Advertisement
ನ್ಯೂಯಾರ್ಕ್: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಸೋಂಕಿನಿಂದ ಬಹುದೊಡ್ಡ ಮಟ್ಟದಲ್ಲಿ ಸಾವಿನಿಂದ ಮಕ್ಕಳು ಪರಾರಿಯಾಗಿದ್ದಾರೆ. ಆದರೆ ಇದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮ ಕೋಟ್ಯಂತರ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
Related Articles
ಮನೆಯ ಆದಾಯ ಪ್ರಮಾಣ ಕಡಿಮೆಯಾಗಿರುವುದರಿಂದ ಬಡ ಕುಟುಂಬಗಳ ಸಂಖ್ಯೆ ಹೆಚ್ಚಾಗಲಿದೆ. ಅಗತ್ಯ ಆರೋಗ್ಯ ಮತ್ತು ಆಹಾರ ಪದಾರ್ಥಗಳ ಕೊರತೆಯಿಂದ ವಿಶೇಷವಾಗಿ ಮಕ್ಕಳ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ. ಈ ಮಹಾಮಾರಿಯಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತ ಕಂಡಿದ್ದು, ಇದು 2020ರಲ್ಲಿ ಸಾವಿರಾರು ಮಕ್ಕಳ ಸಾವಿಗೆ ಕಾರಣವಾಗಬಹುದು. ಮಾತ್ರವಲ್ಲದೇ ಹಿಂದಿನ ಎರಡು ಮೂರು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿದ್ದ ಮಕ್ಕಳ ಸಾವಿನ ಸಂಖ್ಯೆ ಇದೊಂದೇ ವರ್ಷದಲ್ಲಿ ಹೆಚ್ಚಲಿದೆ. 2021ರಲ್ಲಿ ಹೆಚ್ಚುವರಿಯಾಗಿ ಸಾವಿರಾರು ಮಕ್ಕಳು ಸಾವನ್ನಪ್ಪಲಿದ್ದಾರೆ ಎಂದು ವರದಿ ಹೇಳಿದೆ.
Advertisement
1.5 ಬಿಲಿಯನ್ ಮಕ್ಕಳ ಮೇಲೆ ಪರಿಣಾಮಈಗಾಗಲೇ 188 ದೇಶಗಳು ಕೋವಿಡ್-19ನಿಂದ ಶಾಲೆಗಳನ್ನು ಮುಚ್ಚಿವೆ. ಈ ಬೆಳವಣಿಗೆ 1.5 ಬಿಲಿಯನ್ ಮಕ್ಕಳ ಮತ್ತು ಯುವಜನರ ಮೇಲೆ ಪರಿಣಾಮ ಬೀರಿದ್ದು, 143 ದೇಶಗಳ 369 ಮಿಲಿಯನ್ ಶಾಲಾ ಮಕ್ಕಳು ಶಾಲೆಯಲ್ಲಿ ನೀಡುತ್ತಿದ್ದ ಪೌಷ್ಠಿಕಾಂಶದ ಊಟ ಇಲ್ಲದೆ ಅನ್ಯ ಮಾರ್ಗವನ್ನು ಅವಲಂಬಿಸುವಂತಾಗಿದೆ ಎಂದು ಮತ್ತೂಂದು ವರದಿ ತಿಳಿಸಿದೆ. ಆರ್ಥಿಕ ಹಿಂಜರಿತ ಮತ್ತು ಆದಾಯ ಬಗ್ಗೆ ಪರಿಶೀಲನೆ ನಡೆಸಿರುವ ಸಂಸ್ಥೆಯೊಂದರ ವರದಿಯು, ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಮಕ್ಕಳು ಮತ್ತು ಯುವಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗುಟೆರೆಸ್ ಎಲ್ಲಾ ರಾಷ್ಟ್ರಗಳನ್ನು ಒತ್ತಾಯಿಸಿದೆ.ಅತಿ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಹಣದ ಸಹಾಯ ಮಾಡುವಂತೆಯೂ ಕೋರಿದೆ.