Advertisement

ಕೋವಿಡ್ ಮಹಾಮಾರಿ ಅಟ್ಟಹಾಸ; ಜಗತ್ತಿನಾದ್ಯಂತ 20 ಲಕ್ಷ ಜನರಿಗೆ ಮಾರಕ ವೈರಸ್ ದೃಢ

09:12 AM Apr 16, 2020 | Nagendra Trasi |

ವಾಷಿಂಗ್ಟನ್/ನವದೆಹಲಿ: ಕೋವಿಡ್ 19 ಮಹಾಮಾರಿ ಜಗತ್ತನ್ನೇ ಕಂಗೆಡಿಸಿದ್ದು, ಇದೀಗ ವಿಶ್ವಾದ್ಯಂತ ಮಾರಣಾಂತಿಕ ವೈರಸ್ 20 ಲಕ್ಷ ಮಂದಿಗೆ ಸೋಂಕಿರುವುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.

Advertisement

ಚೀನಾ ವಿಜ್ಞಾನಿಗಳ ಸಂಶೋಧನೆ ಪ್ರಕಾರ, ಕೋವಿಡ್ ವೈರಸ್ ಮೂಲತಃ ಬಾವಲಿಯಿಂದ ಇತರ ಪ್ರಾಣಿಗಳಿಗೆ ಹರಡುವ ಮೂಲಕ ಬಂದಿರುವುದಾಗಿ ಪತ್ತೆ ಹಚ್ಚಿದೆ. ಈ ವೈರಸ್ ಬಾವಲಿಯಿಂದ ಪ್ಯಾಂಗೋಲಿನ್ (ಕೀಟಭಕ್ಷಕ ಸಸ್ತನಿ)ಗೆ ಹರಡಿ ಅದರಿಂದ ಮನುಷ್ಯನಿಗೆ ಸೋಂಕಿರುವುದಾಗಿ ವಿವರಿಸಿದೆ.

ಭಾರತದಲ್ಲಿ ಕೋವಿಡ್ 19 ವೈರಸ್ ಪ್ರಕರಣಗಳ ಸಂಖ್ಯೆ 12 ಸಾವಿರಕ್ಕೆ ತಲುಪಿದೆ. ಈವರೆಗೆ 392 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24ಗಂಟೆಯಲ್ಲಿ 1,118 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 39 ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಕರ್ನಾಟಕದಲ್ಲಿಯೂ ಮಂಗಳವಾರದವರೆಗೆ 19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವು ವರದಿಯಾಗಿತ್ತು. ಕಳೆದ 48ಗಂಟೆಯಲ್ಲಿ ಆರು ಸಾವಿನ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ 279 ಪ್ರಕರಣ ದೃಢಪಟ್ಟಿದ್ದು, ಈವರೆಗೆ 80 ಜನರು ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next