ಬೆಳಗಾವಿ: ಕೋವಿಡ್-19 ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಸಮಾಧಾನ ಪಟ್ಟಿದ್ದ ಬೆಳಗಾವಿಯ ಜನರಿಗೆ ಇದೀಗ ದೂರದ ಇಂಗ್ಲೆಂಡ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿತ ಕೋವಿಡ್ ಸೋಂಕು ಮತ್ತೆ ಆತಂಕ ಉಂಟು ಮಾಡಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಲಂಡನ್ ದಿಂದ ಬೆಂಗಳೂರು ಮೂಲಕ ಬೆಳಗಾವಿಗೆ ಬಂದಿರುವ ಮಹಿಳೆಯೊಬ್ಬರು ಜಿಲ್ಲೆಯ ಜನರಲ್ಲಿ ಭೀತಿ ಹುಟ್ಟಿಸಿದ್ದಾರೆ.
ಬೆಳಗಾವಿಯ ಖಡೇಬಜಾರ್ ಪ್ರದೇಶದ ನಿವಾಸಿಯಾಗಿರುವ 35 ವರ್ಷದ ಈ ಮಹಿಳೆಯನ್ನು ಮಂಗಳವಾರ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮಹಿಳೆಯ ಮನೆಗೆ ಭೇಟಿ ನೀಡಿದ ಆರೋಗ್ಯ ಸಿಬ್ಬಂದಿ, ಆರೋಗ್ಯ ತಪಾಸಣೆ ನಡೆಸಿದ್ದು ಮನೆಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಎಷ್ಟು ಕಟ್ಟೆಚ್ಚರ ವಹಿಸಿದರೂ ಕಡಿಮೆಯೇ.. ಕೋವಿಡ್ ರೂಪಾಂತರದ ಬಗ್ಗೆ ಸಿಎಂ ಎಚ್ಚರಿಕೆ
ಮಹಿಳೆ ಸೇರಿದಂತೆ ಆಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇಡಲಾಗಿದ್ದು ಮಹಿಳೆಯ ಕುಟುಂಬಸ್ಥರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ.