ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹಸಿರು ವಲಯವೆಂದು ಘೋಷಣೆಯ ಸಿದಟಛಿತೆ ಮಾಡಿ ಕೊಳ್ಳುತ್ತಿದ್ದ ವೇಳೆಯಲ್ಲಿ ಸುಮಾರು 3 ತಿಂಗಳಿಂದ ಕೋವಿಡ್ 19 ಮುಕ್ತವೆಂದು ಖ್ಯಾತಿ ಹೊಂದಿದ್ದ ಶಿಡ್ಲಘಟ್ಟ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ 19 ಸೋಂಕು ಪ್ರವೇಶಿಸಿದೆ.
ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಯುವಕನೊಬ್ಬನಿಗೆ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ತಾಲೂಕಿನಲ್ಲಿ ಇದೇ ಮೊದಲ ಪ್ರಕರಣ ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತ ಸೋಂಕಿತರ ಮನೆಯ ಸುತ್ತಮತ್ತಲಿನ 100 ಮೀ.ಪ್ರದೇಶವನ್ನು ಸೀಲ್‌ಡೌನ್ ಮಾಡಿ ಪೊಲೀಸರನ್ನು ನಿಯೋಜಿಸಿದ್ದಾರೆ.
ಸಾಮೂಹಿಕವಾಗಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಯುವಕನ್ನೊಬ್ಬನಿಗೆ ಸೋಂಕು ಪತ್ತೆಯಾದ ಕೂಡಲೇ ತಹಶೀಲ್ದಾರ್ ಕೆ.ಅರುಂಧತಿ, ತಾಪಂ ಇಒ ಶಿವಕುಮಾರ್, ಟಿಎಚ್‌ಒ ಡಾ.ವೆಂಕಟೇಶ್‌ಮೂರ್ತಿ, ಸಿಪಿಐ ಸುರೇಶ್ ಮತ್ತಿತರರು ಸೋಂಕಿತ ಯುವಕನಿಗೆ ಚಿಕ್ಕಬಳ್ಳಾಪುರದ ಐಸೋಲೇಷನ್ ಕೇಂದ್ರಕ್ಕೆ ಕಳುಹಿಸಿ ಸೋಂಕಿತ ಯುವಕನ ಕುಟುಂಬ ಸದಸ್ಯರು ಸೇರಿದಂತೆ 13 ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಯುವಕನ ಸಂಪರ್ಕ ಸಾಧಿಸಿದ ಜನರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಜಿಲ್ಲಾಧಿಕಾರಿಗಳಿಗೆ ನಿರಾಶೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಜಿಪಂ ಸಿಇಒ ಫೌಝೀಯಾ ತರು ನ್ನುಮ್ ಕಾಳಜಿ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಿದ ಫಲ ದಿಂದಾಗಿ ಕೋವಿಡ್ 19 ಸೋಂಕು ನಿಯಂತ್ರಣ ದಲ್ಲಿದ್ದು, ಜಿಲ್ಲೆಯನ್ನು ಹಸಿರು ವಲಯವೆಂದು ಘೋಷಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಡೀಸಿಗೆ ನಿರಾಶೆಯಾಗಿದೆ. ಕೋವಿಡ್ 19 ಮುಕ್ತ ತಾಲೂಕಾಗಿದ್ದ ಶಿಡ್ಲಘಟ್ಟದಲ್ಲಿ ಕೋವಿಡ್ 19 ಪತ್ತೆಯಾಗಿದ್ದು, ಜಂಗಮ ಕೋಟೆ ಮಾತ್ರವಲ್ಲದೆ ತಾಲೂಕಿನಾದ್ಯಂತ ಆತಂಕ ಮನೆ ಮಾಡಿದೆ.