Advertisement

ತೊಗರಿ 200-ಬೇಳೆ 900 ರೂ. ದರ ಹೆಚ್ಚಳ: ರೈತರಿಗೆ ನಷ್ಟ

04:00 PM Apr 05, 2020 | Suhan S |

ಕಲಬುರಗಿ: ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಎರಡು ವಾರ ಕಾಲ ಸ್ಥಗಿತಗೊಂಡ ಎಪಿಎಂಸಿ ವಹಿವಾಟು ಈಗ ಶುರುವಾಗಿರುವುದು ದಾಲ್‌ ಮಿಲ್‌ದಾರರಿಗೆ ಲಾಭವಾದರೆ, ರೈತರಿಗೆ ನಷ್ಟ ಎದುರಾಗಿದೆ.

Advertisement

ತೊಗರಿ ಕ್ವಿಂಟಲ್‌ಗಿಂತ ಈಗ ಕೇವಲ 200 ರೂ. ಹೆಚ್ಚಳವಾದರೆ ತೊಗರಿ ಬೇಳೆ ದರ ಮಾತ್ರ 900 ರೂ. ಹೆಚ್ಚಳವಾಗಿದೆ. ಇದನ್ನು ನೋಡಿದರೆ ರೈತರಿಗೆ ಕಹಿ-ವ್ಯಾಪಾರಿಗಳಿಗೆ ಸಿಹಿ ಎನ್ನುವಂತಾಗಿದೆ.

ಕೋವಿಡ್ 19  ಹರಡುವ ಮುಂಚೆ ತೊಗರಿ ಕ್ವಿಂಟಲ್‌ಗೆ 5,100 ರೂ. ಮಾರಾಟವಾದರೆ, ತೊಗರಿ ಬೇಳೆ ಬೆಲೆ ಕ್ವಿಂಟಲ್‌ಗೆ 7,400 ರೂ. ದರವಿತ್ತು. ಈಗ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕ್ವಿಂಟಲ್‌ಗೆ 5,300 ರೂ. ಇದ್ದರೆ ಬೇಳೆ ಬೆಲೆ 8,900 ರೂ. ಇಲ್ಲವೇ 9,000 ರೂ. ಆಗಿದೆ. ವಿಪರ್ಯಾಸದ ಸಂಗತಿವೆನಂದರೆ ಸೂಪರ್‌ ಶಾಪ್‌, ಕಿರಾಣಿ ಜನರಲ್‌ ಸ್ಟೋರ್ಸ್‌ , ಡಿಪಾರ್ಟ್ ಮೆಂಟ್‌ ಸ್ಟೋರ್ಸ್‌ಗಳಲ್ಲಿ ಕ್ವಿಂಟಲ್‌ಗೆ 11,000 ಕ್ವಿಂಟಲ್‌ಗೆ ಮಾರಾಟ ಮಾಡಲಾಗುತ್ತಿದೆ. ಕೋವಿಡ್ 19  ಲಾಕ್‌ಡೌನ್‌ದ ಸಮಯದ ದುರುಪಯೋಗ ಎನ್ನುವಂತೆ ವ್ಯಾಪಕ ನಡೆಯುತ್ತಿದೆ.

ಎಪಿಎಂಸಿ ವಹಿವಾಟು ಪಕ್ಕದ ಮಹಾರಾಷ್ಟ್ರ, ರಾಜ್ಯದ ಬೀದರ್‌, ವಿಜಯಪುರ ಈಗ ಬಂದಿದೆ. ಕಳೆದ ವಾರದ ಅವಧಿಯಲ್ಲೇ 36,000 ಕ್ವಿಂಟಲ್‌ ತೊಗರಿ ವಹಿವಾಟು (ಮಾರಾಟ)ವಾಗಿದೆ. ತೊಗರಿ ಬೇಳೆ 8,900-9,000 ರೂ. ದರವಾದರೆ ತೊಗರಿ ಕನಿಷ್ಟ 6,000 ರೂ. ದರವಾದರೂ ಮಾರಾಟವಾಗಬೇಕು. ಈಗ ಇಷ್ಟೊಂದು ಪ್ರಮಾಣದಲ್ಲಿ ತೊಗರಿ ರೈತರಿಗೆ ನಷ್ಟವಾದರೂ ಯಾರು ಚಕಾರವೆತ್ತುತ್ತಿಲ್ಲ. ಒಟ್ಟಾರೆ ಕಲಬುರಗಿ ಎಪಿಎಂಸಿಯಲ್ಲಿ ತೊಗರಿ ವಹಿವಾಟು ಶುರುವಾಗಿರುವುದು ದಾಲ್‌ ಮಿಲ್‌ (ಬೇಳೆ ಕಾರ್ಖಾನೆಗಳಿಗೆ) ಮಾತ್ರ ಲಾಭವಾಗುತ್ತಿದೆ. ಇದನ್ನೆಲ್ಲ ಅವಲೋಕಿಸಿದರೆ ಅತ್ತ ರೈತರಿಗೆ ಲಾಭವಿಲ್ಲ, ಇತ್ತ ಗ್ರಾಹಕರಿಗೂ ಲಾಭ ಇಲ್ಲ. ಕೇವಲ ಮದ್ಯವರ್ತಿಗಳಿಗೆ (ದಾಲ್‌ ಮಿಲ್‌ದಾರರು ) ಲಾಭ ಎನ್ನುವಂತಾಗಿದೆ.

ಎರಡು ದಿನ ರಜೆ :  ಏ. 5ರಂದು ರವಿವಾರ ರಜೆ ಜತೆಗೆ ಸೋಮವಾರ ಏ. 6ರಂದು ಮಹಾವೀರ ಜಯಂತಿಯಿದ್ದು, ರಾಷ್ಟ್ರೀಯ ರಜೆಯಿದೆ. ಇಷ್ಟಿದ್ದರೂ ಎಪಿಎಂಸಿ ವಹಿವಾಟಿಗೆ ಬಂದ್‌ ಇಲ್ಲ. ಈ ದಿನಗಳೂ ಸಹ ತೊಗರಿ ವಹಿವಾಟಿನ ಮಾರಾಟ ಪ್ರಕ್ರಿಯೆ ನಡೆಯಲಿದೆ. ಇದನ್ನು ನೋಡಿದರೆ ದಾಲ್‌ ಮಿಲ್‌ ಉದ್ಯಮದ ವ್ಯವಹಾರ ಎಷ್ಟು ಪ್ರಭಾವಶಾಲಿ ಎಂಬುದು ನಿರೂಪಿಸುತ್ತದೆ.

Advertisement

ರೈತರ ಅನ್ಯಾಯಕ್ಕೆ ಕೊನೆ ಇಲ್ಲವೇ? : ಕೋವಿಡ್ 19 ದಿಂದ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ಕಲ್ಲಂಗಡಿ, ಹೂವು ಇತರ ಬೆಳೆಗಳ ಖರೀದಿಗೆ ಮುಂದೆ ಬರುತ್ತಿಲ್ಲ. ಈ ಕಡೆ ಬೆಂಬಲ ಬೆಲೆಯಲ್ಲಿ 20 ಕ್ವಿಂಟಲ್‌ ತೊಗರಿ ಖರೀದಿ ಮಾಡುವುದಾಗಿ ಹೇಳಿದ ಸರ್ಕಾರ ಮಾತಿಗೆ ತಪ್ಪಿ ಕೇವಲ 10 ಕ್ವಿಂಟಲ್‌ ಖರೀದಿ ಮಾಡಿ ಅನ್ಯಾಯ ಮಾಡಿದೆ. ಈ ಕಡೆ ಮಾರುಕಟ್ಟೆಯಲ್ಲೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

 

-ಹಣಮಂತರಾವ್‌ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next