Advertisement

ಏಷ್ಯಾದ ಹಾಟ್‌ಸ್ಪಾಟ್‌ ಸಿಂಗಾಪುರ?

12:37 PM Apr 27, 2020 | sudhir |

ಕೇವಲ 57 ಲಕ್ಷ ಜನಸಂಖ್ಯೆ ಹೊಂದಿರುವ ಸಿಂಗಾಪುರ ಎಂಬ ಪುಟ್ಟ ರಾಷ್ಟ್ರವು ಈಗ ಏಷ್ಯಾದ ಕೋವಿಡ್ ಹಾಟ್‌ ಸ್ಪಾಟ್‌ ಆಗುವತ್ತ ದಾಪುಗಾಲಿಟ್ಟಿದೆ. ಭಾನುವಾರ ಒಂದೇ ದಿನ ಇಲ್ಲಿ 931 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 13,624ಕ್ಕೇರಿದೆ.
ಇಲ್ಲಿ ಸೋಂಕು ಕ್ಷಿಪ್ರಗತಿಯಲ್ಲಿ ಹೆಚ್ಚಳವಾಗಲು ವಿದೇಶಿ ಕಾರ್ಮಿಕರ ವಸತಿನಿಲಯಗಳೇ ಕಾರಣ ಎಂದು ಹೇಳಲಾಗುತ್ತಿದೆ. ಸರಕಾರವು ದೇಶವ್ಯಾಪಿ ಲಾಕ್‌ ಡೌನ್‌ ಘೋಷಿಸಿರುವುದರಿಂದಾಗಿ ವಿದೇಶಿ ಕಾರ್ಮಿಕರ ವಸತಿ ನಿಲಯಗಳಲ್ಲಿನ ಕಾರ್ಮಿಕರು ಒಳಗೇ ಬಂದಿಯಾಗಿ¨ªಾರೆ. ಬಹುತೇಕ ದಕ್ಷಿಣ ಏಷ್ಯಾದ ಕಾರ್ಮಿಕರನ್ನೇ ಒಳಗೊಂಡಿರುವ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ವಸತಿನಿಲಯಗಳಲ್ಲಿ ವಾಸಿಸುತ್ತಿದ್ದಾರೆ. ಈ ವಲಸೆ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡ ಕಾರಣ, ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

Advertisement

ಹೈಟೆಕ್‌ ವ್ಯವಸ್ಥೆ
ಚಾಂಗಿ ಐಸೋಲೇಷನ್‌ ಕೇಂದ್ರದಲ್ಲಿ ಪ್ರತಿ ಕೊಠಡಿಗೂ ರಕ್ತದೊತ್ತಡ ನಿಗಾ ಯಂತ್ರಗಳು ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ಅಳವಡಿಸಲಾಗಿದ್ದು, ರೋಗಿಗಳು ತಾವೇ ಖು¨ªಾಗಿ ದಿನಕ್ಕೆ 3 ಬಾರಿ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಾರೆ. ಇನ್ನು ರಿಮೋಟ್‌ ಕಂಟ್ರೋಲ್‌ ನಿಂದ ಸಂಚರಿಸುವ ರೊಬೋಟ್‌ ಗಳೇ ಪ್ರತಿ ಕೊಠಡಿಗೂ ತೆರಳಿ ರೋಗಿಗಳಿಗೆ ಆಹಾರ ಪೂರೈಸುತ್ತದೆ. ಸೋಂಕಿತರೊಂದಿಗೆ ಸಂಪರ್ಕ ಕಡಿಮೆ ಮಾಡುವ ಉದ್ದೇಶದಿಂದ ಬಹುತೇಕ ಸಂವಹನಕ್ಕೆ ಟೆಲಿಕಾನ್ಫರೆನ್ಸಿಂಗ್‌ ಸೇವೆಗಳನ್ನು ಬಳಸಲಾಗುತ್ತಿದೆ. ಈ ಕೇಂದ್ರದಲ್ಲಿ 4 ಸಾವಿರ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next