Advertisement

ಕೋವಿಡ್ ಪ್ರಕರಣ ಹೆಚ್ಚಳ: ಗುಜರಾತ್ ನ ಇನ್ನೂ 9 ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ

03:32 PM Apr 27, 2021 | Team Udayavani |

ನವದೆಹಲಿ: ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಗುಜರಾತ್ ಸರಕಾರ ಇನ್ನೂ ಒಂಬತ್ತು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ಮಂಗಳವಾರ(ಏಪ್ರಿಲ್ 27) ನಿರ್ಧರಿಸಿದೆ.

Advertisement

ಗುಜರಾತ್ ನ ಹಿಮ್ಮತ್ ನಗರ್, ನವಸಾರಿ, ವೇರಾವಲ್, ವಲ್ಸಾಡ್, ಪೋರಬಂದರ್, ಬೊಟಾಡ್, ವಿರಾಂಗಮ್, ಚೋಟೌದೇಪುರ್ ಮತ್ತು ಪಾಲಾನ್ ಪುರ್ ನಗರಗಳಲ್ಲಿ ಏಪ್ರಿಲ್ 28ರಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಾಗಿ ತಿಳಿಸಿದೆ.

ಕೋವಿಡ್ 19 ಸೋಂಕು ಪ್ರಕರಣ ತೀವ್ರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ನಗರಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಅಹ್ಮದಾಬಾದ್, ಸೂರತ್, ರಾಜ್ ಕೋಟ್ ಮತ್ತು ವಡೋದರಾ ಸೇರಿದಂತೆ 20 ನಗರಗಳಲ್ಲಿ ಏಪ್ರಿಲ್ 7ರಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು.

ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಗುಜರಾತ್ ನ 29 ನಗರಗಳಲ್ಲಿ ಜಾರಿಗೊಳಿಸಿರುವ ನಿರ್ಬಂಧಗಳ ಪ್ರಕಾರ ರೆಸ್ಟೋರೆಂಟ್ಸ್, ಈಜುಕೊಳ, ಸಿನಿಮಾ ಮಂದಿರ, ಶಾಪಿಂಗ್ ಕಾಂಪ್ಲೆಕ್ಸ್ ಗಳು, ವಾಟರ್ ಪಾರ್ಕ್ , ಬ್ಯೂಟಿ ಪಾರ್ಲರ್, ಗಾರ್ಡನ್ಸ್, ಸಲೂನ್ಸ್, ಜಿಮ್ಸ್, ಆಡಿಟೋರಿಯಂ ಹಾಗೂ ಮಾಲ್ ಗಳನ್ನು ಮೇ 5ರವರೆಗೆ ಬಂದ್ ಮಾಡುವಂತೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next