Advertisement

ಬ್ಯಾಂಕಿಂಗ್‌ ಮೇಲೆ ಕೋವಿಡ್ 19 ನೆರಳು

09:55 AM Mar 31, 2020 | Suhan S |

ಕೋವಿಡ್ 19 , ಜನರ ಸಾಮಾಜಿಕ ಮತ್ತು ಅರ್ಥಿಕ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಬ್ಯಾಂಕಿಂಗ್‌ ಅಗತ್ಯದ ಸೇವೆ ಆಗಿರುವುದರಿಂದ, ಉಳಿದ ಇಲಾಖೆಗಳಿಗೆ ನೀಡಿದಂತೆ ದೀರ್ಘ‌ ರಜೆ ಕೊಡಲು ಸಾಧ್ಯವಿಲ್ಲ. ಅಂತೆಯೇ ಸರ್ಕಾರ, ಭಾರತೀಯ ಬ್ಯಾಂಕುಗಳ ಒಕ್ಕೂಟ ಮತ್ತು ಬ್ಯಾಂಕ್‌ ಆಫ್ ಇಂಡಿಯಾ, ಗ್ರಾಹಕರಿಗೆ ಅವಶ್ಯಕ ಸೇವೆ ಒದಗಿಸಲು  ಹಲವಾರು ಕ್ರಮಗಳನ್ನು ತೆಗೆದುಕೊಂಡಿವೆ. ಮಾಸ್ಕ್ ಹಾಕಿದ್ದರಷ್ಟೇ ಪ್ರವೇಶ ಬ್ಯಾಂಕಿಗೆ ಭೇಟಿ ನೀಡುವ ಗ್ರಾಹಕರಿಗ ಸ್ಯಾನಿಟೈಸರ್‌ ನೀಡಲಾಗುತ್ತಿದೆ. ಮಾಸ್ಕ್ ಧರಿಸಿಕೊಂಡೇ ಬರಬೇಕೆಂದು ಗ್ರಾಹಕರಿಗೆ ತಾಕೀತು ಮಾಡಲಾಗಿದೆ.

Advertisement

ಬ್ಯಾಂಕ್‌ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದಾರೆ. ಸ್ಯಾನಿಟೈಸರ್‌ ಬಳಸುತ್ತಿದ್ದಾರೆ. ಗ್ರಾಹಕರಿಗೂ- ಸಿಬ್ಬಂದಿಗೂ ಮಧ್ಯೆ ಲಕ್ಷ್ಮಣ ರೇಖೆ ಎಳೆಯತ್ತಿದ್ದು, ಸೋಷಿಯಲ್‌ ಡಿಸ್ಟೆನ್ಸ್ ಕಾಯ್ದು ಕೊಳ್ಳಲಾಗುತ್ತಿದೆ. ಕೆಲವು ಬ್ಯಾಂಕುಗಳು ವ್ಯವಹಾರದ ಸಮಯವನ್ನು 10- 2ಗಂಟೆ ಅಥವಾ 10.30 ರಿಂದ 2.30 ಗಂಟೆಗೆ ಬದಲಾಯಿಸಿಕೊಂಡಿವೆ. ಬಹುತೇಕ ಬ್ಯಾಂಕುಗಳು ಭೋಜನ ವಿರಾಮದ ನಂತರ ಗ್ರಾಹಕರ ಸೇವೆಯನ್ನು ನಿಲ್ಲಿಸುತ್ತಿವೆ. ಸಿಬ್ಬಂದಿ ಸಂಖ್ಯೆಯನ್ನುಕಡಿಮೆ ಮಾಡಿವೆ.

ಹಣ ಜಮಾ ಮಾಡುವುದು, ಹಣ ಹಿಂಪಡೆಯುವಿಕೆ , ಹಣ ರವಾನೆ, ಚೆಕ್‌ ಡಿಪಾಸಿಟ್‌ ಮಾಡುವುದು, ಚೆಕ್‌ ಕ್ಲಿಯರಿಂಗ್‌ ಮತ್ತು ಸರ್ಕಾರದ ವ್ಯವಹಾರಗಳಿಗೆ ಮಾತ್ರ ಸೇವೆಯನ್ನು ಸೀಮಿತಗೊಳಿಸಲಾಗಿದೆ. ಹೊಸ ಸಾಲ ಸಂಬಂಧಿ ಕೋರಿಕೆಗಳನ್ನು ಪರಿಸ್ಥಿತಿ ಸುಧಾರಿಸುವವರೆಗೆ ತಡೆಹಿಡಿಲಾಗಿದೆಯಂತೆ. ಕೊರೊನಾ ಕಾಟ ಮುಗಿಯುವವರೆಗೆ ಡಿಜಿಟಲ್‌ ವ್ಯವಹಾರದ ಮೂಲಕವೇ ಬ್ಯಾಂಕಿಂಗ್‌ ಸೇವೆ ಪಡೆಯುವಂತೆ ಎಲ್ಲಾ ಬ್ಯಾಂಕ್‌ಗಳೂ ಗ್ರಾಹಕರನ್ನು ವಿನಂತಿಸಿವೆ.

ಇದರ ಜೊತೆಗೆ ಡೆಬಿಟ್‌ ಕಾರ್ಡ್‌ ಮೂಲಕ ಹಣ ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸುವ ಮೂಲಕ ಗ್ರಾಹಕರ ಬ್ಯಾಂಕ್‌ ಭೇಟಿಗೆ ಕಡಿವಾಣಹಾಕಲಾಗಿದೆ. ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ 24 ಗಂಟೆಯೂ ದೊರಕುವಂತೆ ವ್ಯವಸ್ಥೆಮಾಡಿದೆ. ಸೇವಾಕ್ಷೇತ್ರ ತಲ್ಲಣ ಕರ್ನಾಟಕದಲ್ಲಿ 6.5 ಲಕ್ಷ ಸಣ್ಣ ಉದ್ಯಮಗಳು ಉತ್ಪಾದನೆ ನಿಲ್ಲಿಸಿವೆ. ಇದರಿಂದ 10,000 ಕೋಟಿ ರೂ. ಉತ್ಪಾದನಾ ನಷ್ಟವಾಗುತ್ತಿದೆ. ಈ ಹಣ ಬ್ಯಾಂಕುಗಳ ಮೂಲಕವೇ ಹರಿಯುತ್ತಿತ್ತು ಎನ್ನುವುದು ವಿಶೇಷ.

ಈ ಉದ್ಯಮಗಳಲ್ಲಿ ಸುಮಾರು 70 ಲಕ್ಷ ದುಡಿಯುತ್ತಿದ್ದಾರೆ ಎನ್ನುವುದು ಇನ್ನೊಂದು ಅತಂಕದ ವಿಷಯ. ಸತ್ವಪರೀಕ್ಷೆಯ ಕಾಲ ಮಾರ್ಚ್‌ ತಿಂಗಳು, ಬ್ಯಾಂಕುಗಳಿಗೆ ಒಂದು ರೀತಿಯಲ್ಲಿ ಟೆಸ್ಟಿಂಗ್‌ ಸಮಯ. ಈ ತಿಂಗಳಲ್ಲಿ ಅವು ಹೆಚ್ಚಿನ ಠೇವಣಿ, ಸಾಲ ನೀಡಿಕೆ ಮತ್ತು ಕಡಿಮೆ ಅನುತ್ಪಾದಕ ಸಾಲಗಳನ್ನು ತೋರಿಸಬೇಕಾಗಿರುತ್ತದೆ. ಆದರೆ, ಈಗ ಹೆಚ್ಚಿನ ಬ್ಯಾಂಕುಗಳು ಯಾವುದೇ ಮಾನದಂಡವನ್ನು ತಲುಪಲಾಗದ ಭಯದಲ್ಲಿ ಇವೆ. ಅನುತ್ಪಾದಕ ಸಾಲವನ್ನು ಗುರುತಿಸುವ ಮತ್ತು ವರ್ಗೀಕರಿಸುವ ಮಾನದಂಡವನ್ನು ಬದಲಿಸಬೇಕು ಮತ್ತು ಕೆಲವು ವಿನಾಯಿತಿಗಳನ್ನು ನೀಡಬೇಕು ಎಂದು ರಿಸರ್ವ್‌ ಬ್ಯಾಂಕ್‌ ಮತ್ತು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ.

Advertisement

ಕೋವಿಡ್ 19 ವಿರುದ್ಧ ಹೋರಾಡುವ ಸರ್ಕಾರದ ಪ್ರತಿಯೊಂದು ಕ್ರಮಗಳ ಫ‌ಲಶ್ರುತಿಗೆ ಬ್ಯಾಂಕುಗಳೇ ಡೆಲಿವರಿ ಪಾಯಿಂಟ್‌ಗಳು. ಬಹುತೇಕ ಎಲ್ಲಾ ಬ್ಯಾಂಕುಗಳ ಬ್ಯಾಲೆನ್ಸ್‌ ಶೀಟ್‌ ಕೋವಿಡ್ 19 ದಿಂದ ಕೆಂಪಾಗುವ ಲಕ್ಷಣ ಕಾಣುತ್ತಿದೆ.­

 

-ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next