Advertisement
ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ ಗ್ರಾಮದ ಬಳಿಯಿರುವ ಚಿದ್ರಿ ಸತೀಶ್ ಅವರ ತೋಟದಲ್ಲಿ ಸುಮಾರು 6 ಎಕರೆ ಜಮೀನಿನಲ್ಲಿ ಬೆಳೆದ ಶುಗರ್ ಕ್ವೀನ್ ತಳಿಯ ಕಲ್ಲಂಗಡಿ ಬೆಳೆ ಕಟಾವಿಗೆ ಬಂದಿದ್ದು ದೇಶವೇ ಲಾಕ್‌ಡೌನ್ ಆಗಿರುವುದರಿಂದ ಕಲ್ಲಂಗಡಿ ಬೆಳೆಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಹತಾಶರಾದ ರೈತ ಚಿದ್ರಿ ಸತೀಶ್ ಅವರು ಕ್ಲಲಂಗಡಿಯನ್ನು ಹೊಲದಲ್ಲಿಯೇ ಹಾಳಾಗಲು ಬಿಡದೆ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜನರಿಗೆ ಮನೆಮನೆಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ಆರು ಎಕರೆಗೆ 18ರಿಂದ 20 ಲಕ್ಷ ರೂಪಾಯಿಗಳ ಆದಾಯ ಸಿಗುತ್ತಿತ್ತು ಆದರೆ ವೈರಸ್ ಈ ರೈತರ ಪಾಲಿಗೆ ಕಂಕಟಕವಾಗಿ ಪರಿಣಮಿಸಿ ಸುಮಾರು 20 ಲಕ್ಷ ರೂಪಾಯಿಗಳ ನಷ್ಟ ಎದುರಿಸುವಂತಾಗಿದೆ ಎಂದು ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
Related Articles
Advertisement