Advertisement

ಚಾಮರಾಜನಗರ ಜಿಲ್ಲೆಯಲ್ಲಿ ಇಳಿಮುಖ ಕಂಡ ಕೋವಿಡ್ 19 ಸೋಂಕು ಪ್ರಕರಣ ಸಂಖ್ಯೆ

07:15 PM Aug 26, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Advertisement

ಬುಧವಾರ ಪರೀಕ್ಷಿಸಿದ 727 ಮಾದರಿಗಳ ಪೈಕಿ 45 ಮಾತ್ರ ಪಾಸಿಟಿವ್ ಆಗಿವೆ. 32 ಮಂದಿ ಗುಣಮುಖರಾಗಿದ್ದಾರೆ.

ಇದೇ ತಿಂಗಳ 19 ರಂದು ದಿನದ ಪ್ರಕರಣಗಳ ಸಂಖ್ಯೆ ಶತಕ (105) ದಾಟಿತ್ತು. 20 ರಂದು 118 ಪ್ರಕರಣಗಳು ಪತ್ತೆಯಾಗಿದ್ದವು.

ಆದರೆ ಅಚ್ಚರಿಯೆಂಬಂತೆ, 21 ರಂದು 59, 22 ರಂದು 51, 23 ರಂದು 24 ಪ್ರಕರಣಗಳು, 24ರಂದು 30, 25ರಂದು 40 ಪ್ರಕರಣಗಳು ವರದಿಯಾಗಿವೆ. ಮಂಗಳವಾರ 756 ಮಾದರಿಗಳ ಪೈಕಿ 40 ಮಾತ್ರ ಪಾಸಿಟಿವ್ ಆಗಿದ್ದವು.

ಬುಧವಾರ 727 ಮಾದರಿಗಳಲ್ಲಿ 45 ಮಾತ್ರ ಪಾಸಿಟಿವ್ ಆಗಿವೆ.  ದಿನದ ಪ್ರಕರಣಗಳು ಶತಕದ ಗಡಿ ದಾಟಿದ್ದ ಸಂದರ್ಭದಲ್ಲಿ ಆರ್ಧ ಶತಕದ ಅಂಚಿನಲ್ಲಿರುವುದು ಕೊಂಚ ಸಮಾಧಾನ ಮೂಡಿಸಿದೆ. ಆದರೆ ಇದೇ ರೀತಿ ಇಳಿಮುಖ ಮುಂದುವರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Advertisement

ಇಬ್ಬರು ಕೋವಿಡ್ ಸೋಂಕಿತರು ಮೃತಪಟ್ಟಿರುವ ವರದಿಯನ್ನು ಬುಧವಾರ ನೀಡಲಾಗಿದೆ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯ 71 ವರ್ಷದ ವೃದ್ಧ ಆ. 25ರಂದು ಹಾಗೂ ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿಯ 60 ವರ್ಷದ ವೃದ್ಧೆ ಆ. 24 ರಂದು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 451 ಸಕ್ರಿಯ ಪ್ರಕರಣಗಳಿವೆ. ಒಟ್ಟು ಪ್ರಕರಣಗಳು 2154. ಇವರಲ್ಲಿ 1660 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 43 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

20 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 199 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದಿನ ಪ್ರಕರಣಗಳು-45

ಇಂದು ಗುಣಮುಖ-32

ಒಟ್ಟು ಗುಣಮುಖ-1660

ಇಂದಿನ ಸಾವು-02

ಒಟ್ಟು ಸಾವು-43

ಸಕ್ರಿಯ ಪ್ರಕರಣಗಳು-451

ಒಟ್ಟು ಸೋಂಕಿತರು-2154

Advertisement

Udayavani is now on Telegram. Click here to join our channel and stay updated with the latest news.

Next