ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ತೃತೀಯ ಲಿಂಗಿಗೆ 1,500 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ:ಸಮಾಜ ಸೇವೆಯ ಹೆಸರಿನಲ್ಲಿ ಸ್ವಜಾತಿ ಮೆರೆಯುವುದು ಸರಿಯಲ್ಲ : ಉಪ್ಪಿ ಸೇವೆಗೆ ಚೇತನ್ ಟೀಕೆ
ಭಾರತದಲ್ಲಿನ ಪ್ರಸ್ತುತ ಕೋವಿಡ್ 19 ಎರಡನೇ ಅಲೆ ಹಾಗೂ ಲಾಕ್ ಡೌನ್ ನಿಂದಾಗಿ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ತೃತೀಯ ಲಿಂಗಿಗಳ ಸಮುದಾಯದ ಸದಸ್ಯರು ಇ-ಮೇಲ್ ಹಾಗೂ ಕರೆಗಳ ಮೂಲಕ ಆರ್ಥಿಕ ನೆರವಿನ ಬೆಂಬಲ ಕೋರಿರುವುದಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ತೃತೀಯ ಲಿಂಗಿಗಳ ಮೂಲಭೂತ ಅವಶ್ಯಕತೆ ಪೂರೈಸಲು ಜೀವನಾಧಾರ ಭತ್ಯೆಯನ್ನು ತಕ್ಷಣದ ನೆರವನ್ನಾಗಿ ಒದಗಿಸಲಾಗುವುದು ಎಂದು ವಿವರಿಸಿದೆ.
ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ಕಾರ್ಯನಿರ್ವಹಿಸುವ ಎನ್ ಜಿಒ ಮತ್ತು ಸಮುದಾಯ ಆಧಾರಿತ ಸಂಸ್ಥೆಗಳು ಈ ತುರ್ತು ಆರ್ಥಿಕ ನೆರವಿನ ಬಗ್ಗೆ ಜಾಗೃತಿ ಮೂಡಿಸಲು ಕೋರಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ಯಾವುದೇ ತೃತೀಯ ಲಿಂಗಿ ಅಥವಾ ಟ್ರಾನ್ಸ್ ಜೆಂಡರ್ ಪರವಾಗಿ ಕೆಲಸ ಮಾಡುವ ಸಂಸ್ಥೆಗಳು ಆಧಾರ್ ಮತ್ತು ಬ್ಯಾಂಕ್ ಖಾತೆಯ ಪ್ರಾಥಮಿಕ ವಿವರಗಳನ್ನು ನೀಡಿದ ನಂತರ ಹಣಕಾಸಿನ ನೆರವು ಪಡೆಯಲು(https://forms.gle/H3BcREPCy3nG6TpH7) ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದೆ.