Advertisement

ಕೋವಿಡ್ 19 ಎಫೆಕ್ಟ್: ಮಕ್ಕಳ ಬರುವಿಕೆಯ ನಿರೀಕ್ಷೆಯಲ್ಲಿ ಥಾಯ್‌ ಪೋಷಕರು

01:08 PM Apr 01, 2020 | Suhan S |

ಬ್ಯಾಂಕಾಂಕ್‌:  ಕೋವಿಡ್ 19 ಸೋಂಕಿಗೆ ವ್ಯಾಪಾಕವಾಗಿ ತುತ್ತಾಗಿರುವ ಅಮೆರಿಕದಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ವಿದ್ಯಾಭ್ಯಾಸದ ಕಾರಣಕ್ಕೆ ವಿದೇಶದಲ್ಲಿ ನೆಲೆಸಿರುವವರನ್ನ ಕರೆ ತರಲು ಹಲವು ದೇಶಗಳು ಮುಂದಾಗುತ್ತಿವೆ. ಈಗ ಥಾಯ್‌ ನ ಸರದಿ.

Advertisement

ಥಾಯ್‌ನ ಪೋಷಕರು ತಮ್ಮ ಮಕ್ಕಳ ವಾಪಸಾಗುವಿಕೆಯನ್ನೇ ನಿರೀಕ್ಷಿಸುತ್ತಿದ್ದಾರೆ. ಬ್ಲೆ„ಥ್‌ವುಡ್‌ ಪಟ್ಟಣದಲ್ಲಿ Global Intercultural Exchange  ಯೋಜನೆಯಡಿ ಕೆಲವು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಇಂಟರ್‌ಕಲ್ಚರಲ್‌ ಎಕ್ಸ್‌ಚೇಂಜ್‌ನಲ್ಲಿ ಓದುತ್ತಿರುವ ತನ್ನ ಮಗನ ಎದುರು ನೋಡುತ್ತಿರುವ ಪುದಿತ್‌ ಅಸ್ಸನಮನಿ, ಯಾವುದೇ ಕ್ಷಣದಲ್ಲಿ ಬರಬಹುದೆಂಬ ನಿರೀಕ್ಷೆ ನಮ್ಮದು ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಅಮೆರಿಕದ ಇತರ ನಗರಗಳಿಗೆ ಹೋಲಿಸಿದರೆ ತನ್ನ ಮಗ ಉಳಿದುಕೊಂಡ ನಗರದಲ್ಲಿ ಸೋಂಕಿನ ಪ್ರಮಾಣವು ಕಡಿಮೆ. ಆದರೆ ಯುಎಸ್‌ ಪೂರ್ಣ ಲಾಕ್‌ಡೌನ್‌ಗೆ ಹೋದರೆ ಮಗನನ್ನು ವಾಪಸು ಕರೆ ತರುವುದು ಕಷ್ಟ. ಮನೆಗೆ ಬರಲು ಮಗನೂ ತುಂಬಾ ಆತುರದಲ್ಲಿದ್ದಾನೆ ಎಂದು ಅಸ್ಸನಮನಿ ಹೇಳಿದ್ದಾರೆ. ಹ್ಯಾಂಡ್‌ ಸ್ಯಾನಿಟೈಸರ್‌ಮತ್ತು ಫೇಸ್‌ ಮಾಸ್ಕ್ಗಳು ಬೇಡಿಕೆಯಷ್ಟು ದೊರೆಯುತ್ತಿಲ್ಲ. ಆದರೂ ಕಷ್ಟ ಪಟ್ಟುಕೊಂಡು ಕೊಂಡ ವರನ್ನು ಸಂದೇಹದಿಂದ ನೋಡಲಾಗುತ್ತಿದೆ ಎನ್ನುವ ಅವರು, ಅವನಿಗೆ ಆರೋಗ್ಯ ವಿಮೆ ಇದೆ ಎನ್ನುತ್ತಾರೆ ಅವರು.

ಮತ್ತೂಬ್ಬ ವಿದ್ಯಾರ್ಥಿಯ ತಂದೆ ಪನೋರ್ಜಿತ್‌, ತನ್ನ ಮಗ ಮಾರ್ಚ್‌ 28 ರಂದು ಮನೆಗೆ ಬಂದಿದ್ದಾನೆ. ಅದೃಷ್ಟವಶಾತ್‌, ಫ್ಲೈಟ್‌ ಹತ್ತುವ ಮೊದಲು ಅವರು ಫಿಟ್‌-ಟು-ಫ್ಲೈಟ್ ಪ್ರಮಾಣಪತ್ರ ಮತ್ತು ದೂತಾವಾಸ ಕಚೇರಿಯಿಂದ ಪತ್ರವನ್ನು ಪಡೆದಿದ್ದರು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next