲಿದ್ದ ಸೋಂಕು ಪ್ರಕರಣ ರವಿವಾರ 30 ಸಾವಿರಕ್ಕಿಂತ ಕಡಿಮೆಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂದಿನ ವಾರದಿಂದ ರಾತ್ರಿ ಕರ್ಫ್ಯೂ ಜಾರಿ ಮಾಡುವುದಾಗಿ ಹೇಳಿತ್ತು. ರವಿವಾರ ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಚರ್ಚೆ ನಡೆಸಲಾಗಿದೆ.
ತತ್‌ಕ್ಷಣವೇ ಲಾಕ್‌ಡೌನ್ ಜಾರಿ ಮಾಡಿದರೆ ಸೆ.15ರ ಒಳಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಸೋಂಕು ಪರಿಸ್ಥಿತಿ ನಿಯಂತ್ರಿಸಲು ಲಾಕ್‌ಡೌನ್ ಅನ್ನು ಮತ್ತೆ ಜಾರಿ ಮಾಡಲೇಬೇಕು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ ಎಂದು “ಇಂಡಿಯಾ ಟುಡೇ’ ವರದಿ ಮಾಡಿದೆ. ದಿಲ್ಲಿಯಲ್ಲಿ ಕೊರೊನಾ ಸರಣಿ ಛೇದಿಸಿದಂತೆ ರಾಜ್ಯದ ಲ್ಲಿಯೂ ಲಾಕ್‌ಡೌನ್ ಜಾರಿ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯ ವಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ.
ಇದೇ ವೇಳೆ, ರವಿವಾರ 29,836 ಹೊಸ ಪ್ರಕರಣಗಳು ಮತ್ತು 75 ಮಂದಿ ಅಸುನೀಗಿ ದ್ದಾರೆ. ಸೋಂಕು ಪಾಸಿಟಿವಿಟಿ ಪ್ರಮಾಣ ಶೇ. 19.67 ಆಗಿದೆ. ಇದೇ ವೇಳೆ ರಾಜ್ಯ ಸರಕಾರ 2ನೇ ಸೀರೋ ಸರ್ವೇ ನಡೆಸಲು ಆದೇಶ ನೀಡಿದೆ.
460 ಸಾವು: ಶನಿವಾರದಿಂದ ರವಿವಾರದ ಅವಧಿಯಲ್ಲಿ ದೇಶದಲ್ಲಿ 45,083 ಹೊಸ ಪ್ರಕರಣಗಳು ಮತ್ತು 460 ಮಂದಿ ಅಸುನೀಗಿದ್ದಾರೆ. ಇದೇ ಅವಧಿಯಲ್ಲಿ ಸಕ್ರಿಯ ಸೋಂಕು ಸಂಖ್ಯೆ 3,68,558ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.97.53 ಆಗಿದೆ.
ಗುಜರಾತ್‌ನಲ್ಲಿ ಉತ್ಪಾದನೆ: ಹೈದರಾ ಬಾದ್‌ನ ಭಾರತ್ ಬಯೋಟೆಕ್ ಗುಜರಾತ್‌ನ ಅಂಕ್ಲೇಶ್ವರ ದಲ್ಲಿ ಹೊಂದಿ ರುವ ಉತ್ಪಾದನ ಘಟಕದಿಂದ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಬ್ಯಾಚ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾ ಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್ ಮಾಂಡವೀಯ ಇದೊಂದು ಚಾರಿತ್ರಿಕ ದಾಖಲೆ ಎಂದರು. ಈ ಕೇಂದ್ರದಲ್ಲಿ ಪ್ರತೀ ತಿಂಗಳು 1 ಕೋಟಿ ಡೋಸ್ ಲಸಿಕೆ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೊವೊವ್ಯಾಕ್ಸ್‌ನ ಎರಡು ಮತ್ತು ಮೂರನೇ ಹಂತದ ಪ್ರಯೋಗಕ್ಕಾಗಿ ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತಿದೆ.
ಸೆ.30ರ ವರೆಗೆ ನಿಷೇಧ :
ಮುಂದಿನ ತಿಂಗಳ ಅಂತ್ಯದ ವರೆಗೆ ದೇಶದಿಂದ ಸಾಮಾನ್ಯ ಅಂತಾರಾಷ್ಟ್ರೀಯ ವಿಮಾನ ಯಾನ ರದ್ದು ಅನ್ನು ಮುಂದು ವರಿಸಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ರವಿವಾರ ಆದೇಶ ಹೊರಡಿಸಿದೆ. ಇದರ ಹೊರತಾ ಗಿಯೂ ಆಯ್ದ ಮಾರ್ಗದಲ್ಲಿ ವಿಶೇಷ ಅನುಮತಿ ಮೇರೆಗೆ ಮತ್ತು ಒಪ್ಪಂದ ಮಾಡಿ ಕೊಳ್ಳಲಾಗಿರುವ ಮಾರ್ಗಗಳಲ್ಲಿ ವಿಮಾನ ಸಂಚಾರ ಮುಂದುವರಿಯಲಿದೆ. ಒಟ್ಟು 28 ರಾಷ್ಟ್ರಗಳ ಜತೆಗೆ ಕೇಂದ್ರ ಸರಕಾರ ಒಪ್ಪಂದ ಮಾಡಿಕೊಂಡಿದೆ.