Advertisement

ಹೃದಯದ ಮೇಲೂ ಕೋವಿಡ್‌ ಪರಿಣಾಮ ಬೀರಲಿದೆ! ಅಧ್ಯಯನ ವರದಿ

04:07 PM Aug 02, 2020 | sudhir |

ಬರ್ಲಿನ್‌ : ಕೋವಿಡ್‌ ಮೂಲ, ಗುಣಲಕ್ಷಣಗಳು ಹಾಗೂ ಅದರ ಪರಿಣಾಮಗಳ ಕುರಿತು ಅಧ್ಯಯನ ನಡೆಯುತ್ತಲೇ ಇದೆ. ನ್ಯುಮೋನಿಯಾ ರೀತಿಯ ಲಕ್ಷಣಗಳಿಂದ ಆರಂಭವಾದ ಕೋವಿಡ್‌ ಶ್ವಾಸಕೋಶ ಮಾತ್ರವಲ್ಲದೇ ದೇಹದ ನಾನಾ ಅಂಗಾಂಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ.

Advertisement

ಇದೀಗ ಹೊಸ ಅಧ್ಯಯನವೊಂದು ನಡೆದಿದ್ದು, ವರದಿಯ ಪ್ರಕಾರ ಕೋವಿಡ್‌ ಹೃದಯ ರಕ್ತನಾಳದ ಅಪಾಯ ಉಲ್ಬಣಗೊಳಿಸುತ್ತದೆ ಎಂದು ಹೇಳಿದ್ದು, ಈ ಸೋಂಕು ಹೃದಯದ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಈ ಅಧ್ಯಯನ ವರದಿಯೂ ಪೀರ್‌ ರಿವ್ಯೂಡ್‌ ಜರ್ನಲ್‌ ಜಮಾ ಕಾರ್ಡಿಯಾಲಜಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಸೋಂಕಿನಿಂದ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾದವ‌ರ ಪೈಕಿ ಶೇ.78 ರಷ್ಟು ಕೋವಿಡ್‌ ರೋಗಿಗಳು ಚೇತರಿಸಿಕೊಂಡ ಕೆಲ ತಿಂಗಳಗಳಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಅಧ್ಯಯನಕ್ಕಾಗಿ ಫ್ರಾಂಕ್ ಫರ್ಟ್‌ ವಿಶ್ವವಿದ್ಯಾಲಯ ಆಸ್ಪತ್ರೆಯಿಂದ ಏಪ್ರಿಲ್‌ ಮತ್ತು ಜೂನ್‌ 2020ರ ನಡುವೆ ಚೇತರಿಸಿಕೊಂಡ ಸುಮಾರು 100 ಕೋವಿಡ್‌ ರೋಗಿಗಳ ಆರೋಗ್ಯ ಸ್ಥಿತಿಯ ಕುರಿತು ವಿಶ್ಲೇಷಿಸಿದ್ದು, ಕೇವಲ ಶೇ.78ರಷ್ಟು ರೋಗಿಗಳಲ್ಲಿ ಹೃದಯದ ಚಟುವಟಿಕೆ ಸಮರ್ಪಕವಾಗಿರುವುದನ್ನು ಎಂಆರ್‌ಐ ತೋರಿಸಿದೆ.

ಇದರೊಂದಿಗೆ ಸೋಂಕು ಮುಕ್ತರಾದ ಶೇ.60ರಷ್ಟು ಕೋವಿಡ್ ರೋಗಿಗಳಲ್ಲಿ ಹೃದಯದ ಉರಿಯೂತ ಸಮಸ್ಯೆಯೂ ಕಂಡು ಬಂದಿದ್ದು, ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರು ಮನೆಯಲ್ಲೇ ಚೇತರಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next