Advertisement

ಕ್ವಾರಂಟೈನ್‌ನಲ್ಲಿದ್ದವರ ಸಂಖ್ಯೆ ಇಳಿಕೆ: ನಿರಾಳ

03:31 PM Apr 12, 2020 | mahesh |

ಮುಳಬಾಗಿಲು: ಜಿಲ್ಲೆಯಲ್ಲಿ ಕ್ವಾರೆಂಟೆನ್‌ನಲ್ಲಿ ಇದ್ದ 366 ಮಂದಿಯಲ್ಲಿ 117ಕ್ಕೆ ಇಳಿದು ಕೊರೊನಾ ಸೋಂಕು ರಹಿತ ಜಿಲ್ಲೆಯಾಗಿದೆ. ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕೋಲಾರ ಸೇಪ್‌ ಆಗಿದೆ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

Advertisement

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್ಸಿಲೊರ್‌ ಆಫ್ ಫೌಂಡೇಷನ್‌ (ಇಎಸ್‌ಎಸ್‌ಐ-ಎಲ್‌ಒಆರ್‌) ವತಿಯಿಂದ ಸಿಬ್ಬಂದಿಗೆ ನೀಡಲಾದ ಕೊರೊನಾ ತಡೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಈಗಾಗಲೇ ಕೆಲವು ಕಡೆ ಸೀಲ್‌ಡೌನ್‌ಗೆ ಮುಂದಾಗಿರುವಾಗ ನಮ್ಮ ಜಿಲ್ಲೆಗೆ ಅಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಕುರಿತು ನಿರ್ಲಕ್ಷ್ಯ ಮಾಡದೆ ಸರ್ಕಾರದ ಆಜ್ಞೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದರು.

ದಿನೇ ದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜನ ಸಾಮಾನ್ಯರು ಸಹ ಈ ಕುರಿತು ಎಚ್ಚರಗೊಳ್ಳಬೇಕಿದೆ. ಸುಖ ಸುಮ್ಮನೆ ಮನೆ ಬಿಟ್ಟು ಹೊರಬಂದು ಕೋವಿಡ್-19 ಸ್ವಾಗತಕ್ಕೆ ಕಾರಣರಾಗಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಎಸ್ಸಿಲೊರ್‌ ಫೌಂಡೇಷನ್‌ ಮುಖ್ಯಸ್ಥ ಕೆ.ವಿ.ಮಹೇಶ್‌, ವಿಜಯಕುಮಾರ್‌, ಮಹಂತೇಶ್‌, ಜಿಪಂ ಮಾಜಿ ಸದಸ್ಯ ಬಿ. ಕೆ.ವೆಂಕಟನಾರಾಯಣ್‌, ಜಿಲ್ಲಾ ಆರೋ
ಗ್ಯಾಧಿಕಾರಿ ಡಾ.ವಿಜಯ ಕುಮಾರ್‌, ತಹಶೀಲ್ದಾರ್‌ ಕೆ.ಎನ್‌ರಾಜಶೇಖರ್‌, ಇಒ ಎಂ.ಬಾಬು, ಪೌರಾಯುಕ್ತ ಜಿ.ಶ್ರೀನಿ ವಾಸಮೂರ್ತಿ, ತಾಲೂಕು ಆರೋಗ್ಯಾಧಿ
ಕಾರಿ ಡಾ.ವರ್ಣಶ್ರೀ, ಆಡಳಿತ ವೈದ್ಯಾಧಿಕಾರಿ ಡಾ.ವೇಣುಗೋಪಾಲ್‌, ಆರೋಗ್ಯ ಸಮಿತಿ ಸದಸ್ಯ ನೇತಾಜಿನಗರ ಅಮರ್‌, ನಗರಸಭೆ, ಆಸ್ಪತ್ರೆ ಸಿಬ್ಬಂದಿ ಇದ್ದರು. ಆರೋಗ್ಯ ಸಿಬ್ಬಂದಿಗೆ ವೈದ್ಯಕೀಯ ಕಿಟ್‌ ವಿತರಿಸಿದ ಸಚಿವ ನಾಗೇಶ್‌

Advertisement

Udayavani is now on Telegram. Click here to join our channel and stay updated with the latest news.

Next