Advertisement

ಬಾಡಿತು ಹೂವು ಬೆಳೆದವರ ಬದುಕು!

04:03 PM Apr 02, 2020 | Suhan S |

ಗಂಗಾವತಿ: ಪುಷ್ಪ ಕೃಷಿಯ ಮೇಲೆ ಕೋವಿಡ್ 19 ಕರಿನೆರಳು ತೀವ್ರವಾಗಿದ್ದು, ಇನ್ನೂ ವರ್ಷವಾದರೂ ಪುಷ್ಪ ಬೆಳೆಯುವ ರೈತರು ಚೇತರಿಸಿಕೊಳ್ಳದಂತಹ ಪೆಟ್ಟು ಬಿದ್ದಿದೆ. ಪುಷ್ಪ ಕೃಷಿ ನಂಬಿ ಬದುಕು ನಡೆಸಿದ್ದ ರೈತರು ಸಂಕಷ್ಟದಲ್ಲಿದ್ದಾರೆ.

Advertisement

ಗಂಗಾವತಿ ಸೇರಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಲ್ಲಿಗೆ ಕಾಕಡ, ಕನಕಾಂಬರಿ ಸೇವಂತಿಗೆ ಪುಷ್ಪ ಬೆಳೆದು ಹುಬ್ಬಳ್ಳಿ, ಹೊಸಪೇಟೆ ಗಂಗಾವತಿಗೆ ಕೆಎಸ್‌ಆರ್‌ಟಿಸಿ ಬಸ್‌, ಆಟೋ ಮತ್ತು ಬೈಕ್‌ ಮೂಲಕ ವ್ಯಾಪಾರಸ್ಥರಿಗೆ ತಲುಪಿಸಲಾಗುತ್ತಿತ್ತು. ರೈತರು ಇತರೆ ಬೆಳೆಗಳ ಜತೆಗೆ ವಾಣಿಜ್ಯ ಬೆಳೆಯಾಗಿ ಸ್ವಲ್ಪ ಭೂಮಿಯಲ್ಲಿ ಪುಷ್ಪ ಕೃಷಿ ಮಾಡಿ ನಿತ್ಯ ಒಂದು ಸಾವಿರದಿಂದ ಐದು ಸಾವಿರ ರೂ. ಆದಾಯ ದುಡಿಯುತ್ತಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಗುಲಗಳು ಜಾತ್ರೆ, ಉತ್ಸವ ರದ್ದುಗೊಳಿಸಲಾಗಿದೆ. ಜತೆಗೆ ಸಾರಿಗೆ ವ್ಯವಸ್ಥೆ ಸ್ಥಗಿತ ಮಾಡಲಾಗಿದೆ. ಇದರಿಂದ ತೋಟಗಳಲ್ಲಿ ಹೂವುಗಳನ್ನು ಬಿಡಿಸದೇ ಇರುವುದರಿಂದ ನೆಲಕ್ಕೆ ಬಿದ್ದಿವೆ. ಇದರಿಂದ ರೈತರು ಸುಮಾರು 3-4 ತಿಂಗಳು ಯಾವುದೇ ಆದಾಯವಿಲ್ಲದೇ ತೊಂದರೆಪಡುವಂತಾಗಿದೆ. ಜಿಲ್ಲೆಯಲ್ಲಿ ಸುಮಾರು 600 ಹೆಕ್ಟೇರ್‌ನಲ್ಲಿ ಮಲ್ಲಿಗೆ ಸೇರಿ ವಿವಿಧ ಬಗೆಯ ಹೂವುಗಳನ್ನು ಬೆಳೆಯಲಾಗುತ್ತಿದೆ.

ಕಳೆದ ನಲವತ್ತು ವರ್ಷಗಳಿಂದ ಒಂದು ಎಕರೆ ಪ್ರದೇಶದಲ್ಲಿ ಕಾಕಡ ಮಲ್ಲಿಗೆ ಹೂವು ಬೆಳೆದು ಹೊಸಪೇಟೆ, ದಾವಣಗೇರಿ ಹುಬ್ಬಳ್ಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಇಡಿ ಕುಟುಂಬದ ಖರ್ಚು ಸರಿದೂಗಿಸಲಾಗುತ್ತಿತ್ತು. ಕೋವಿಡ್ 19  ವೈರಸ್‌ ನಿಯಂತ್ರಿಸಲು ಲಾಕ್‌ಡೌನ್‌ ಮಾಡಿರುವುದರಿಂದ ಹೂವು ಬೆಳೆಗಾರರ ಮೇಲೆ ತೀವ್ರ ಪರಿಣಾಮವಾಗುತ್ತಿದೆ. ಸರಕಾರ ಪುಷ್ಪ ಕೃಷಿಕರ ನೆರವಿಗೆ ಬರಬೇಕು. ಒಂದು ಎಕರೆಯಲ್ಲಿ ಮಲ್ಲಿಗೆ ಹೂವಿನ ಅಂಟನ್ನು ಬೆಳೆಸಲು 40 ಸಾವಿರ ಖರ್ಚಾಗುತ್ತಿದೆ. ಪುಷ್ಪಕೃಷಿ ಒಂದು ಸಾರಿ ನಷ್ಟವಾದರೆ ಸುಧಾರಿಸಿಕೊಳ್ಳಲು 6 ತಿಂಗಳು ಬೇಕು. ಆದ್ದರಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಯೋಜನೆಯಡಿ ಪರಹಾರ ದೊರಕಿಸಬೇಕು. -ರಾಮಣ್ಣ ಗುಳದಾಳ,ಪುಷ್ಪ ಕೃಷಿಕ ಕಂಪಸಾಗರ

 

-ಕೆ.ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.

Next