Advertisement

ಆರೋಗ್ಯ ಯೋಧರು: ಈ ಶ್ವಾನ ಕೋವಿಡ್ 19 ಹೀರೋ

09:15 AM Apr 03, 2020 | sudhir |

ಕೋವಿಡ್ 19 ವ್ಯಾಪಿಸಿರುವಂಥ ಈ ಸಂಕಷ್ಟದ ಸನ್ನಿವೇಶದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು, ಸೋಂಕಿತರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿರುವ ವೈದ್ಯರಿಗೆ ವಿಶ್ವಾದ್ಯಂತ ಶ್ಲಾಘನೆಗಳ ಸುರಿಮಳೆಯೇ ವ್ಯಕ್ತವಾಗಿದೆ. ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋಗಿ, ಕುಟುಂಬ ಸದಸ್ಯರನ್ನು ಭೇಟಿಯಾಗದೇ ಎಷ್ಟು ದಿನಗಳಾದವೋ? ಈ ಆರೋಗ್ಯ ಸಿಬಂದಿಯ ಮಾನಸಿಕ ಸ್ಥಿತಿಯನ್ನು ಮನಗಂಡು ಅಮೆರಿಕದ ಡೆನ್ವೆì ನ ಆಸ್ಪತ್ರೆಯೊಂದರ ವೈದ್ಯರೊಬ್ಬರು ತಮ್ಮ ನಾಯಿಯನ್ನೂ ಕೋವಿಡ್ 19  ವಿರುದ್ಧದ ಹೋರಾಟದಲ್ಲಿ ಬಳಸಿಕೊಂಡಿದ್ದಾರೆ.

Advertisement

ಅಂದರೆ, ಆ ನಾಯಿಯನ್ನು ಅವರು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಅದಕ್ಕೊಂದು ವಿಶೇಷ ಕೊಠಡಿಯನ್ನೂ ನೀಡಲಾಗಿದೆ. ಸತತ ಶ್ರಮದಿಂದ ದಣಿದ ವೈದ್ಯರು, ನರ್ಸ್‌ ಗಳು ಹಾಗೂ ಇತರೆ ಸಿಬಂದಿ ತುಂಬಾ ಸುಸ್ತಾದಾಗ ಆ ಕೊಠಡಿಗೆ ತೆರಳುತ್ತಾರೆ. ವಿನ್‌ ಎಂಬ ಹೆಸರಿನ ಆ ನಾಯಿಯು ಇವರೊಂದಿಗೆ ಆಟವಾಡುತ್ತಾ ಅವರನ್ನು ಉಲ್ಲಸಿತರನ್ನಾಗಿಸುತ್ತಿದೆ.

ಇದೊಂದು ಥೆರಪಿ ಶ್ವಾನವಾಗಿದ್ದು, ಇದರೊಂದಿಗೆ ಸ್ವಲ್ಪ ಹೊತ್ತು ಕಳೆದರೆ, ಶಾರೀರಿಕವಾಗಿಯೂ ಮಾನಸಿಕವಾಗಿಯೂ ಉಲ್ಲಾಸ ಸಿಗುತ್ತದೆ. ವೈದ್ಯರು ರೋಗಿಗಳ ಸೇವೆಯಲ್ಲಿ ತೊಡಗಿದ್ದರೆ, ಈ ಶ್ವಾನವು ವೈದ್ಯರ ಸೇವೆಯಲ್ಲಿ ತೊಡಗುವ ಮೂಲಕ, ಇದು ಕೂಡ ಹೀರೋ ಎನಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next