Advertisement

12 ತಾಸಿನಲ್ಲಿ ಕೋವಿಡ್‌ 19 ನಿಗಾ ಆಸ್ಪತ್ರೆ ಸಿದ್ಧ

11:28 PM Mar 30, 2020 | Sriram |

ಕುಂದಾಪುರ: ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ 19 ಶಂಕಿತರ ನಿಗಾ ವಾರ್ಡ್‌ಗಳನ್ನು ಸಿದ್ಧಪಡಿಸಿದ್ದರೂ ಅಗತ್ಯವಾದ ಕ್ರಮಗಳನ್ನು ಸ್ಥಳಾಭಾವ ಇದ್ದ ಕಾರಣ ಹಳೆ ಆದರ್ಶ ಆಸ್ಪತ್ರೆಯನ್ನು ಕೋವಿಡ್‌ 19 ಶಂಕಿತರ ನಿಗಾ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಡಾ| ಆದರ್ಶ ಹೆಬ್ಟಾರರ ಆದರ್ಶ ಆಸ್ಪತ್ರೆ ಈಗ ಹೊಸ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು ಉಪ ಯೋಗವಿಲ್ಲದ ಹಳೆ ಆಸ್ಪತ್ರೆಯನ್ನು ಪುರಸಭೆ ಕೇವಲ 12 ತಾಸಿನಲ್ಲಿ ಶುಚಿಗೊಳಿಸಿ ಸಿದ್ಧಪಡಿಸಲಾಗಿದೆ.

Advertisement

ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್‌, ಸಹಾಯಕ ಕಮಿಷನರ್‌ ಕೆ. ರಾಜು ಅವರ ಆದೇಶದ ಮೇರೆಗೆ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಕೋವಿಡ್‌ 19 ಕ್ವಾರಂಟೈನ್‌ನ್ನು ಮಾಡುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಈ ಹಿಂದಿನ ಆದರ್ಶ ಆಸ್ಪತ್ರೆಯನ್ನು ಗುರುತಿಸಿತ್ತು. ಈ ಆಸ್ಪತ್ರೆ 3 ವರ್ಷದಿಂದ ನಿರುಪಯುಕ್ತ ಗೊಂಡಿತ್ತು. ಇದನ್ನು ಕೇವಲ 12 ಗಂಟೆಗಳಲ್ಲಿ ಪುರಸಭೆಯ ಆರೋಗ್ಯ ವಿಭಾಗದ ಪೌರಕಾರ್ಮಿಕರು ಹಾಗೂ ಗುತ್ತಿಗೆದಾರರ ಸಹಾಯದಿಂದ ಪುನರ್‌ ಕಾರ್ಯಗತಗೊಳಿಸಿದ್ದು, ಈ ಕಾರ್ಯದಲ್ಲಿ ಹಗಲು ರಾತ್ರಿ ಕೆಲಸ ನಿರ್ವಹಿಸಿದ ಪುರಸಭೆಯ ಅಧಿಕಾರಿಗಳು, ಪೌರಕಾರ್ಮಿಕರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಆಸ್ಪತ್ರೆಯನ್ನಾಗಿ ವಾರ್ಡ್‌ ಮೀಸಲಿಟ್ಟಿದ್ದರೂ ಅಲ್ಲಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಒಂದೇ ವಾರ್ಡ್‌ನಲ್ಲಿ ಒಂದಷ್ಟು ಜನರನ್ನು ನಿಗಾಕ್ಕಾಗಿ ಇಡಬೇಕಿತ್ತು. ಆದರೆ ಅಲ್ಲಿ ಪ್ರತಿ ರೋಗಿಗೂ ಪ್ರತ್ಯೇಕ ನಿಗಾ ಇಡಲು ವ್ಯವಸ್ಥೆಯ ಕೊರತೆ ಇತ್ತು. ಇದರಿಂದಾಗಿ ಪಾಸಿಟಿವ್‌ ಅಲ್ಲದವರೂ ಆದವರೂ ವೈದ್ಯಕೀಯ ವರದಿ ಬರುವ ತನಕ ಜತೆಗೇ ಇರಬೇಕಿತ್ತು. ಇದೀಗ ಪ್ರತ್ಯೇಕ ಆಸ್ಪತ್ರೆ ಮಾಡಿದ ಕಾರಣ ಈ ಗೊಂದಲ ನಿವಾರಣೆಯಾಗಿದೆ. ಇಲ್ಲಿ ಪ್ರತಿ ಕೊಠಡಿಗೂ ಪ್ರತ್ಯೇಕ ಸ್ನಾನಗೃಹ ಇತ್ಯಾದಿಗಳಿವೆ. ಇಲ್ಲಿ 20 ಜನರನ್ನು ನಿಗಾದಲ್ಲಿ ಇಡಲು ಅವಕಾಶ ಇದೆ. 30ಕ್ಕೆ ಏರಿಸಲು ಅವಕಾಶ ಇದೆ.

ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾರ್ಗದರ್ಶನದಲ್ಲಿ, ಕಿರಿಯ ಅಭಿಯಂತರ ಸತ್ಯಂ, ಪರಿಸರ ಅಭಿಯಂತರ ರಾಘವೇಂದ್ರ ಅವರ ಮೇಲುಸ್ತುವಾರಿಯಲ್ಲಿ ಆಸ್ಪತ್ರೆ ನವೀಕರಣ ಕೆಲಸ ನಿರ್ವಹಿಸಲಾಗಿದ್ದು, ಪುರಸಭೆ ಅಧಿಕಾರಿ ಗಣೇಶ್‌ ಕುಮಾರ್‌ ಜನ್ನಾಡಿ, ಹಿರಿಯ ಆರೋಗ್ಯ ನಿರೀಕ್ಷಕ ಶರತ್‌ ಖಾರ್ವಿ ಕೆಲಸ ನಿರ್ವಹಿಸಿದ್ದರು.

ಪರಿಸರದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಿಲ್ಲ, ಚರಂಡಿ ನೀರು ಹರಿಯುವುದಿಲ್ಲ ಇತ್ಯಾದಿ ಸ್ಥಳೀಯರ ಆಕ್ಷೇಪಗಳಿದ್ದವು. ಶಂಕಿತರನ್ನು ಇಲ್ಲಿ ಇಡುವುದರಿಂದ ಯಾವುದೇ ರೀತಿಯ ತೊಂದರೆ ಆಗು ವುದಿಲ್ಲ ಎಂದು ಡಾ| ಆದರ್ಶ ಹೆಬ್ಟಾರ್‌ ಅವರೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ ಮೇಲೆ ಸ್ಥಳೀಯರು ಒಪ್ಪಿಗೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next